ಸಯ್ಯದ್ ಮೋದಿ ಟೂರ್ನಿಯಿಂದ ಹಿಂದೆ ಸರಿದ ಪಿ.ವಿ. ಸಿಂಧು!

Published : Nov 19, 2018, 09:58 AM IST
ಸಯ್ಯದ್ ಮೋದಿ ಟೂರ್ನಿಯಿಂದ ಹಿಂದೆ ಸರಿದ ಪಿ.ವಿ. ಸಿಂಧು!

ಸಾರಾಂಶ

ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧೂ ಪ್ರತಿಷ್ಠಿತ ಸಯ್ಯದ್ ಮೋದಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಸಿಂಧೂ ದಿಢೀರ್ ನಿರ್ಧಾರಕ್ಕೆ ಕಾರಣವೇನು? ಇಲ್ಲಿದೆ ಹೆಚ್ಚಿನ ವಿವರ.

ನವದೆಹಲಿ(ನ.19): ಹಾಲಿ ಚಾಂಪಿಯನ್ ಪಿ.ವಿ.ಸಿಂಧು, ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. 23 ವರ್ಷದ ಸಿಂಧು, ಡಿಸೆಂಬರ್‌ನಲ್ಲಿ ಚೀನಾದ ಗುವಾಂಗ್ಜೌನಲ್ಲಿ ನಡೆಯಲಿರುವ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಟೂರ್ನಿಯಿಂದ ಹಿಂದೆ ಸರಿಯುವ ನಿರ್ಧಾರಕೈಗೊಂಡಿರುವುದಾಗಿ ಹೇಳಿದ್ದಾರೆ. 

ವಿಶ್ವ ನಂ.3 ಸಿಂಧು, ‘ವರ್ಲ್ಡ್ ಟೂರ್ ಫೈನಲ್ಸ್‌ಗೆ ಸಿದ್ಧತೆ ನಡೆಸುವುದಕ್ಕೆ ಹೆಚ್ಚು ಗಮನಹರಿಸಬೇಕಿದೆ. ಹಾಗಾಗಿ ಸಯ್ಯದ್ ಮೋದಿ ಟೂರ್ನಿಯಿಂದ ಹಿಂದೆ ಸರಿಯಲು ಅನುಮತಿ ನೀಡಬೇಕು ಎಂದು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ(ಬಿಎಐ)ಗೆ ಸಿಂಧು ಪತ್ರ ಬರೆದಿದ್ದಾರೆ’ ಎಂದು ಸಿಂಧು ಅವರ ತಂದೆ ಹೇಳಿದ್ದಾರೆ.

ಸಿಂಧೂ ಮನವಿಯನ್ನ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಪುರಸ್ಕರಿಸಿದೆ. ಹೀಗಾಗಿ ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೋವಾ ವಿಡಿಯೋದಿಂದ ಸಾರಾ ತೆಂಡೂಲ್ಕರ್ ಟ್ರೋಲ್, ತಂದೆ ಮದ್ಯ ವಿರೋಧಿ ನಿಲುವು ನೆನಪಿಸಿದ ನೆಟ್ಟಿಗರು
ಗಂಭೀರ ಸ್ಥಿತಿಯಲ್ಲಿ ಕೋಮಾಕ್ಕೆ ಜಾರಿದ ಆಸೀಸ್‌ ದಿಗ್ಗಜ ಕ್ರಿಕೆಟರ್‌ ಡೇಮಿಯನ್‌ ಮಾರ್ಟಿನ್‌, ಅಪ್‌ಡೇಟ್‌ ನೀಡಿದ ಗಿಲ್‌ಕ್ರಿಸ್ಟ್‌!