ಟೀಮ್‌ ಮೀಟಿಂಗ್‌ನಲ್ಲಿ ರಾಜಕಾರಣಿಯ ಕ್ರಿಕೆಟರ್‌ ಪುತ್ರನಿಗೆ ಬೈದ ಕ್ಯಾಪ್ಟನ್‌, ನಾಯಕತ್ವವನ್ನೇ ಕಳೆದುಕೊಂಡ ಟೀಂ ಇಂಡಿಯಾ ಪ್ಲೇಯರ್‌!

By Naveen Kodase  |  First Published Feb 26, 2024, 5:18 PM IST

ಹನುಮ ವಿಹಾರಿಯವರ ಮಾತಿನಲ್ಲೇ ಹೇಳುವುದಾದರೇ, "ಆ ಆಟಗಾರನ ಅಪ್ಪ ಪ್ರಭಾವಿ ರಾಜಕಾರಣಿ. ಆ ರಾಜಕಾರಣಿಯೇ ತಮ್ಮ ನಾಯಕತ್ವದಿಂದ ಕೆಳಗಿಳಿಯುವಂತೆ ಕ್ರಿಕೆಟ್ ಸಂಸ್ಥೆಯ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿಸಿದ್ದಾರೆ. ಹನುಮ ವಿಹಾರಿ ಸ್ಥಾನಕ್ಕೆ ಇದೀಗ ರಿಕಿ ಬೊಯಿಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ.


ಹೈದರಾಬಾದ್‌(ಫೆ.26): ಟೀಂ ಇಂಡಿಯಾ ಬ್ಯಾಟರ್ ಹನುಮ ವಿಹಾರಿ ಇದೀಗ ರಾಜಕೀಯ ಹಸ್ತಕ್ಷೇಪದ ಕಾರಣದಿಂದ ತಮ್ಮ ಆಂಧ್ರ ಪ್ರದೇಶ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಇದೀಗ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಒಂದು ಹಾಕಿ ಗಂಭೀರ ಆರೋಪ ಮಾಡಿದ್ದಾರೆ.

ರಣಜಿ ಟ್ರೋಫಿ ಟೂರ್ನಿಯಲ್ಲಿ ಆಂಧ್ರ ಪ್ರದೇಶ ಹಾಗೂ ಮಧ್ಯಪ್ರದೇಶ ನಡುವಿನ ಕ್ವಾರ್ಟರ್ ಫೈನಲ್‌ ಪಂದ್ಯ ಮುಗಿದ ಬಳಿಕ ಬೆಂಗಾಲ್ ಎದುರಿನ ಪಂದ್ಯದ ವೇಳೆ ನಡೆದ ಘಟನೆಯನ್ನು ಮೆಲುಕು ಹಾಕಿದ್ದಾರೆ. ತಮ್ಮ ತಂಡದಲ್ಲಿದ್ದ 17ನೇ ಆಟಗಾರನ ಮೇಲೆ ರೇಗಿದ್ದ ವಿಚಾರದ ಕುರಿತಂತೆ ತುಟಿ ಬಿಚ್ಚಿದ್ದಾರೆ.

 
 
 
 
 
 
 
 
 
 
 
 
 
 
 

Latest Videos

undefined

A post shared by Hanuma vihari (@viharigh)

ಹನುಮ ವಿಹಾರಿಯವರ ಮಾತಿನಲ್ಲೇ ಹೇಳುವುದಾದರೇ, "ಆ ಆಟಗಾರನ ಅಪ್ಪ ಪ್ರಭಾವಿ ರಾಜಕಾರಣಿ. ಆ ರಾಜಕಾರಣಿಯೇ ತಮ್ಮ ನಾಯಕತ್ವದಿಂದ ಕೆಳಗಿಳಿಯುವಂತೆ ಕ್ರಿಕೆಟ್ ಸಂಸ್ಥೆಯ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿಸಿದ್ದಾರೆ. ಹನುಮ ವಿಹಾರಿ ಸ್ಥಾನಕ್ಕೆ ಇದೀಗ ರಿಕಿ ಬೊಯಿಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ.

ಟೀಂ ಇಂಡಿಯಾ ಟೆಸ್ಟ್ ಸರಣಿ ಗೆಲ್ಲುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್..!

"ನಾವು ಕೊನೆಯವರೆಗೂ ಹೋರಾಟ ನಡೆಸಿದೆವು. ಆದರೆ ನಾವು ಅಂದುಕೊಂಡ ಫಲಿತಾಂಶ ಸಿಗಲಿಲ್ಲ. ಆಂಧ್ರ ತಂಡದ ಪರವಾಗಿ ಮತ್ತೊಮ್ಮೆ ಕ್ವಾರ್ಟರ್ ಫೈನಲ್ ಪಂದ್ಯ ಸೋತಿದ್ದು ತೀವ್ರ ನಿರಾಸೆಯನ್ನುಂಟು ಮಾಡಿತು. ನಾನೀಗ ಕೆಲವು ಸತ್ಯ ಘಟನೆಗಳನ್ನು ನಿಮ್ಮ ಮುಂದಿಡಬೇಕು ಅಂದುಕೊಂಡಿದ್ದೇನೆ. . ನಾನು ಬೆಂಗಾಲ್ ಎದುರಿನ ಪಂದ್ಯದಲ್ಲಿ ನಾಯಕನಾಗಿದ್ದೆ. ಈ ಪಂದ್ಯದ ವೇಳೆ ನಾನು ನಮ್ಮ ತಂಡದ 17ನೇ ಆಟಗಾರನ ಮೇಲೆ ಕೂಗಾಡಿದೆ. ಇದಾದ ಬಳಿಕ ಆತ ತನ್ನ ತಂದೆ ಹಾಗೂ ಪ್ರಭಾವಿ ರಾಜಕಾರಣಿಯ ಬಳಿ ಕಂಪ್ಲೆಂಟ್‌ ಮಾಡಿದ. ಆತನ ತಂದೆ ನಮ್ಮ ಕ್ರಿಕೆಟ್ ಅಸೋಸಿಯೇಷನ್‌ಗೆ ನನ್ನ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಿದರು. ಇದೆಲ್ಲದರ ನಡುವೆ ನಾವು ಕಳೆದ ಬಾರಿಯ ರಣಜಿ ಫೈನಲಿಸ್ಟ್ ಬೆಂಗಾಲ್ ಎದುರು 410 ರನ್‌ಗಳ ಸವಾಲಿನ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದೆವು. ಇದರ ಹೊರತಾಗಿಯೂ ನನ್ನದೇನೂ ತಪ್ಪು ಇಲ್ಲದಿದ್ದರೂ, ನನಗೆ ರಾಜಿನಾಮೆ ನೀಡುವಂತೆ ಕೇಳಿದರು. ನಾನು ಆ ಆಟಗಾರನಿಗೆ ಯಾವುದೇ ವೈಯುಕ್ತಿಕ ನಿಂದನೆ ಮಾಡಿಲ್ಲ. ಆದರೆ ಅಸೋಸಿಯೇಷನ್‌ಗೆ ಆ ಆಟಗಾರನೇ ಮುಖ್ಯವೆನಿಸಿತೇ ಹೊರತು, ಕಳೆದ 7 ವರ್ಷಗಳಲ್ಲಿ 5 ಬಾರಿ ಆಂಧ್ರ ತಂಡವನ್ನು ನಾಕೌಟ್ ಹಂತಕ್ಕೆ ಕೊಂಡೊಯ್ದ, ಕಳೆದ ವರ್ಷ ಎಡಗೈನಲ್ಲಿ ಆಡಿದ ಆಟಗಾರ ಹಾಗೂ ಭಾರತ ಪರ 16 ಟೆಸ್ಟ್ ಆಡಿದ ಆಟಗಾರ ಮುಖ್ಯ ವೆನಿಸಲಿಲ್ಲ" ಎಂದು ಬರೆದುಕೊಂಡಿದ್ದಾರೆ.

ಭಾರತದಲ್ಲಿ ನಡಿಲಿಲ್ಲ 'ಬಾಜ್‌ಬಾಲ್‌' ತಂತ್ರ, ಇಂಗ್ಲೆಂಡ್ ಎದುರು ಟೆಸ್ಟ್ ಸರಣಿ ಗೆದ್ದ ಭಾರತ..!

ಬಲಗೈ ಬ್ಯಾಟರ್ ಹನುಮ ವಿಹಾರಿ ಇನ್ನು ಯಾವತ್ತೂ ಆಂಧ್ರ ತಂಡದ ಪರ ಆಡುವುದಿಲ್ಲ, ಯಾಕೆಂದರೆ ಅಷ್ಟರಮಟ್ಟಿಗೆ ತಮಗೆ ಅವರು ಅವಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.

2023-24ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಂಧ್ರ ಪ್ರದೇಶ ತಂಡವು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಧ್ಯ ಪ್ರದೇಶ ಎದುರು 4 ರನ್‌ಗಳ ರೋಚಕ ಸೋಲು ಅನುಭವಿಸುವ ಮೂಲಕ ಸೆಮೀಸ್‌ಗೇರುವ ಅವಕಾಶವನ್ನು ಕೈಚೆಲ್ಲಿತು. ನಾಲ್ಕನೇ ಇನಿಂಗ್ಸ್‌ನಲ್ಲಿ ಹನುಮ ವಿಹಾರಿ ಅಮೂಲ್ಯ 55 ರನ್ ಬಾರಿಸಿದರಾದರೂ ತಂಡವನ್ನು ಸೆಮೀಸ್‌ಗೇರಿಲು ವಿಫಲರಾದರು.
 

click me!