ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಬಗ್ಗೆ ಮಾತನಾಡಿರುವ 2 ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು, ‘ಫಿಸಿಯೋ, ಕೋಚ್ ಸೇರಿದಂತೆ ಸಂಪೂರ್ಣ ತರಬೇತಿ ಸೌಲಭ್ಯ ಸಿಗಲಿರುವ ಕಾರಣ ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ್ದೇನೆ. ಸಮಯ ಸಿಕ್ಕಾಗಲೆಲ್ಲಾ ಇಲ್ಲಿಗೆ ಬಂದು ಅಭ್ಯಾಸ ನಡೆಸುತ್ತೇನೆ’ ಎಂದಿದ್ದಾರೆ.
ಬೆಂಗಳೂರು(ನ.19): ಕಳೆದೊಂದು ವರ್ಷದಿಂದ ಸತತ ಗಾಯ ಹಾಗೂ ಕಳಪೆ ಪ್ರದರ್ಶನ ನೀಡುತ್ತಿರುವ ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು 2024ರ ಪ್ಯಾರಿಸ್ ಒಲಿಂಪಿಕ್ಸ್ ದೃಷ್ಟಿಯಿಂದ ಬೆಂಗಳೂರಿನ ಪ್ರಕಾಶ್ ಪಡುಕೋಣೆ ಮಾರ್ಗದರ್ಶನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಸಿಂಧು ಇತ್ತೀಚಿನ ಟೂರ್ನಿಗಳಲ್ಲಿ ನಿರೀಕ್ಷಿತ ಆಟವಾಡಲು ವಿಫಲರಾಗುತ್ತಿದ್ದು, ಜೊತೆಗೆ ಸತತವಾಗಿ ಗಾಯಗೊಳ್ಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಬಗ್ಗೆ ಮಾತನಾಡಿರುವ 2 ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು, ‘ಫಿಸಿಯೋ, ಕೋಚ್ ಸೇರಿದಂತೆ ಸಂಪೂರ್ಣ ತರಬೇತಿ ಸೌಲಭ್ಯ ಸಿಗಲಿರುವ ಕಾರಣ ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ್ದೇನೆ. ಸಮಯ ಸಿಕ್ಕಾಗಲೆಲ್ಲಾ ಇಲ್ಲಿಗೆ ಬಂದು ಅಭ್ಯಾಸ ನಡೆಸುತ್ತೇನೆ’ ಎಂದಿದ್ದಾರೆ.
undefined
ಯಾವುದೇ ಮ್ಯಾಚ್ ಮಿಸ್ ಮಾಡೋಲ್ಲ ಬಿಲಿಯನೇರ್ ಅಂಬಾನಿ ಫ್ಯಾಮಿಲಿ, ಕ್ರಿಕೆಟ್ ಜೊತೆ ಇರೋ ನಂಟೇನು?
ರಾಷ್ಟ್ರೀಯ ಹಾಕಿ: ರಾಜ್ಯಕ್ಕೆ ಇಂದು ಶುಭಾರಂಭ ನಿರೀಕ್ಷೆ
ಚೆನ್ನೈ: 13ನೇ ರಾಷ್ಟ್ರೀಯ ಪುರುಷರ ಹಾಕಿ ಚಾಂಪಿಯನ್‌ಶಿಪ್‌ನ ಮೊದಲ ಪಂದ್ಯದಲ್ಲಿ ಭಾನುವಾರ ಕರ್ನಾಟಕ ತಂಡ ದಾದರ್-ನಗರ್ ಹವೇಲಿ ವಿರುದ್ಧ ಸೆಣಸಾಡಲಿದೆ. ಕಳೆದ ವರ್ಷ 3ನೇ ಸ್ಥಾನಿಯಾಗಿದ್ದ ಕರ್ನಾಟಕ ತಂಡ ಈ ಬಾರಿ ‘ಸಿ’ ಗುಂಪಿನಲ್ಲಿ ಬಿಹಾರ ಹಾಗೂ ದಾದರ್-ನಗರ್ ಹವೇಲಿ ತಂಡಗಳೊಂದಿಗೆ ಸ್ಥಾನ ಪಡೆದಿದೆ. ನ.20ರಂದು ಬಿಹಾರವನ್ನು ಎದುರಿಸಲಿದೆ. ಒಟ್ಟು 29 ತಂಡಗಳನ್ನು 8 ಗುಂಪುಗಳನ್ನಾಡಿ ವಿಂಗಡಿಸಲಾಗಿದ್ದು, 3 ಗುಂಪುಗಳಲ್ಲಿ ತಲಾ 3 ಇನ್ನುಳಿದ 5 ಗುಂಪುಗಳಲ್ಲಿ ತಲಾ 4 ತಂಡಗಳಿವೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ.
ರಾಹುಲ್ ದ್ರಾವಿಡ್‌ಗಾಗಿ ಈ ವಿಶ್ವಕಪ್ ಗೆಲ್ಲಬೇಕು, ನಾಯಕ ರೋಹಿತ್ ಮಾತಿಗೆ ಫ್ಯಾನ್ಸ್ ಪ್ರತಿಕ್ರಿಯೆ!
ಡೋಪ್ ಟೆಸ್ಟ್ ಫೇಲಾದ ಪ್ಯಾರಾ ಅಥ್ಲೀಟ್ ನೀರಜ್ ಯಾದವ್
ನವದೆಹಲಿ: ಇತ್ತೀಚೆಗಷ್ಟೇ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದ ಭಾರತದ ತಾರಾ ಅಥ್ಲೀಟ್ ನೀರಜ್ ಯಾದವ್ ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿದ್ದು, ಚಿನ್ನದ ಪದಕ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ.
ಹ್ಯಾಂಗ್ಝೋ ಏಷ್ಯನ್ ಗೇಮ್ಸ್‌ಗೆ ತೆರಳುವ ಮುನ್ನ ನೀರಜ್ ಬೆಂಗಳೂರಿನಲ್ಲಿ ಡೋಪ್ ಪರೀಕ್ಷೆಗೆ ಒಳಗಾಗಿದ್ದರು. ಸದ್ಯ ಅವರ ವರದಿ ಬಂದಿದ್ದು, ನಿಷೇಧಿತ ಮದ್ದು ಸೇವಿಸಿದ್ದು ಪತ್ತೆಯಾಗಿದೆ. ಅವರು ತಪ್ಪಿತಸ್ಥರು ಎಂದು ಕಂಡುಬಂದರೆ ಎರಡು ಪದಕಗಳನ್ನು ಕಳೆದುಕೊಳ್ಳಲಿದ್ದಾರೆ. ಇದರೊಂದಿಗೆ 29 ಚಿನ್ನ ಸೇರಿ 111 ಪದಕ ಗೆದ್ದು ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದ ಭಾರತ 6ನೇ ಸ್ಥಾನಕ್ಕೆ ಕುಸಿಯಲಿದೆ. 29 ಚಿನ್ನ ಸೇರಿ 95 ಪದಕ ಗೆದ್ದು 6ನೇ ಸ್ಥಾನದಲ್ಲಿದ್ದ ಇಂಡೋನೇಷ್ಯಾ 1 ಸ್ಥಾನ ಮೇಲೇರಲಿದೆ.