ಪ್ರೊ ಕಬಡ್ಡಿ 7ನೇ ಆವೃತ್ತಿಗೆ ತಯಾರಿ ಆರಂಭಗೊಂಡಿದೆ. ಈಗಾಗಲೇ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಕಳೆದ ಆೃತ್ತಿಗಳಲ್ಲಿ ಆಟಗಾರರಾಗಿದ್ದ ಕಬಡ್ಡಿ ಪಟುಗಳು ಈ ಬಾರಿ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
ಪುಣೆ(ಏ.08): ಕಳೆದ ಪ್ರೊ ಕಬಡ್ಡಿ ಆವೃತ್ತಿಯಲ್ಲಿ ಆಟಗಾರರಾಗಿ ಕಾಣಿಸಿಕೊಂಡ ಕಬಡ್ಡಿ ಪಟುಗಳು ಇದೀಗ ಕೋಚ್‌ಗಳಾಗಿ ಕಣಕ್ಕಿಳಿಯುತ್ತಿದ್ದಾರೆ. 7ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಭಾರತದ ಮಾಜಿ ನಾಯಕರಾದ ಅನೂಪ್ ಕುಮಾರ್ ಹಾಗೂ ರಾಕೇಶ್ ಕುಮಾರ್ ಕೋಚ್‌ಗಳಾಗಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಪ್ರೊ ಕಬಡ್ಡಿ ಹರಾಜು - 441 ಆಟಗಾರರ ಅದೃಷ್ಟ ಪರೀಕ್ಷೆ!
ಅನೂಪ್ ಪುಣೇರಿ ಪಲ್ಟನ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದರೆ, ರಾಕೇಶ್ ಹರ್ಯಾಣ ಸ್ಟೀಲರ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅನೂಪ್ ಕಳೆದ ಆವೃತ್ತಿ ವೇಳೆ ಕಬಡ್ಡಿಗೆ ವಿದಾಯ ಘೋಷಿಸಿದ್ದರು. ರಾಕೇಶ್ ಕಳೆದ ಆವೃತ್ತಿಯಲ್ಲಿ ಪ್ರಸಾರ ಹಕ್ಕು ಹೊಂದಿರುವ ವಾಹಿನಿಯಲ್ಲಿ ವಿಶ್ಲೇಷಕರಾಗಿ ಕೆಲಸ ಮಾಡಿದ್ದರು. ಇದೇ ಮೊದಲ ಬಾರಿಗೆ ಇವರಿಬ್ಬರು ಕೋಚ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.