ಇಂದು, ನಾಳೆ ಪ್ರೊ ಕಬಡ್ಡಿ ಆಟಗಾರರ ಹರಾಜು: ಪವನ್‌, ಭರತ್‌ ಆಕರ್ಷಣೆ

By Kannadaprabha News  |  First Published Aug 15, 2024, 11:19 AM IST

ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಇಂದು ಹಾಗೂ ನಾಳೆ ನಡೆಯಲಿದ್ದು, ಪವನ್ ಶೆರಾವತ್, ಭರತ್ ಹೂಡಾ ಮೇಲೆ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಮುಂಬೈ: 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆ ಗುರುವಾರ ಹಾಗೂ ಶುಕ್ರವಾರ ಮುಂಬೈನಲ್ಲಿ ನಡೆಯಲಿದೆ. ಹರಾಜಿಗೂ ಮೊದಲೇ ಎಲ್ಲಾ 12 ತಂಡಗಳು ಸೇರಿ ಒಟ್ಟು 22 ಆಟಗಾರರನ್ನು ಉಳಿಸಿಕೊಂಡಿದ್ದವು. ಇದೀಗ ಉಳಿದ ಆಟಗಾರರನ್ನು ಖರೀದಿಸಲು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿವೆ.

ಪ್ರತಿ ತಂಡವು ಕನಿಷ್ಠ 18 ಹಾಗೂ ಗರಿಷ್ಠ 25 ಆಟಗಾರರನ್ನು ಖರೀದಿಸಬಹುದಾಗಿದ್ದು, ಸದ್ಯ ರೀಟೈನ್‌ ಆಗಿರುವ 88 ಆಟಗಾರರನ್ನು ಬಿಟ್ಟು ಇನ್ನೂ ಗರಿಷ್ಠ 212 ಆಟಗಾರರಿಗೆ ಅವಕಾಶವಿದೆ. ಈ ಸ್ಥಾನಗಳಿಗೆ 500ಕ್ಕೂ ಹೆಚ್ಚು ಆಟಗಾರರು ಪೈಪೋಟಿಯಲ್ಲಿದ್ದಾರೆ.

Tap to resize

Latest Videos

undefined

ಆಟಗಾರರ ಖರೀದಿಗೆ ಪ್ರತಿ ತಂಡ ಒಟ್ಟು 5 ಕೋಟಿ ರು. ಬಳಸಬಹುದಾಗಿದೆ. ರೀಟೈನ್ ಮಾಡಿಕೊಂಡಿರುವ ಆಟಗಾರರಿಗೆ ನೀಡುವ ಸಂಭಾವನೆಯೂ ಇದರಲ್ಲಿ ಸೇರಿರಲಿದೆ.

ದುಲೀಪ್ ಟ್ರೋಫಿಗೆ 4 ತಂಡ ಪ್ರಕಟ: ಶುಭಮನ್ ಗಿಲ್ ನಾಯಕತ್ವದಲ್ಲಿ ಆಡಲಿರುವ ಕೆ.ಎಲ್.ರಾಹುಲ್!

ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರನ್ನು 4 ವಿಭಾಗಗಳಾಗಿ ವಿಂಗಡಿಸಲಾಗಿದೆ. ‘ಎ’ ವಿಭಾಗದಲ್ಲಿರುವ ಆಟಗಾರರ ಮೂಲಬೆಲೆ ₹30 ಲಕ್ಷ ಇದ್ದು, ‘ಬಿ’ ವಿಭಾಗದಲ್ಲಿರುವ ಆಟಗಾರರು ₹20 ಲಕ್ಷ, ‘ಸಿ’ ವಿಭಾಗದಲ್ಲಿರುವ ಆಟಗಾರರು ₹13 ಲಕ್ಷ ಹಾಗೂ ‘ಡಿ’ ವಿಭಾಗದಲ್ಲಿರುವ ಆಟಗಾರರು ₹9 ಲಕ್ಷ ಮೂಲಬೆಲೆ ಹೊಂದಿದ್ದಾರೆ.

ಪವನ್‌, ಭರತ್‌ ಆಕರ್ಷಣೆ

ಕಳೆದೆರೆಡು ಆವೃತ್ತಿಗಳ ಪ್ರೊ ಕಬಡ್ಡಿಯಲ್ಲಿ ₹2 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗಿ, ಲೀಗ್‌ನ ಅತ್ಯಂತ ದುಬಾರಿ ಆಟಗಾರ ಎನಿಸಿದ್ದ ಪವನ್‌ ಶೆರಾವತ್‌, ಬೆಂಗಳೂರು ಬುಲ್ಸ್‌ ತಂಡದಲ್ಲಿ ಮಿಂಚಿದ್ದ ಭರತ್‌ ಹೂಡಾ, ಲೀಗ್‌ನ ಸಾರ್ವಕಾಲಿಕ ಶ್ರೇಷ್ಠ ರೈಡರ್‌ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಪ್ರದೀಪ್‌ ನರ್ವಾಲ್‌, ಮಣೀಂದರ್ ಸಿಂಗ್‌ ಸೇರಿ ಹಲವು ತಾರಾ ಆಟಗಾರರು ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

Breaking: ವಿನೇಶ್‌ ಪೋಗಟ್‌ ಅರ್ಜಿ ವಜಾ, ಭಾರತಕ್ಕಿಲ್ಲ ಬೆಳ್ಳಿ ಪದಕ!

ಪ್ರೊ ಕಬಡ್ಡಿ: ಪಾಟ್ನಾ ತಂಡಕ್ಕೆ ಕನ್ನಡಿಗ ಪ್ರಶಾಂತ್‌ ಕೋಚ್‌

ಬೆಂಗಳೂರು: ಪ್ರೊ ಕಬಡ್ಡಿ 11ನೇ ಆವೃತ್ತಿಯಲ್ಲಿ ಕನ್ನಡಿಗ ಪ್ರಶಾಂತ್‌ ರೈ ಪಾಟ್ನಾ ಪೈರೇಟ್ಸ್‌ ತಂಡದ ಸಹಾಯಕ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇದೇ ಮೊದಲ ಬಾರಿಗೆ ಅವರು ತಂಡವೊಂದರ ಕೋಚ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. 

ಪ್ರೊ ಕಬಡ್ಡಿಯಲ್ಲಿ ಮೊದಲ ಆವೃತ್ತಿಯಿಂದ 9ನೇ ಆವೃತ್ತಿಯ ವರೆಗೂ ಆಟಗಾರನಾಗಿ ಆಡಿದ್ದ ಪ್ರಶಾಂತ್‌, ಕೆಲ ವರ್ಷಗಳ ಕಾಲ ಪಾಟ್ನಾ ತಂಡದಲ್ಲೂ ಆಡಿದ್ದಲ್ಲದೇ, ಆ ತಂಡದ ನಾಯಕನ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು. ಅವರ ನಾಯಕತ್ವದಲ್ಲಿ ತಂಡ ಫೈನಲ್‌ ಸಹ ಪ್ರವೇಶಿಸಿತ್ತು. 

ಭಾರತ ಕಿರಿಯರ ಹಾಕಿ ತಂಡದ ಕೋಚ್ ಆಗಿ ಶ್ರೀಜೇಶ್ ನೇಮಕ

ನವದೆಹಲಿ: ಭಾರತ ಕಿರಿಯ ಪುರುಷರ ಹಾಕಿ ತಂಡದ ನೂತನ ಕೋಚ್ ಆಗಿ ಇತ್ತೀಚೆಗೆ ನಿವೃತ್ತಿ ಪಡೆದ ದಿಗ್ಗಜ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್‌ರನ್ನು ಹಾಕಿ ಇಂಡಿಯಾ ಬುಧವಾರ ಅಧಿಕೃತವಾಗಿ ನೇಮಕ ಮಾಡಿದೆ. ಇದೇ ವೇಳೆ ಶ್ರೀಜೇಶ್ ಧರಿಸುತ್ತಿದ್ದ 16ನೇ ಸಂಖ್ಯೆಯ ಜೆರ್ಸಿಯನ್ನು ಹಾಕಿ ಇಂಡಿಯಾ ನಿವೃತ್ತಿಗೊಳಿಸಿದೆ. 

ಇನ್ಮುಂದೆ ಹಿರಿಯರ ತಂಡದಲ್ಲಿ ಯಾವ ಆಟಗಾರನಿಗೂ ನಂ.16ರ ಜೆರ್ಸಿ ಸಿಗುವುದಿಲ್ಲ. ಕಿರಿಯರ ತಂಡದಲ್ಲಿ ಈ ಸಂಖ್ಯೆಯ ಜೆರ್ಸಿ ಇರಲಿದೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್‌ ಟಿರ್ಕೆ ಸ್ಪಷ್ಟಪಡಿಸಿದ್ದಾರೆ.

click me!