ಸೋಮವಾರ ಗಚ್ಚಿಬೌಲಿಯ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ಎಲಿಮಿನೇಟರ್ ಪಂದ್ಯಗಳು ಆಯೋಜನೆಗೊಳ್ಳಲಿವೆ. ಲೀಗ್ ಹಂತದ ಮುಕ್ತಾಯಕ್ಕೆ ಅಂಕ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದ ದಬಾಂಗ್ ಡೆಲ್ಲಿ ಹಾಗೂ 6ನೇ ಸ್ಥಾನ ಪಡೆದ ಪಾಟ್ನಾ ಪೈರೇಟ್ಸ್ ತಂಡಗಳು ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
ಹೈದರಾಬಾದ್(ಫೆ.26): 12 ವಾರಗಳ ರೋಚಕ ಪಂದ್ಯಗಳ ಬಳಿಕ ಲೀಗ್ ಹಂತದಲ್ಲಿ ಅಗ್ರ 6 ಸ್ಥಾನ ಪಡೆದ ತಂಡಗಳು 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನ ಪ್ಲೇ-ಆಫ್‌ನಲ್ಲಿ ಹೋರಾಟ ಮಾಡಲು ಸಿದ್ಧವಾಗಿದೆ. ಹೈದರಾಬಾದ್‌ನಲ್ಲಿ ಫೆ.26ರಿಂದ ನಾಕೌಟ್ ಪಂದ್ಯಗಳು ನಡೆಯಲಿವೆ.
ಸೋಮವಾರ ಗಚ್ಚಿಬೌಲಿಯ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ಎಲಿಮಿನೇಟರ್ ಪಂದ್ಯಗಳು ಆಯೋಜನೆಗೊಳ್ಳಲಿವೆ. ಲೀಗ್ ಹಂತದ ಮುಕ್ತಾಯಕ್ಕೆ ಅಂಕ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದ ದಬಾಂಗ್ ಡೆಲ್ಲಿ ಹಾಗೂ 6ನೇ ಸ್ಥಾನ ಪಡೆದ ಪಾಟ್ನಾ ಪೈರೇಟ್ಸ್ ತಂಡಗಳು ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದ ಗುಜರಾತ್ ಜೈಂಟ್ಸ್ ಹಾಗೂ 5ನೇ ಸ್ಥಾನ ಪಡೆದ ಹರ್ಯಾಣ ಸ್ಟೀಲರ್ಸ್ ತಂಡಗಳು ಎಲಿಮಿಟೇನರ್-2 ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಎಲ್ಲಾ ನಾಲ್ಕು ತಂಡಗಳು ಫೆ.28ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯಲು ಪರಸ್ಪರ ಪೈಪೋಟಿ ನಡೆಸಲಿವೆ.
undefined
ಐಎಸ್‌ಎಲ್: ಹೈದ್ರಾಬಾದ್ ವಿರುದ್ಧ ಬೆಂಗಳೂರಿಗೆ ಜಯ
ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಪುಣೇರಿ ಪಲ್ಟನ್ ಮತ್ತು 2ನೇ ಸ್ಥಾನ ಪಡೆದುಕೊಂಡಿರುವ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳು ಈಗಾಗಲೇ ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಪುಣೆ ತಂಡವು ಸೆಮಿಫೈನಲ್‌ನಲ್ಲಿ ಎಲಿಮಿನೇಟರ್-1ರ ವಿಜೇತ ತಂಡವನ್ನು ಎದುರಿಸಲಿದ್ದು, ಹಾಲಿ ಚಾಂಪಿಯನ್ ಜೈಪುರ ತಂಡ ನಾಲ್ಕರ ಘಟ್ಟದಲ್ಲಿ ಎಲಿಮಿನೇಟರ್-2ರ ವಿಜೇತ ತಂಡವನ್ನು ಎದುರಿಸಲಿದೆ. ಈ ಲೀಗ್‌ನ ಗ್ರ್ಯಾಂಡ್ ಫಿನಾಲೆ ಮಾರ್ಚ್ 1ರ ಶುಕ್ರವಾರ ನಡೆಯಲಿದೆ.
ಪಂದ್ಯಗಳ ಸಮಯ
ಎಲಿಮಿನೇಟರ್ 1: ದಬಾಂಗ್ ಡೆಲ್ಲಿ vs ಪಾಟ್ನಾ ಪೈರೇಟ್ಸ್- ರಾತ್ರಿ 8 ಗಂಟೆಗೆ
ಎಲಿಮಿನೇಟರ್ 2: ಗುಜರಾತ್ ಜೈಂಟ್ಸ್ vs ಹರ್ಯಾಣ ಸ್ಟೀಲರ್ಸ್- ರಾತ್ರಿ 9 ಗಂಟೆಗೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ+ ಹಾಟ್‌ಸ್ಟಾರ್
ಪ್ರೊ ಲೀಗ್ ಹಾಕಿ ಟೂರ್ನಿ: ಐರ್ಲೆಂಡ್ ಭಾರತಕ್ಕೆ ಜಯ
ರೂರ್ಕೆಲಾ: ಎಫ್‌ಐಎಚ್ ಪ್ರೊ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ಭಾರತ ಪುರುಷರ ತಂಡ ಐರ್ಲೆಂಡ್ ವಿರುದ್ಧ 4-0 ಗೋಲುಗಳ ಜಯ ದಾಖಲಿಸಿದೆ. ಈ ಮೂಲಕ ಲೀಗ್‌ನ ತವರಿನ ಆವೃತ್ತಿಯನ್ನು ಗೆಲುವಿನೊಂದಿಗೆ ಮುಕ್ತಾಯಗೊಳಿಸಿದೆ. ನೀಲಕಂಠ, ಆಕಾಶ್‌ದೀಪ್ ಸಿಂಗ್, ಗುರ್ಜಂತ್ ಸಿಂಗ್ , ಜುಗ್ರಾಜ್ ಸಿಂಗ್ ತಲಾ ಒಂದು ಗೋಲು ಗಳಿಸಿದರು. ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿರುವ ಭಾರತ 5 ಜಯಗಳೊಂದಿಗೆ 15 ಅಂಕ ಹೊಂದಿದ್ದು, ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
2 ವರ್ಷಕ್ಕೇ ಕಿತ್ತು ಹೋದ ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್!
ಸಂತೋಷ್ ಟ್ರೋಫಿ: ಇಂದು ರಾಜ್ಯಕ್ಕೆ ಮಣಿಪುರ ಸವಾಲು
ಯೂಪಿಯಾ(ಅರುಣಾಚಲ ಪ್ರದೇಶ): 77ನೇ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಫೈನಲ್ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಸೋಮವಾರ ಮಣಿಪುರ ವಿರುದ್ಧ ಸೆಣಸಾಡಲಿದೆ. ‘ಬಿ’ ಗುಂಪಿನಲ್ಲಿರುವ ಕರ್ನಾಟಕ ಟೂರ್ನಿಯಲ್ಲಿ 2 ಪಂದ್ಯಗಳನ್ನಾಡಿದ್ದು, ಎರಡರಲ್ಲೂ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಡೆಲ್ಲಿ ಹಾಗೂ ಮಿಜೋರಾಂ ವಿರುದ್ಧದ ಪಂದ್ಯಗಳು ಡ್ರಾಗೊಂಡಿದ್ದವು. ಟೂರ್ನಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ತಂಡ ಸುಧಾರಿತ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ಅತ್ತ ಮಣಿಪುರ ತಂಡ ಆಡಿರುವ 2 ಪಂದ್ಯಗಳಲ್ಲಿ 1ರಲ್ಲಿ ಗೆದ್ದಿದ್ದು, ಮತ್ತೊಂದು ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿದೆ.