ಡೆನ್ಮಾರ್ಕ್‌ ಓಪನ್‌ 2023: ಪಿ ವಿ ಸಿಂಧು ಶುಭಾರಂಭ

By Kannadaprabha News  |  First Published Oct 18, 2023, 1:54 PM IST

ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಲ್ಲಿ ಸಿಂಧು ಸ್ಕಾಟ್ಲೆಂಡ್‌ನ ಕ್ರಿಸ್ಟಿ ಗಿಲ್ಮೋರ್ ವಿರುದ್ದ 21-14, 18-21, 21-10ರಲ್ಲಿ ಗೆಲುವು ಸಾಧಿಸಿದರು. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ನಂ.1 ಶ್ರೀಕಾಂತ್ ಚೀನಾದ ವೆಂಗ್ ಹ್ಯಾಂಗ್ ಯಂಗ್ ವಿರುದ್ದ 21-19, 10-21, 16-21ರಲ್ಲಿ ಪರಾಭವಗೊಂಡರು.


ಒಡೆನ್ಸ್(ಅ.18): ಭಾರತದ ತಾರಾ ಶಟ್ಲರ್ ಪಿ.ವಿ. ಸಿಂಧು ಮಂಗಳವಾರ ಆರಂಭಗೊಂಡ ಡೆನ್ಮಾರ್ಕ್‌ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಆದರೆ ನೀರಸ ಪ್ರದರ್ಶನ ಮುಂದುವರಿಸಿದ ಕಿದಂಬಿ ಶ್ರೀಕಾಂತ್ ಹಾಗೂ ಲಕ್ಷ್ಯ ಸೇನ್ ಮೊದಲ ಸುತ್ತಲ್ಲೇ ಸೋತು ಹೊರಬಿದ್ದಿದ್ದಾರೆ.

ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಲ್ಲಿ ಸಿಂಧು ಸ್ಕಾಟ್ಲೆಂಡ್‌ನ ಕ್ರಿಸ್ಟಿ ಗಿಲ್ಮೋರ್ ವಿರುದ್ದ 21-14, 18-21, 21-10ರಲ್ಲಿ ಗೆಲುವು ಸಾಧಿಸಿದರು. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ನಂ.1 ಶ್ರೀಕಾಂತ್ ಚೀನಾದ ವೆಂಗ್ ಹ್ಯಾಂಗ್ ಯಂಗ್ ವಿರುದ್ದ 21-19, 10-21, 16-21ರಲ್ಲಿ ಪರಾಭವಗೊಂಡರು. ಶ್ರೀಕಾಂತ್ ಈ ವರ್ಷ 15 ಟೂರ್ನಿಗಳಲ್ಲಿ 7ನೇ ಬಾರಿಗೆ ಮೊದಲ ಸುತ್ತಲ್ಲೇ ಹೊರಬಿದ್ದರು. ಇನ್ನು ಲಕ್ಷ್ಯ ಸೆನ್‌, ಥಾಯ್ಲೆಂಡ್‌ನ ಕಾಂಟೊಫೊನ್ ವಿರುದ್ದ 16-21, 18-21ರಲ್ಲಿ ಸೋಲುಂಡದರು.

Latest Videos

undefined

ಅಧಿಕೃತ ಜೆರ್ಸಿ ತೊಡದ್ದಕ್ಕೆ ಟೆನಿಸಿಗ ಶಶಿಗೆ ಸಂಕಷ್ಟ!

ನವದೆಹಲಿ: ಕಳೆದ ತಿಂಗಳು ಮೊರಾಕ್ಕೊ ವಿರುದ್ಧದ ಡೇವಿಸ್‌ ಕಪ್‌ ಪಂದ್ಯದ ವೇಳೆ ತಂಡದ ಅಧಿಕೃತ ಜೆರ್ಸಿ ತೊಡದ್ದಕ್ಕೆ ಭಾರತದ ತಾರಾ ಟೆನಿಸಿಗ ಶಶಿಕುಮಾರ್‌ ಮುಕುಂದ್‌ಗೆ ಸಂಕಷ್ಟ ಎದುರಾಗಿದೆ. ಅಖಿಲ ಭಾರತೀಯ ಟೆನಿಸ್‌ ಸಂಸ್ಥೆ(ಎಐಟಿಎ)ಯಿಂದ ಮುಕುಂದ್‌ಗೆ ಈಗಾಗಲೇ ನೋಟಿಸ್‌ ಜಾರಿಗೊಳಿಸಿ ಸ್ಪಷ್ಟನೆ ಪಡೆದಿದೆ. ಜೊತೆಗೆ ಆಟಗಾರರಿಗೆ ನೀತಿ ಸಂಹಿತೆಯನ್ನೂ ಜಾರಿಗೊಳಿಸಿದೆ.

ಮುಷ್ತಾಕ್‌ ಅಲಿ ಟಿ20ಯಲ್ಲಿ ಪಂಜಾಬ್‌ ಹೊಸ ದಾಖಲೆ! ಯುವರಾಜ್ ಸಿಂಗ್ ಅಪರೂಪದ ದಾಖಲೆ ನುಚ್ಚುನೂರು

ಪಂದ್ಯದ ಮೊದಲ ಸಿಂಗಲ್ಸ್‌ನಲ್ಲಿ ಮುಕುಂದ್‌ ತಂಡದ ಅಧಿಕೃತ ಜೆರ್ಸಿ ಬದಲು ತಮಗೆ ಪ್ರಾಯೋಜಕತ್ವ ನೀಡಿದ್ದ ಸಂಸ್ಥೆಯ ಜೆರ್ಸಿ ಧರಿಸಿದ್ದರು. ಅಲ್ಲದೆ ಜೆರ್ಸಿಯಲ್ಲಿ ‘ಇಂಡಿಯಾ’ ಹೆಸರನ್ನು ತಪ್ಪಾಗಿ ಬರೆಯಲಾಗಿತ್ತು. ಹೀಗಾಗಿ ಸೆ.28ಕ್ಕೆ ಮುಕುಂದ್‌ಗೆ ಎಐಟಿಎ ನೋಟಿಸ್‌ ನೋಡಿದ್ದು, 7 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿತ್ತು. ಇದಕ್ಕೆ ಅ.3ರಂದು ಉತ್ತರ ನೀಡಿರುವ ಮುಕುಂದ್‌, ತಂಡದ ಅಧಿಕೃತ ಜೆರ್ಸಿ ತೃಪ್ತಿದಾಯಕವಾಗಿರಲಿಲ್ಲ ಎಂದಿದ್ದಾರೆ.

ಟೆನಿಸ್‌: ರಾಜ್ಯದ ಸೂರಜ್‌ ಪ್ರಧಾನ ಸುತ್ತಿಗೆ ಪ್ರವೇಶ

ಧಾರವಾಡ: ಇಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಶನ್‌(ಐಟಿಎಫ್‌)ನ ವಿಶ್ವ ಟೆನಿಸ್‌ ಟೂರ್‌ ಟೂರ್ನಿಯಲ್ಲಿ ಕರ್ನಾಟಕದ ಸೂರಜ್‌ ಪ್ರಬೋಧ್‌ ಮುಖ್ಯ ಸುತ್ತಿಗೆ ಪ್ರವೇಶಿಸಿದ್ದಾರೆ.ಮಂಗಳವಾರ ಪುರುಷರ ಸಿಂಗಲ್ಸ್‌ ಅರ್ಹತಾ ಸುತ್ತಿನ ಕೊನೆ ಪಂದ್ಯದಲ್ಲಿ ಸೂರಜ್‌, 14ನೇ ಶ್ರೇಯಾಂಕಿತ ಯಶ್‌ ಯಾಧವ್‌ ವಿರುದ್ಧ 6-4, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

World Cup 2023: ಧರ್ಮಶಾಲಾದಲ್ಲಿ ಡಚ್ಚರ ಡಿಚ್ಚಿ, ದಕ್ಷಿಣ ಆಫ್ರಿಕಾ ಅಪ್ಪಚ್ಚಿ!

ಇದೇ ವೇಳೆ ಗುಜರಾತ್‌ನ ಮಧ್ವಿನ್‌ ಕಾಮತ್‌, ಏಷ್ಯನ್‌ ಗೇಮ್ಸ್ ಪದಕ ವಿಜೇತ ವಿಷ್ಣುವರ್ಧನ್‌ರನ್ನು ಸೋಲಿಸಿ ಪ್ರಧಾನ ಸುತ್ತಿಗೇರಿದರು. ಮಂಗಳವಾರ ಪ್ರಧಾನ ಸುತ್ತಿನ 2 ಪಂದ್ಯಗಳೂ ನಡೆದವು. 3ನೇ ಶ್ರೇಯಾಂಕಿತ ದಿಗ್ವಿಜಯ್‌ ಸಿಂಗ್‌, ಸಿದ್ಧಾಂತ್‌ ವಿರುದ್ಧ 6-2, 7-6 (7)ರಲ್ಲಿ ಗೆಲುವು ಸಾಧಿಸಿದರೆ, ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದಿದ್ದ ರಿಶಿ ರೆಡ್ಡಿ ವಿರುದ್ಧ ನಿತಿನ್‌ ಕುಮಾರ್‌ 6-2, 6-2 ನೇರ ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು.

ರಾಜ್ಯದ ಏಷ್ಯಾಡ್‌ ಸಾಧಕರಿಗೆ ಇಂದು ಸರ್ಕಾರದ ಸನ್ಮಾನ

ಬೆಂಗಳೂರು: ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಸಾಧನೆ ಮಾಡಿದ ಕರ್ನಾಟಕದ ಅಥ್ಲೀಟ್‌ಗಳು, ಕೋಚ್‌ಗಳನ್ನು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿ, ನಗದು ಪುರಸ್ಕಾರ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಿಎಂ ಅಧಿಕೃತ ನಿವಾಸ ಕೃಷ್ಣಾದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಸೇರಿದಂತೆ ಪ್ರಮುಖರು ಉಪಸ್ಥಿತರಿರಲಿದ್ದಾರೆ.

ಬೇರೆ ರಾಜ್ಯದ ಏಷ್ಯಾಡ್‌ ಸಾಧಕರಿಗೆ ಆಯಾಯ ರಾಜ್ಯದ ಸರ್ಕಾರಗಳು ಈಗಾಗಲೇ ಸನ್ಮಾನ ಮಾಡಿದ್ದು, ರಾಜ್ಯದ ಸಾಧಕರನ್ನೂ ಗುರುತಿಸಿ ಸರ್ಕಾರ ಸನ್ಮಾನ ಮಾಡಲಿ ಎಂದು ಆಶಿಸಿ ಅ.9ರಂದು ‘ಕನ್ನಡಪ್ರಭ’ ವರದಿ ಪ್ರಕಟಿಸಿತ್ತು. ವರದಿ ಪರಿಣಾಮ ಕ್ರೀಡಾ ಸಚಿವ ನಾಗೇಂದ್ರ, ರಾಜ್ಯದ ಕ್ರೀಡಾಪಟುಗಳಿಗೆ ಸರ್ಕಾರದ ವತಿಯಿಂದ ಸನ್ಮಾನ ನಡೆಯಲಿದೆ ಎಂದಿದ್ದರು.
 

click me!