ಸೋಮವಾರದ ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ದ ದಬಾಂಗ್ ಡೆಲ್ಲಿಗೆ 38-29 ಅಂಕಗಳ ಗೆಲುವು ಲಭಿಸಿತು. 11 ಅಂಕ ಗಳಿಸಿ ತಂಡವನ್ನು ಗೆಲ್ಲಿಸಿದ ನವೀನ್ ಕುಮಾರ್, ಪ್ರೊ ಕಬಡ್ಡಿಯಲ್ಲಿ 1000 ರೈಡ್ ಅಂಕದ ಮೈಲಿಗಲ್ಲನ್ನೂ ಸಾಧಿಸಿದರು.
ಚೆನ್ನೈ: 10ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಹರ್ಯಾಣ ಸ್ಟೀಲರ್ಸ್ 5ನೇ ಗೆಲುವು ದಾಖಲಿಸಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಸೋಮವಾರ ತಮಿಳ್ ತಲೈವಾಸ್ ವಿರುದ್ದ ಹರ್ಯಾಣಕ್ಕೆ 42-29 ಅಂಕಗಳ ಗೆಲುವು ಲಭಿಸಿತು. ಇದು ತಲೈವಾಸ್‌ಗೆ ಟೂರ್ನಿಯಲ್ಲಿ ಸತತ 4ನೇ ಸೋಲು. ರೈಡರ್ ಶಿವಂ 8 ಅಂಕ ಗಳಿಸಿದರೆ, ಡಿಫೆಂಡರ್‌ಗಳಾದ ರಾಹುಲ್, ಜೈದೀಪ್ ತಲಾ 7 ಅಂಕ ಸಂಪಾದಿಸಿ ಗೆಲುವಿನ ರೂವಾರಿಗಳಾದರು.
ಸೋಮವಾರದ ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ದ ದಬಾಂಗ್ ಡೆಲ್ಲಿಗೆ 38-29 ಅಂಕಗಳ ಗೆಲುವು ಲಭಿಸಿತು. 11 ಅಂಕ ಗಳಿಸಿ ತಂಡವನ್ನು ಗೆಲ್ಲಿಸಿದ ನವೀನ್ ಕುಮಾರ್, ಪ್ರೊ ಕಬಡ್ಡಿಯಲ್ಲಿ 1000 ರೈಡ್ ಅಂಕದ ಮೈಲಿಗಲ್ಲನ್ನೂ ಸಾಧಿಸಿದರು.
ಇಂದಿನ ಪಂದ್ಯ:
ಪುಣೇರಿ ಪಲ್ಟನ್-ಪಾಟ್ನಾ ಪೈರೇಟ್ಸ್, ರಾತ್ರಿ 8ಕ್ಕೆ
ಪ್ರಿಯಾ, ಮಿಥುನ್‌ಗೆ ರಾಜ್ಯ ಒಲಿಂಪಿಕ್ ಸಂಸ್ಥೆ ಅವಾರ್ಡ್
ಬೆಂಗಳೂರು: ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜ್ಯದ 22 ಮಂದಿ ಕರ್ನಾಟಕ ಒಲಿಂಪಿಕ್ ಸಂಸ್ಥೆ(ಕೆಒಎ) ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೋಮವಾರ ವಿಜೇತರ ಹೆಸರನ್ನು ಕೆಒಎ ಪ್ರಕಟಿಸಿತು.
ಅಥ್ಲೆಟಿಕ್ಸ್‌ನಲ್ಲಿ ಪ್ರಿಯಾ ಮೋಹನ್, ಬ್ಯಾಡ್ಮಿಂಟನ್‌ನಲ್ಲಿ ಮಿಥುನ್ ಮಂಜುನಾಥ್, ಬಾಸ್ಕೆಟ್‌ಬಾಲ್‌ನಲ್ಲಿ ಮನೋಜ್, ಫುಟ್ಬಾಲಿಗ ಸೋಮ್ ಕುಮಾರ್, ಹಾಕಿಪಟು ಆಭರಣ್ ಸುದೇವ್, ಈಜಿನಲ್ಲಿ ತನಿಶಾ ಜಾರ್ಜ್, ಸೈಕ್ಲಿಂಗ್‌ನ ಸಂಪತ್, ಫೆನ್ಸಿಂಗ್‌ನ ಸಾತ್ವಿಕ್, ಜಿಮ್ನಾಸ್ಟಿಕ್ ತಾರೆ ಶ್ರೀವರ್ಷಿಣಿ, ನೆಟ್‌ಬಾಲ್‌ನ ಗಗನಾ, ರೈಫಲ್ ಶೂಟಿಂಗ್ ತಿಲೋತ್ತಮಾ ಸೆನ್, ಲಾನ್ ಟೆನಿಸ್‌ನ ಮನೀಶ್, ಟೆಕ್ವಾಂಡೊ ಪಟು ಪ್ರೀತಂ, ವೇಟ್‌ಲಿಫ್ಟಿಂಗ್‌ನ ಉಶಾ, ಕಯಾಕಿಂಗ್ ಪಟು ಕುಮೇಶ್ವರನ್‌ಗೂ ಪ್ರಶಸ್ತಿ ಒಲಿದಿದೆ.
IPL 2024 ಪಾಂಡ್ಯಗಾಗಿ ಗುಜರಾತ್ ಟೈಟಾನ್ಸ್‌ಗೆ ಮುಂಬೈ ಇಂಡಿಯನ್ಸ್ ನೀಡಿದ್ದು ₹100 ಕೋಟಿ?
ಇನ್ನು, 30 ವರ್ಷಗಳಿಂದಲೂ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆಯು ಮಾಧ್ಯಮ ಸಂಯೋಜಕರಾಗಿರುವ ರವೀಂದ್ರ ಸಿಂಗ್, ಹಿರಿಯ ಕ್ರೀಡಾ ಪತ್ರಕರ್ತ ಗಿರೀಶ್ ದೊಡ್ಡಮನಿ, ಫೋಟೋಗ್ರಾಫರ್ ನರಸಿಂಹ, ಮಾಜಿ ಬಾಕ್ಸರ್ ಧನಂಜಯ, ಮಾಜಿ ಹಾಕಿ ಪಟು ಸಿ ಎಸ್ ಪೂನಚ್ಚ, ಮಾಜಿ ಈಜುಪಟು ಬಿ.ಆರ್. ಗೋಪಾಲ್ ರಾವ್ ಕೂಡಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಂಗಳವಾರ ರಾಜಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ. ಇದೇ ವೇಳೆ ಏಷ್ಯನ್ ಗೇಮ್ಸ್ ಪದಕ ವಿಜೇತ ಕ್ರೀಡಾಪಟುಗಳನ್ನು ಸನ್ಮಾನಿಸಿ, ನಗದು ಬಹುಮಾನ ಹಸ್ತಾಂತರಿಸಲಾಗುವುದು ಎಂದು ಕೆಒಎ ತಿಳಿಸಿದೆ.
ಪ್ರೊ ಕಬಡ್ಡಿಯಲ್ಲೂ ಬರಲಿದೆ ಟೈ ಬ್ರೇಕರ್..! ಹೇಗಿರಲಿದೆ ಟೈ ಬ್ರೇಕರ್?
ಜ.7ರಂದು ಹುಬ್ಬಳ್ಳಿಯಲ್ಲಿ ರಾಜ್ಯ ಕ್ರಾಸ್ ಕಂಟ್ರಿ ಕೂಟ
ಬೆಂಗಳೂರು: ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ(ಕೆಎಎ)ಯ ಸಹಭಾಗಿತ್ವದಲ್ಲಿ ಧಾರವಾಡ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯು ಹುಬ್ಬಳ್ಳಿಯಲ್ಲಿ ಜ.7ರಂದು 58ನೇ ರಾಜ್ಯ ಮಟ್ಟದ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್ ಆಯೋಜಿಸಲಿದೆ. ಅಂಡರ್-16, ಅಂಡರ್-18 ಹಾಗೂ ಅಂಡರ್-20 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಈ ಕೂಟವು ಜ.15ಕ್ಕೆ ಬಿಹಾರದಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರಾಸ್ ಕಂಟ್ರಿ ಕೂಟಕ್ಕೆ ಆಯ್ಕೆ ಟ್ರಯಲ್ಸ್ ಆಗಿರಲಿದೆ ಎಂದು ಕೆಎಎ ಪ್ರಕಟನೆಯಲ್ಲಿ ತಿಳಿಸಿದೆ.