Pro Kabaddi League: ಬೆಂಗಳೂರು ಬುಲ್ಸ್‌ಗೆ 1 ಅಂಕ ವಿರೋಚಿತ ಸೋಲು

By Kannadaprabha News  |  First Published Dec 30, 2023, 6:31 AM IST

ಮೊದಲಾರ್ಧದ ಮುಕ್ತಾಯಕ್ಕೆ 13-15ರ ಹಿನ್ನಡೆ ಅನುಭವಿಸಿದ್ದ ಬೆಂಗಳೂರು ಬುಲ್ಸ್‌, ದ್ವಿತೀಯಾರ್ಧದ ಆರಂಭದಲ್ಲೇ ಆಲೌಟ್‌ ಆಯಿತು. ಇದರಿಂದಾಗಿ ಅಂತರ 14-18ಕ್ಕೆ ಹೆಚ್ಚಿತು. ಬಳಿಕ 37ನೇ ನಿಮಿಷದಲ್ಲಿ ಮತ್ತೊಮ್ಮೆ ಆಲೌಟ್‌ ಆಗಿದ್ದರಿಂದ 26-33ರ ಹಿನ್ನಡೆ ಕಂಡ ಬುಲ್ಸ್‌ಗೆ ಯುವ ರೈಡರ್‌ ಸುಶೀಲ್‌ ಜಯದ ಆಸೆ ಮೂಡಿಸಿದರು.


ನೋಯ್ಡಾ(ಡಿ.30): 10ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ ಮತ್ತೊಮ್ಮೆ ಜಯದ ಹೊಸ್ತಿಲಲ್ಲಿ ಎಡವಿದೆ. ಯು.ಪಿ.ಯೋಧಾಸ್‌ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಬುಲ್ಸ್‌ಗೆ 33-34 ಅಂಕಗಳ ವೀರೋಚಿತ ಸೋಲು ಎದುರಾಯಿತು. ಈ ಆವೃತ್ತಿಯಲ್ಲಿ ತಂಡಕ್ಕಿದು 9 ಪಂದ್ಯಗಳಲ್ಲಿ 6ನೇ ಸೋಲು.

ಮೊದಲಾರ್ಧದ ಮುಕ್ತಾಯಕ್ಕೆ 13-15ರ ಹಿನ್ನಡೆ ಅನುಭವಿಸಿದ್ದ ಬೆಂಗಳೂರು ಬುಲ್ಸ್‌, ದ್ವಿತೀಯಾರ್ಧದ ಆರಂಭದಲ್ಲೇ ಆಲೌಟ್‌ ಆಯಿತು. ಇದರಿಂದಾಗಿ ಅಂತರ 14-18ಕ್ಕೆ ಹೆಚ್ಚಿತು. ಬಳಿಕ 37ನೇ ನಿಮಿಷದಲ್ಲಿ ಮತ್ತೊಮ್ಮೆ ಆಲೌಟ್‌ ಆಗಿದ್ದರಿಂದ 26-33ರ ಹಿನ್ನಡೆ ಕಂಡ ಬುಲ್ಸ್‌ಗೆ ಯುವ ರೈಡರ್‌ ಸುಶೀಲ್‌ ಜಯದ ಆಸೆ ಮೂಡಿಸಿದರು.

Tap to resize

Latest Videos

undefined

Ind vs SA: ನಿವೃತ್ತಿಯ ಪಂದ್ಯದಲ್ಲಿ ಡೀನ್ ಎಲ್ಗರ್‌ಗೆ ದಕ್ಷಿಣ ಆಫ್ರಿಕಾ ನಾಯಕ ಸ್ಥಾನ!

35ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಅಂಕಣಕ್ಕೆ ಕಾಲಿಟ್ಟ ಸುಶೀಲ್‌, 8 ರೈಡ್‌ ಅಂಕ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಪ್ರಮುಖ ರೈಡರ್‌ಗಳಾದ ಭರತ್‌ ಹಾಗೂ ವಿಕಾಸ್‌ ಖಂಡೋಲಾ ಅವರ ವೈಫಲ್ಯ, ಡಿಫೆಂಡರ್‌ಗಳ ಸಾಧಾರಣ ಆಟ ಸೋಲಿಗೆ ಪ್ರಮುಖ ಕಾರಣ ಎನಿಸಿತು.

ಯೋಧಾಸ್‌ಗೆ ನಾಯಕ ಪ್ರದೀಪ್‌ ನರ್ವಾಲ್‌ ನೆರವಾದರು. ಲೀಗ್‌ ಇತಿಹಾಸದಲ್ಲೇ ಅತಿಹೆಚ್ಚು ಅಂಕ ಗಳಿಸಿದ ದಾಖಲೆ ಹೊಂದಿರುವ ಪ್ರದೀಪ್‌, ಪಂದ್ಯದಲ್ಲಿ 10 ಅಂಕ ಗಳಿಸಿ ಜಯದಲ್ಲಿ ಮಹತ್ವದ ಪಾತ್ರ ವಹಿಸಿದರು. ಈ ಜಯ ಯೋಧಾಸ್‌ ಪಡೆಯನ್ನು ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿಸಿತು.

ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಹರ್ಯಾಣ ವಿರುದ್ಧ ಪಾಟ್ನಾ 46-33 ಅಂಕಗಳ ಗೆಲುವು ಪಡೆಯಿತು.

ಇಂದಿನ ಪಂದ್ಯಗಳು: 
ಟೈಟಾನ್ಸ್‌-ಮುಂಬಾ, ರಾತ್ರಿ 8ಕ್ಕೆ, 
ಯೋಧಾಸ್‌-ಡೆಲ್ಲಿ, ರಾತ್ರಿ 9ಕ್ಕೆ

ದಕ್ಷಿಣ ವಲಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಚಾಂಪಿಯನ್‌

ಬೆಂಗಳೂರು: 34ನೇ ದಕ್ಷಿಣ ವಲಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಬೆಂಗಳೂರಲ್ಲಿ ನಡೆದ 3 ದಿನಗಳ ಕೂಟದ ಕೊನೆಯ ದಿನವಾದ ಶುಕ್ರವಾರ ರಾಜ್ಯದ ಈಜುಪಟುಗಳು 51 ಪದಕಗಳನ್ನು ಗೆದ್ದರು.

ಕರ್ನಾಟಕ ಒಟ್ಟಾರೆ 80 ಚಿನ್ನ, 62 ಬೆಳ್ಳಿ, 30 ಕಂಚು ಸೇರಿ 172 ಪದಕಗಳನ್ನು ಜಯಿಸಿತು. 6 ರಾಜ್ಯಗಳ ನೂರಾರು ಸ್ಪರ್ಧಿಗಳು ಪಾಲ್ಗೊಂಡಿದ್ದ ಕೂಟದಲ್ಲಿ ಕರ್ನಾಟಕದ ಹಲವು ಈಜುಪಟುಗಳು ಕೂಟ ದಾಖಲೆಗಳನ್ನು ಬರೆದರು. 11 ಚಿನ್ನ, 14 ಬೆಳ್ಳಿ, 12 ಕಂಚು ಸೇರಿ ಒಟ್ಟು 37 ಪದಕ ಗೆದ್ದ ತೆಲಂಗಾಣ 2ನೇ ಸ್ಥಾನ ಪಡೆದರೆ, 8 ಚಿನ್ನ, 17 ಬೆಳ್ಳಿ, 24 ಕಂಚಿನ ಪದಗಳೊಂದಿಗೆ ಒಟ್ಟು 49 ಪದಕಗಳನ್ನು ಜಯಿಸಿದ ಕೇರಳ ತಂಡ 3ನೇ ಸ್ಥಾನಿಯಾಯಿತು.

ಪೋಲಿ ಆಗಿಬಿಟ್ರಾ ಟೀಮ್‌ ಇಂಡಿಯಾ ಯುವ ವೇಗಿ, ಟ್ವಿಟರ್‌ನಲ್ಲಿ ಮಾಡೆಲ್‌, ನಟಿಯರ ಹಸಿಬಿಸಿ ಚಿತ್ರಗಳಿಗೆ ಲೈಕ್‌!

4ನೇ ಸ್ಥಾನ ಪಡೆದ ತಮಿಳುನಾಡು 5 ಚಿನ್ನ 8 ಬೆಳ್ಳಿ, 31 ಕಂಚಿನೊಂದಿಗೆ ಒಟ್ಟು 44 ಪದಕ ಪಡೆದರೆ, 2 ಚಿನ್ನ, 6 ಬೆಳ್ಳಿ, 7 ಕಂಚಿನ ಪದಕಗಳೊಂದಿಗೆ ಒಟ್ಟು 15 ಪದಕಗಳನ್ನು ಜಯಿಸಿದ ಆಂಧ್ರ ಪ್ರದೇಶ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಕೇವಲ 1 ಕಂಚಿನ ಪದಕ ಪಡೆದ ಪುದುಚೇರಿ ಕೊನೆಯ ಸ್ಥಾನ ಗಳಿಸಿತು.

ವಾಟರ್‌ ಪೋಲೋ ಸ್ಪರ್ಧೆಯಲ್ಲಿ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡಗಳೆರಡೂ 2ನೇ ಸ್ಥಾನ ಪಡೆದವು.
 

click me!