Pro Kabaddi League: ಕೊನೆಗೂ ತಮಿಳ್ ತಲೈವಾಸ್‌ಗೆ ಜಯದ ಸಿಹಿ!

By Kannadaprabha NewsFirst Published Jan 11, 2024, 10:15 AM IST
Highlights

ಯುವ ರೈಡರ್‌ ನರೇಂದರ್‌ರ ಸೂಪರ್‌-10 (14 ಅಂಕ) ಸಾಹಸ, ತಲೈವಾಸ್‌ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಅಜಿಂಕ್ಯ ಪವಾರ್‌ (5 ಅಂಕ), ಸಾಗರ್‌ ರಾಠಿ (6 ಅಂಕ), ಸಾಹಿಲ್‌ (05 ಅಂಕ) ತಂಡಕ್ಕೆ ಉಪಯಕ್ತ ಕೊಡುಗೆ ನೀಡಿದರು.

ಮುಂಬೈ(ಜ.11): 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ತಮಿಳ್‌ ತಲೈವಾಸ್‌ ಸೋಲಿನ ಸುಳಿಯಿಂದ ಹೊರಬಂದಿದೆ. ಸತತ 7 ಸೋಲುಗಳಿಂದ ಕಂಗೆಟ್ಟಿದ್ದ ತಲೈವಾಸ್‌, ಬುಧವಾರ ಯು.ಪಿ.ಯೋಧಾಸ್‌ ವಿರುದ್ಧ 46-27 ಅಂಕಗಳ ಅಂತರದಲ್ಲಿ ಗೆದ್ದು ಸಂಭ್ರಮಿಸಿತು.

ಯುವ ರೈಡರ್‌ ನರೇಂದರ್‌ರ ಸೂಪರ್‌-10 (14 ಅಂಕ) ಸಾಹಸ, ತಲೈವಾಸ್‌ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಅಜಿಂಕ್ಯ ಪವಾರ್‌ (5 ಅಂಕ), ಸಾಗರ್‌ ರಾಠಿ (6 ಅಂಕ), ಸಾಹಿಲ್‌ (05 ಅಂಕ) ತಂಡಕ್ಕೆ ಉಪಯಕ್ತ ಕೊಡುಗೆ ನೀಡಿದರು. ಮೊದಲಾರ್ಧದಲ್ಲಿ ಸಾಧಿಸಿದ ಮುನ್ನಡೆಯಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ತಲೈವಾಸ್‌, ದ್ವಿತೀಯಾರ್ಧದಲ್ಲೂ ಪ್ರಾಬಲ್ಯ ಸಾಧಿಸಿತು. ಪ್ರೊ ಕಬಡ್ಡಿಯ ಗರಿಷ್ಠ ರೈಡ್‌ ಅಂಕಗಳ ಸರದಾರ ಪ್ರದೀಪ್‌ ನರ್ವಾಲ್‌ 12 ರೈಡ್‌ಗಳಲ್ಲಿ ಕೇವಲ 3 ಅಂಕ ಗಳಿಸಿದ್ದು, ಯೋಧಾಸ್‌ ಸೋಲಿಗೆ ಪ್ರಮುಖ ಕಾರಣ. ಪ್ರದೀಪ್‌ ಪಡೆಗಿದು ಲೀಗ್‌ನಲ್ಲಿ 8ನೇ ಸೋಲು. ಇದೇ ವೇಳೆ ಹರ್ಯಾಣ ಸ್ಟೀಲರ್ಸ್‌ ಹಾಗೂ ಯು ಮುಂಬಾ ನಡುವಿನ ಪಂದ್ಯ 44-44ರಲ್ಲಿ ಟೈ ಆಯಿತು.

ಆಫ್ಘಾನ್ ಎದುರಿನ ಮೊದಲ ಟಿ20 ಪಂದ್ಯದಿಂದ ಕೊಹ್ಲಿ ಔಟ್..! ರೋಹಿತ್ ಜತೆ ಇನಿಂಗ್ಸ್ ಆರಂಭಿಸೋದು ಯಾರು?

ಮಂಡ್ಯ ಓಪನ್‌: ಪ್ರಿ ಕ್ವಾರ್ಟರ್‌ಗೆ ಶಶಿ

ಮಂಡ್ಯ: ಮಂಡ್ಯ ಓಪನ್‌ ಅಂತಾರಾಷ್ಟ್ರೀಯ ಟೆನಿಸ್‌ ಟೂರ್ನಿಯಲ್ಲಿ ಭಾರತದ ಯುವ ಆಟಗಾರರಾದ ಶಶಿಕುಮಾರ್ ಮುಕುಂದ್‌ ಹಾಗೂ ಕರಣ್‌ ಸಿಂಗ್‌ ಪ್ರಿ ಕ್ವಾರ್ಟರ್‌ ಫೈನಲ್‌ಗೇರಿದ್ದಾರೆ. ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಕರಣ್‌, ಚೈನೀಸ್‌ ತೈಪೆನ ತ್ಸುಂಗ್‌ ಹಾಂಗ್‌ ವಿರುದ್ಧ 3-6, 6-3, 6-2 ಸೆಟ್‌ಗಳಿಂದ ಜಯ ಸಾಧಿಸಿದರೆ, ಶಶಿಕುಮಾರ್‌ ಭಾರತದವರೇ ಆದ ಕಬೀರ್‌ ಹನ್ಸ್‌ರನ್ನು 6-3, 6-4ರಿಂದ ಸೋಲಿಸಿ ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟರು.

ಇಂದಿನಿಂದ ಭಾರತ vs ಆಫ್ಘನ್‌ ಟಿ20 ಸರಣಿ ಆರಂಭ..!

ಭಾರತ ಡೇವಿಸ್‌ ಕಪ್‌ ತಂಡಕ್ಕೆ ಆಯ್ಕೆಯಾಗಿರುವ ರಾಜ್ಯದ ಪ್ರಜ್ವಲ್‌ ದೇವ್‌ ಮೊದಲ ಸುತ್ತಿನಲ್ಲೇ ಕೊರಿಯಾದ ಯೂನ್‌ಸೆಕ್‌ ಜಾಂಗ್‌ ವಿರುದ್ಧ 2-6, 7-5, 5-7 ರಿಂದ ಸೋತು ನಿರಾಸೆ ಅನುಭವಿಸಿದರು.

ಜ.14ರಿಂದ ಬೆಂಗ್ಳೂರಲ್ಲಿ ಅಂ.ರಾ. ಮಹಿಳಾ ಟೆನಿಸ್‌

ಬೆಂಗಳೂರು: ಜ.14ರಿಂದ 21ರ ವರೆಗೂ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆ (ಕೆಎಸ್‌ಎಲ್‌ಟಿಎ) ಆಶ್ರಯದಲ್ಲಿ ಅಂ.ರಾ.ಮಹಿಳಾ ಟೆನಿಸ್‌ ಟೂರ್ನಿ ನಡೆಯಲಿದ್ದು, ಏಷ್ಯನ್‌ ಗೇಮ್ಸ್‌ ಪದಕ ವಿಜೇತ ಭಾರತದ ತಾರಾ ಆಟಗಾರ್ತಿ ಅಂಕಿತಾ ರೈನಾ ಪ್ರಧಾನ ಸುತ್ತಿಗೆ ನೇರ ಅರ್ಹತೆ ಪಡೆದಿದ್ದಾರೆ. ಸ್ಥಳೀಯ ಆಟಗಾರ್ತಿಯರಾದ ಸೋಹಾ ಸಾದಿಕ್‌ ಹಾಗೂ ಸುಹಿತಾ ಮರೂರಿಗೆ ವೈಲ್ಡ್‌ ಕಾರ್ಡ್‌ ಪ್ರವೇಶ ದೊರೆತಿದೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 143ನೇ ಸ್ಥಾನದಲ್ಲಿರುವ ಲಾತ್ವಿಯಾದ ದರಾ ಸೆಮೆನಿಸ್ಟಾ ಪ್ರಮುಖ ಆಕರ್ಷಣೆ ಎನಿಸಿದ್ದಾರೆ.

click me!