
ಹೈದರಾಬಾದ್(ಫೆ.27): 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ 3 ಬಾರಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಹಾಗೂ ಹರ್ಯಾಣ ಸ್ಟೀಲರ್ಸ್ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ.
ಸೋಮವಾರ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ದಬಾಂಗ್ ಡೆಲ್ಲಿ ವಿರುದ್ಧ ಪಾಟ್ನಾ 37-35 ಅಂಕಗಳಿಂದ ರೋಚಕ ಗೆಲುವು ಸಾಧಿಸಿತು. ಆರಂಭದಲ್ಲೇ ತೀವ್ರ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಡೆಲ್ಲಿ ಮೊದಲಾರ್ಧಕ್ಕೆ 20-19ರಿಂದ ಮುನ್ನಡೆಯಲ್ಲಿತ್ತು. ಆದರೆ ಕೊನೆ ಹಂತದಲ್ಲಿ ಮಿಂಚಿನ ಆಟವಾಡಿದ ಪಾಟ್ನಾ 2 ಅಂಕಗಳ ಅಂತರದಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ಡೆಲ್ಲಿಯ ಆಶು ಮಲಿಕ್ 19 ಅಂಕಗಳ ಹೋರಾಟ ವ್ಯರ್ಥವಾಯಿತು. ಪಾಟ್ನಾದ ಸಚಿನ್ 9 ಅಂಕ ಗಳಿಸಿದರು.
Ranji Trophy: ವಿದರ್ಭ ಎದುರು ಸೆಮೀಸ್‌ಗೇರಲು ಕರ್ನಾಟಕ ದಿಟ್ಟ ಹೋರಾಟ..!
ಗುಜರಾತ್ ಔಟ್: 2ನೇ ಎಲಿಮಿನೇಟರ್ ಪಂದ್ಯದಲ್ಲಿ ಹರ್ಯಾಣಕ್ಕೆ ಗುಜರಾತ್ ವಿರುದ್ಧ 42-25 ಅಂಕಗಳ ಗೆಲುವು ಲಭಿಸಿತು. ಆರಂಭದ ಕೆಲ ನಿಮಿಷ ಇತ್ತಂಡಗಳಿಂದ ಸಮಬಲದ ಹೋರಾಟ ಕಂಡುಬಂದರೂ, ಬಳಿಕ ಹರ್ಯಾಣ ಸತತ ಅಂಕ ಗಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಹರ್ಯಾಣದ ವಿನಯ್ 12 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ನಾಳೆ ಪುಣೆ vs ಪಾಟ್ನಾ, ಜೈಪುರ vs ಹರ್‍ಯಾಣ ಸೆಮಿ
ಸೆಮಿಫೈನಲ್ ಪಂದ್ಯಗಳು ಬುಧವಾರ ನಡೆಯಲಿವೆ. ಗುಂಪು ಹಂತದಲ್ಲಿ ಅಗ್ರಸ್ಥಾನಿಯಾಗಿ ನೇರವಾಗಿ ಸೆಮೀಸ್‌ಗೇರಿದ್ದ ಪುಣೇರಿ ಪಲ್ಟನ್ ತಂಡ ಪಾಟ್ನಾ ವಿರುದ್ಧ ಸೆಣಸಾಡಲಿದೆ. ಗುಂಪಿನಲ್ಲಿ 2ನೇ ಸ್ಥಾನ ಪಡೆದಿದ್ದ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ಅಂತಿಮ 4ರ ಘಟ್ಟದಲ್ಲಿ ಹರ್ಯಾಣ ಸವಾಲು ಎದುರಾಗಲಿದೆ.
ಡೆಲ್ಲಿ ಮ್ಯಾರಥಾನ್: ಸ್ವರ್ಣ ಗೆದ್ದ ಗೋಪಿ ಥೋನಕಲ್
ನವದೆಹಲಿ: ಭಾರೀ ರೋಚಕತೆಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಶ್ರೀನಿ ಬುಗತಾರನ್ನು ಹಿಂದಿಕ್ಕಿದ ಗೋಪಿ ಥೋನಕಲ್, ನವದೆಹಲಿ ಮ್ಯಾರಥಾನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನವಾರ ನಡೆದ ಸ್ಪರ್ಧೆಯಲ್ಲಿ 1978ರಲ್ಲಿ ಶಿವ್‌ನಾಥ್ ಸಿಂಗ್ ನಿರ್ಮಸಿದ್ದ ರಾಷ್ಟ್ರೀಯ ದಾಖಲೆ (2 ಗಂಟೆ 12 ನಿಮಿಷ) ಮೇಲೆ ಕಣ್ಣಿಟ್ಟಿದ್ದ ಗೋಪಿ, 2 ಗಂಟೆ 14 ನಿಮಿಷ 40 ಸೆಕೆಂಡ್‌ಗಳಲ್ಲಿ ಓಟ ಪೂರೈಸಿ ಚಿನ್ನಕ್ಕೆ ಮುತ್ತಿಟ್ಟರು.
ಟೀಂ ಇಂಡಿಯಾ ಟೆಸ್ಟ್ ಸರಣಿ ಗೆಲ್ಲುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್..!
ಬುಗತಾ 2 ಗಂಟೆ 14 ನಿಮಿಷ 41 ಸೆಕೆಂಡ್‌ಗಳಲ್ಲಿ ತಮ್ಮ ಓಟ ಮುಗಿಸಿ, ವೈಯಕ್ತಿಕ ಶ್ರೇಷ್ಠ ದಾಖಲೆ ಸಾಧಿಸಿದರು. ಮಹಿಳಾ ವಿಭಾಗದಲ್ಲಿ ಅಶ್ವಿನಿ ಜಾಧವ್ ತಮ್ಮ ಹಿಂದಿನ ವೈಯಕ್ತಿಕ ಶ್ರೇಷ್ಠ (2:56.42) ದಾಖಲೆಗಿಂತ 4 ನಿಮಿಷ ಮುಂಚಿತವಾಗಿ ರೇಸ್ ಮುಕ್ತಾಯಗೊಳಿಸಿ, ಚಿನ್ನದ ಪದಕ ಬಾಚಿಕೊಂಡರು. ನಿರ್ಮಾಬೆನ್ ಥಾಕೋರ್ (2:55.47) ಹಾಗೂ ದಿವ್ಯಾಂಕ ಚೌಧರಿ (2:57.06) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.