Ind vs SA: ನಿವೃತ್ತಿಯ ಪಂದ್ಯದಲ್ಲಿ ಡೀನ್ ಎಲ್ಗರ್‌ಗೆ ದಕ್ಷಿಣ ಆಫ್ರಿಕಾ ನಾಯಕ ಸ್ಥಾನ!

By Kannadaprabha News  |  First Published Dec 30, 2023, 5:56 AM IST

ಜುಬೇರ್‌ ಹಮ್ಜಾಗೆ ತಂಡದಲ್ಲಿ ಸ್ಥಾನ ನೀಡಲಾಗಿದ್ದು, ತೆಂಬ ಬವುಮಾ ಬದಲು ಆಡುವ ನಿರೀಕ್ಷೆ ಇದೆ. ಎಲ್ಗರ್‌ 2017ರಿಂದ 2023ರ ನಡುವೆ 17 ಟೆಸ್ಟ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅವರ ನಾಯಕತ್ವದಲ್ಲಿ ದ.ಆಫ್ರಿಕಾ 9 ಗೆಲುವು, 7 ಸೋಲು, 1 ಡ್ರಾ ಕಂಡಿದೆ.


ಸೆಂಚೂರಿಯನ್‌(ಡಿ.30): ಭಾರತ ವಿರುದ್ಧ ಸದ್ಯ ಚಾಲ್ತಿಯಲ್ಲಿರುವ ಸರಣಿ ಬಳಿಕ ನಿವೃತ್ತಿ ಪಡೆಯಲಿರುವ ಡೀನ್‌ ಎಲ್ಗರ್‌ರನ್ನು, ಜನವರಿ 3ರಿಂದ ಆರಂಭಗೊಳ್ಳಲಿರುವ 2ನೇ ಟೆಸ್ಟ್‌ಗೆ ದ.ಆಫ್ರಿಕಾ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ. ಮೊದಲ ಟೆಸ್ಟ್‌ ವೇಳೆ ಗಾಯಗೊಂಡ ಕಾಯಂ ನಾಯಕ ತೆಂಬ ಬವುಮಾ, 2ನೇ ಟೆಸ್ಟ್‌ನಿಂದ ಹೊರಬಿದ್ದಿದ್ದು, ಅವರ ಬದಲು ಎಲ್ಗರ್‌ ತಂಡ ಮುನ್ನಡೆಸಲಿದ್ದಾರೆ ಎಂದು ದ.ಆಫ್ರಿಕಾ ಕ್ರಿಕೆಟ್‌ ತಿಳಿಸಿದೆ. 

ಜುಬೇರ್‌ ಹಮ್ಜಾಗೆ ತಂಡದಲ್ಲಿ ಸ್ಥಾನ ನೀಡಲಾಗಿದ್ದು, ತೆಂಬ ಬವುಮಾ ಬದಲು ಆಡುವ ನಿರೀಕ್ಷೆ ಇದೆ. ಎಲ್ಗರ್‌ 2017ರಿಂದ 2023ರ ನಡುವೆ 17 ಟೆಸ್ಟ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅವರ ನಾಯಕತ್ವದಲ್ಲಿ ದ.ಆಫ್ರಿಕಾ 9 ಗೆಲುವು, 7 ಸೋಲು, 1 ಡ್ರಾ ಕಂಡಿದೆ.

Latest Videos

undefined

ನಿಧಾನಗತಿ ಬೌಲಿಂಗ್‌: 2 ಅಂಕ ಕೈಚೆಲ್ಲಿದ ಭಾರತ!

ದುಬೈ: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ ಮೂರೇ ದಿನಕ್ಕೆ ಮುಗಿದರೂ, ನಿಧಾನಗತಿ ಬೌಲಿಂಗ್‌ನಿಂದಾಗಿ ಭಾರತ ದಂಡ ಹಾಕಿಸಿಕೊಳ್ಳುವುದರಿಂದ ಪಾರಾಗಲು ಸಾಧ್ಯವಾಗಿಲ್ಲ. ಭಾರತೀಯ ಆಟಗಾರರಿಗೆ ಪಂದ್ಯದ ಸಂಭಾವನೆಯ ಶೇ.10ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಿರುವ ಐಸಿಸಿ, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ 2 ಅಂಕಗಳನ್ನೂ ಕಡಿತಗೊಳಿಸಿದೆ. ನಿಗದಿತ ಸಮಯದಲ್ಲಿ ಭಾರತ 2 ಓವರ್‌ ಹಿಂದಿತ್ತು ಎಂದು ಮ್ಯಾಚ್‌ ರೆಫ್ರಿ ಕ್ರಿಸ್‌ ಬ್ರಾಡ್‌ ತಿಳಿಸಿದ್ದಾರೆ.

ಪೋಲಿ ಆಗಿಬಿಟ್ರಾ ಟೀಮ್‌ ಇಂಡಿಯಾ ಯುವ ವೇಗಿ, ಟ್ವಿಟರ್‌ನಲ್ಲಿ ಮಾಡೆಲ್‌, ನಟಿಯರ ಹಸಿಬಿಸಿ ಚಿತ್ರಗಳಿಗೆ ಲೈಕ್‌!

ಅಭ್ಯಾಸ ಆರಂಭಿಸಿದ ರವೀಂದ್ರ ಜಡೇಜಾ: 2ನೇ ಟೆಸ್ಟ್‌ಗೆ ಲಭ್ಯ?

ಸೆಂಚೂರಿಯನ್‌: ಮೊದಲ ಟೆಸ್ಟ್‌ನ ಮೊದಲ ದಿನದಾಟಕ್ಕೂ ಮುನ್ನ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿ ಪಂದ್ಯಕ್ಕೆ ಗೈರಾಗಿದ್ದ ಆಲ್ರೌಂಡರ್‌ ರವೀಂದ್ರ ಜಡೇಜಾ, ಗುರುವಾರದಿಂದ ಅಭ್ಯಾಸ ಆರಂಭಿಸಿದ್ದು, ದ.ಆಫ್ರಿಕಾ ವಿರುದ್ಧದ 2ನೇ ಟೆಸ್ಟ್‌ಗೆ ಲಭ್ಯರಾಗುವ ಸಾಧ್ಯತೆ ಇದೆ. ಜ.3ರಿಂದ ಕೇಪ್‌ಟೌನ್‌ನಲ್ಲಿ ಪಂದ್ಯ ನಡೆಯಲಿದೆ.

2ನೇ ಟೆಸ್ಟ್‌: ವೇಗಿ ಆವೇಶ್‌ ಭಾರತ ತಂಡಕ್ಕೆ ಸೇರ್ಪಡೆ

ಸೆಂಚೂರಿಯನ್‌: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಹೀನಾಯ ಸೋಲುಂಡ ಬಳಿಕ ಭಾರತ, 2ನೇ ಟೆಸ್ಟ್‌ಗೆ ತನ್ನ ವೇಗದ ಬೌಲಿಂಗ್‌ ಪಡೆಯ ಬಲ ಹೆಚ್ಚಿಸಲು ಯುವ ವೇಗಿ ಆವೇಶ್‌ ಖಾನ್‌ರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಗಾಯಾಳು ಮೊಹಮದ್‌ ಶಮಿ ಬದಲು ಆವೇಶ್‌ ತಂಡ ಕೂಡಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಭಾರತ ‘ಎ’ ಪರ ಆಡುತ್ತಿರುವ ಆವೇಶ್‌, ದ.ಆಫ್ರಿಕಾ ‘ಎ’ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಸಚಿನ್, ದ್ರಾವಿಡ್, ಗಂಗೂಲಿ ಜತೆ ತಂಡದಲ್ಲಿದ್ದ ಕ್ರಿಕೆಟಿಗ ಆಟವಾಡಲಾಗದೆ ಉದ್ಯಮಿಯಾಗಿ ಗೆದ್ರು!

ಪಾಕಿಸ್ತಾನ ವಿರುದ್ಧ ಟೆಸ್ಟ್‌ ಸರಣಿ ಗೆದ್ದ ಆಸ್ಟ್ರೇಲಿಯಾ

ಮೆಲ್ಬರ್ನ್‌: ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್‌ನಲ್ಲಿ 79 ರನ್‌ ಜಯ ಸಾಧಿಸಿದ ಆಸ್ಟ್ರೇಲಿಯಾ, 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದಿದೆ. 6 ವಿಕೆಟ್‌ಗೆ 187 ರನ್‌ಗಳಿಂದ 4ನೇ ದಿನದಾಟವನ್ನು ಆರಂಭಿಸಿದ ಆಸ್ಟ್ರೇಲಿಯಾ, 2ನೇ ಇನ್ನಿಂಗ್ಸಲ್ಲಿ 262 ರನ್‌ಗೆ ಆಲೌಟ್‌ ಆಯಿತು. ಅಲೆಕ್ಸ್‌ ಕೇರ್ರಿ 53 ರನ್‌ ಗಳಿಸಿ ತಂಡಕ್ಕೆ ನೆರವಾದರು.

ಗೆಲುವಿಗೆ 317 ರನ್‌ ಗುರಿ ಬೆನ್ನತ್ತಿದ ಪಾಕಿಸ್ತಾನ, 2ನೇ ಇನ್ನಿಂಗ್ಸಲ್ಲಿ 237 ರನ್‌ಗೆ ಆಲೌಟ್‌ ಆಯಿತು. ನಾಯಕ ಶಾನ್‌ ಮಸೂದ್‌ (60), ಅಘಾ ಸಲ್ಮಾನ್‌ (50)ರ ಹೋರಾಟದ ಅರ್ಧಶತಕಗಳು ವ್ಯರ್ಥವಾದವು. ಆಸೀಸ್‌ ನಾಯಕ ಪ್ಯಾಟ್‌ ಕಮಿನ್ಸ್‌ 5, ಮಿಚೆಲ್‌ ಸ್ಟಾರ್ಕ್‌ 4 ವಿಕೆಟ್‌ ಕಿತ್ತರು. ಜ.3ರಿಂದ ಸಿಡ್ನಿಯಲ್ಲಿ 3ನೇ ಟೆಸ್ಟ್‌ ಆರಂಭಗೊಳ್ಳಲಿದೆ. 1995ರಲ್ಲಿ ಸಿಡ್ನಿಯಲ್ಲಿ ಸಾಧಿಸಿದ್ದ ಗೆಲುವು, ಆಸೀಸ್‌ ನೆಲದಲ್ಲಿ ಪಾಕ್‌ಗೆ ಸಿಕ್ಕ ಕೊನೆಯ ಗೆಲುವಾಗಿದೆ.

click me!