ಪ್ರೊ ಕಬಡ್ಡಿ ಲೀಗ್: 74 ಅಂಕ ಗಳಿಸಿ ತಮಿಳ್ ತಲೈವಾಸ್‌ ದಾಖಲೆ!

By Kannadaprabha News  |  First Published Feb 19, 2024, 9:08 AM IST

ಈ ಹಿಂದೆ 5ನೇ ಹಾಗೂ 7ನೇ ಆವೃತ್ತಿಯಲ್ಲಿ ಪಾಟ್ನಾ ಪೈರೇಟ್ಸ್‌ 69 ಅಂಕ ಗಳಿಸಿದ್ದು ದಾಖಲೆ ಎನಿಸಿತ್ತು. 5ನೇ ಆವೃತ್ತಿಯಲ್ಲಿ ಹರ್ಯಾಣ ವಿರುದ್ಧ 69-30, 7ನೇ ಆವೃತ್ತಿಯಲ್ಲಿ ಬೆಂಗಾಲ್‌ ವಿರುದ್ಧ 69-41ರಲ್ಲಿ ಜಯ ಗಳಿಸಿತ್ತು.


ಪಂಚಕುಲಾ(ಫೆ): ಬೆಂಗಾಲ್‌ ವಾರಿಯರ್ಸ್‌ ವಿರುದ್ಧ 74-37ರ ಗೆಲುವು ಸಾಧಿಸಿದ ತಮಿಳ್‌ ತಲೈವಾಸ್‌, ಪ್ರೊ ಕಬಡ್ಡಿ ಲೀಗ್‌ನ ಪಂದ್ಯವೊಂದರಲ್ಲಿ ಅತಿಹೆಚ್ಚು ಅಂಕ ಕಲೆಹಾಕಿದ ದಾಖಲೆ ಬರೆಯಿತು. ಈ ಹಿಂದೆ 5ನೇ ಹಾಗೂ 7ನೇ ಆವೃತ್ತಿಯಲ್ಲಿ ಪಾಟ್ನಾ ಪೈರೇಟ್ಸ್‌ 69 ಅಂಕ ಗಳಿಸಿದ್ದು ದಾಖಲೆ ಎನಿಸಿತ್ತು. 5ನೇ ಆವೃತ್ತಿಯಲ್ಲಿ ಹರ್ಯಾಣ ವಿರುದ್ಧ 69-30, 7ನೇ ಆವೃತ್ತಿಯಲ್ಲಿ ಬೆಂಗಾಲ್‌ ವಿರುದ್ಧ 69-41ರಲ್ಲಿ ಜಯ ಗಳಿಸಿತ್ತು. ಇನ್ನು ಭಾನುವಾರ ನಡೆದ 2ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ವಿರುದ್ಧ ದಬಾಂಗ್‌ ಡೆಲ್ಲಿ 32-21ರಲ್ಲಿ ಜಯಭೇರಿ ಬಾರಿಸಿತು.

ಬೆಂಗಳೂರು ಓಪನ್‌: ಸ್ಟೆಫಾನೊ ಸಿಂಗಲ್ಸ್‌ ಚಾಂಪಿಯನ್‌

Tap to resize

Latest Videos

ಬೆಂಗಳೂರು: ಇಟಲಿಯ ಸ್ಟೆಫಾನೊ ನಪೊಲಿಟಾನೊ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸಿಂಗಲ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಇಲ್ಲಿನ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಸಿಯೊಂಗ್‌ಚಾನ್‌ ಹೊಂಗ್‌ ವಿರುದ್ಧ 4-6, 6-3, 6-3 ಸೆಟ್‌ಗಳಲ್ಲಿ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡರು. ಸ್ಟೆಫಾನೊಗೆ 18230 ಅಮೆರಿಕನ್‌ ಡಾಲರ್‌ (ಅಂದಾಜು 15 ಲಕ್ಷ ರು.) ನಗದು ಬಹುಮಾನ ದೊರೆಯಿತು. ಜೊತೆಗೆ 100 ಎಟಿಪಿ ರ್‍ಯಾಂಕಿಂಗ್‌ ಅಂಕ ಸಹ ಕಲೆಹಾಕಿದರು.

Breaking: 122 ರನ್‌ಗೆ ಇಂಗ್ಲೆಂಡ್‌ ಆಲೌಟ್‌, ಟೆಸ್ಟ್‌ ಇತಿಹಾಸದ ಅತಿದೊಡ್ಡ ಗೆಲುವು ಕಂಡ ಭಾರತ!

ಫೆ.23ರಿಂದ ಇಂಡೋ-ಗಲ್ಫ್ ಥ್ರೋಬಾಲ್: ಭಾರತಕ್ಕೆ ಸಂಪೂರ್ಣ ಹೆಗಡೆ ನಾಯಕಿ

ಬೆಂಗಳೂರು: ಬಹರೇನ್‌ನಲ್ಲಿ ಫೆ.23ರಿಂದ ಮಹಿಳೆಯರ ಇಂಡೋ-ಗಲ್ಫ್ ಅಂತಾರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್‌ಶಿಪ್‌ ಆರಂಭವಾಗಲಿದ್ದು, ಭಾರತ ತಂಡದ ನಾಯಕಿಯಾಗಿ ಕರ್ನಾಟಕದ ಸಂಪೂರ್ಣ ಹೆಗಡೆ ಆಯ್ಕೆಯಾಗಿದ್ದಾರೆ. ತಂಡದಲ್ಲಿ ತನಿಶಾ ಜೈನ್, ಆಯ್ಲಾ ರಚಿತಾ ವಿಜಯ್, ಕಲ್ಪನಾ ಚಲ್ಲಾ, ಪಾವನಿ ಚೋಡಿಸೆಟ್ಟಿ, ಅನಿತಾ ವೀಣಾ, ದೀಪಾ ಹೆಬ್ಬಾರ್, ಪೃಶಾ ಉತ್ಪಲಾಕ್ಷಿ ಶ್ರೀನಿವಾಸನ್, ರಾಜ್ಯದ ಕೀರ್ತನಾ ಪರಮೇಶ್ವರನ್ ಕೂಡಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಎನ್.ಎಸ್.ಸುಬ್ರಮಣ್ಯ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಅಲ್ಲದೆ, ಮಾ.14, 15 ಮತ್ತು 16ರಂದು ಬಿಹಾರದ ಆರಾ ಜಿಲ್ಲೆಯಲ್ಲಿ 46ನೇ ಹಿರಿಯರ ರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್‌ಶಿಪ್ ನಡೆಯಲಿದ್ದು, ಕರ್ನಾಟಕ ಸೇರಿದಂತೆ 30 ತಂಡಗಳು ಪಾಲ್ಗೊಳ್ಳಲಿವೆ. ಇದರಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರ್ತಿಯರನ್ನು ಮೇ ತಿಂಗಳ ಅಂತ್ಯಕ್ಕೆ ಮಲೇಷ್ಯಾದಲ್ಲಿ ನಡೆಯಲಿರುವ ಏಷ್ಯನ್ ಥ್ರೋಬಾಲ್ ಚಾಂಪಿಯನ್‌ಶಿಪ್‌ಗೆ ಭಾರತ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ಭಾರತದ ಥ್ರೋಬಾಲ್‌ ಸಂಸ್ಥೆ ಅಧ್ಯಕ್ಷ ಡಾ.ಎಸ್‌.ಮಣಿ ಮಾಹಿತಿ ನೀಡಿದ್ದಾರೆ.
 

click me!