
ಮೊಹಾಲಿ(ಏ.08): ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯಗಳನ್ನು ಕೈಚೆಲ್ಲಿ ನಿರಾಸೆಗೊಳಗಾಗಿರುವ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಸೋಮವಾರ ಮೊಹಾಲಿಯಲ್ಲಿ ಪರಸ್ಪರ ಎದುರಾಗಲಿದ್ದು, ಗೆಲುವಿನ ಹಳಿಗೆ ಮರಳಲು ಎದುರು ಹಪಹಪಿಸುತ್ತಿವೆ. ಪ್ಲೇ-ಆಫ್ ಲೆಕ್ಕಾಚಾರಕ್ಕೆ ಇನ್ನೂ ಸಮಯವಿದೆಯಾದರೂ, ಈ ಹಂತದಲ್ಲಿ ಗೆಲುವಿನ ಲಯ ಉಳಿಸಿಕೊಂಡು ಅಂಕಪಟ್ಟಿಯಲ್ಲಿ ಅಗ್ರ 4ರಲ್ಲಿ ಉಳಿದುಕೊಳ್ಳುವುದು ತಂಡಗಳ ಗುರಿಯಾಗಿದೆ. ಸನ್‌ರೈಸರ್ಸ್‌ಗೆ ಮಧ್ಯಮ ಕ್ರಮಾಂಕದ ಸಮಸ್ಯೆ ಕಾಡುತ್ತಿದ್ದರೆ, ಪಂಜಾಬ್‌ಗೆ ಸ್ಥಿರತೆಯ ಕೊರತೆ ಎದುರಾಗಿದೆ.
ಇದನ್ನೂ ಓದಿ: IPL 2019: ರೋಹಿತ್ ಶರ್ಮಾ ಭೇಟಿ ಮಾಡಿದ ಗಳಗಳನೆ ಅತ್ತ ಅಭಿಮಾನಿ!
ಒಟ್ಟು ಮುಖಾಮುಖಿ: 12
ಪಂಜಾಬ್: 03
ಸನ್‌ರೈಸರ್ಸ್: 09
ಸ್ಥಳ: ಮೊಹಾಲಿ, ಪಂದ್ಯ ಆರಂಭ: ರಾತ್ರಿ 8ಕ್ಕೆ
ಪಿಚ್ ರಿಪೋರ್ಟ್
ಮೊಹಾಲಿ ಪಿಚ್ ವೇಗದ ಬೌಲಿಂಗ್‌ಗೆ ಹೆಚ್ಚು ನೆರವು ನೀಡಲಿದ್ದು, ಈ ಆವೃತ್ತಿಯಲ್ಲಿ ಇಲ್ಲಿ ನಡೆದಿರುವ 2 ಪಂದ್ಯಗಳಲ್ಲಿ ವೇಗಿಗಳೇ ಹೆಚ್ಚು ಯಶಸ್ಸು ಕಂಡಿದ್ದಾರೆ. ಮೊದಲು ಬ್ಯಾಟ್ ಮಾಡುವ ತಂಡ 180ಕ್ಕೂ ಹೆಚ್ಚು ಮೊತ್ತ ಕಲೆಹಾಕಿದರೆ ಗೆಲ್ಲುವ ಸಾಧ್ಯತೆ ಹೆಚ್ಚು. ಟಾಸ್ ಪ್ರಮುಖ ಪಾತ್ರ ವಹಿಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.