
ನವದೆಹಲಿ(ಮೇ.22): 5ನೇ ಆವೃತ್ತಿಯ ಪ್ರೊ-ಕಬಡ್ಡಿಗೆ ಇಂದು ಆಟಗಾರರ ಹರಾಜು ನಡೆಯಲಿದ್ದು, ನಾಲ್ಕು ಹೊಸ ತಂಡಗಳು ಸೇರಿ ಒಟ್ಟು 12 ತಂಡಗಳು ಆಟಗಾರರನ್ನು ಖರೀದಿಸಲಿವೆ.
ಸುಮಾರು 350ಕ್ಕೂ ಹೆಚ್ಚು ದೇಶಿ ಹಾಗೂ ವಿದೇಶಿ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜೈಪುರ ತಂಡವೊಂದನ್ನು ಹೊರತುಪಡಿಸಿ ಎಲ್ಲಾ ಏಳು ತಂಡಗಳು ತಲಾ ಒಬ್ಬ ಆಟಗಾರನನ್ನು ಈ ಆವೃತ್ತಿಗೆ ಉಳಿಸಿಕೊಂಡಿವೆ. ಇಂದು ಹಾಗೂ ನಾಳೆ ನಡೆಯುವ ಹರಾಜನಲ್ಲಿ ಆಟಗಾರರನ್ನು 3 ವಿವಿಧ ಗುಂಪುಗಳಾಗಿ ವಿಗಂಡಿಸಲಾಗಿದೆ.
‘ಎ' ಗುಂಪಿನಲ್ಲಿ ಈ ಮೊದಲಿನ ಆವೃತ್ತಿಗಳಲ್ಲಿ ಆಡಿದ್ದ ಪ್ರತಿಷ್ಠಿತ ಆಟಗಾರರಿದ್ದರೆ, ‘ಬಿ' ಗುಂಪಿನಲ್ಲಿ ಉಳಿದ ಭಾರತೀಯ ಹಾಗೂ ವಿದೇಶಿ ಆಟಗಾರರಿದ್ದಾರೆ. ‘ಸಿ' ಗುಂಪಿನಲ್ಲಿ ನೂತನ ಯುವ ಆಟಗಾರರಿದ್ದಾರೆ. ಪ್ರತಿ ತಂಡ 18-25 ಆಟಗಾರರನ್ನು ಖರೀದಿಸಬಹುದಾಗಿದೆ. ಇದರಲ್ಲಿ ಒಬ್ಬ ಪ್ರತಿಷ್ಠಿತ ಆಟಗಾರನನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಜತೆಗೆ ಮೂವರು ನೂತನ ಯುವ ಆಟಗಾರರು ಹಾಗೂ ಕನಿಷ್ಠ 2, ಗರಿಷ್ಠ 4 ವಿದೇಶಿ ಆಟಗಾರರನ್ನು ಖರೀದಿಸಬಹುದಾಗಿದೆ.
‘ಎ' ಗುಂಪಿನಲ್ಲಿರುವ ಆಟಗಾರರ ಮೂಲಬೆಲೆ ರೂ.35 ಲಕ್ಷಗಳಾದರೆ, ‘ಬಿ' ಗುಂಪಿನಲ್ಲಿರುವವರಿಗೆ ರೂ.20 ಲಕ್ಷ ಹಾಗೂ ‘ಸಿ' ಗುಂಪಿನಲ್ಲಿರುವ ಆಟಗಾರರಿಗೆ ರೂ.12 ಲಕ್ಷವಾಗಿದೆ. ಇನ್ನು ಯುವ ಆಟಗಾರರಿಗೆ ರೂ.6 ಲಕ್ಷ ಸಂಭಾವನೆ ನಿಗದಿ ಪಡಿಸಲಾಗಿದೆ. ಪ್ರತಿ ತಂಡ ಗರಿಷ್ಠ ರೂ.4 ಕೋಟಿ ಖರ್ಚು ಮಾಡಬಹುದಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.