Pro kabaddi League ಯುಪಿ ಯೋಧಾಸ್ ಠಕ್ಕರ್‌ಗೆ ಗುಜರಾತ್ ಜೈಂಟ್ಸ್ ಪಂಚರ್!

Published : Oct 19, 2022, 10:54 PM IST
Pro kabaddi League ಯುಪಿ ಯೋಧಾಸ್ ಠಕ್ಕರ್‌ಗೆ ಗುಜರಾತ್ ಜೈಂಟ್ಸ್ ಪಂಚರ್!

ಸಾರಾಂಶ

ಚಂದ್ರನ್‌ ರಂಜಿತ್‌ ಆಕ್ರಮಣಕಾರಿ ಆಟಕ್ಕೆ ಯುಪಿ ಯೋಧಾಸ್ ಗೆಲುವಿನ ನಗೆ ಬೀರಿದೆ. ಗುಜರಾತ್ ಜೈಂಟ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ 51-45  ಯಪಿ ಗೆಲುವು ದಾಖಲಿಸಿದೆ

ಬೆಂಗಳೂರು(ಅ.19):  ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್‌ನ 28ನೇ ಪಂದ್ಯದಲ್ಲಿ ಗುಜರಾತ್‌ ಜಯಂಟ್ಸ್‌ 51-45 ಅಂತರದಲ್ಲಿ ಯುಪಿ ಯೋಧಾಸ್‌ ವಿರುದ್ಧ ಜಯ ಗಳಿಸಿತು. ನಾಯಕ ಚಂದ್ರನ್‌ ರಂಜಿತ್‌ (20) ಹಾಗೂ ರಂಜಿತ್‌ (16) ರೈಡಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಗುಜರಾತ್‌ ಜಯಂಟ್ಸ್‌ ಪ್ರಸಕ್ತ ಆವೃತ್ತಿಯಲ್ಲಿ ಎರಡನೇ ಜಯ ಗಳಿಸಿತು. ಈ ಜಯದೊಂದಿಗೆ ಗುಜರಾತ್‌ ಜಯಂಟ್ಸ್‌ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿಯಿತು.
ಯುಪಿ ಯೋಧಾಸ್‌ ಪರ ಪ್ರದೀಪ್‌ ನರ್ವಾಲ್‌ (17 )ಹಾಗೂ ಸುರಿಂದರ್‌ ಗಿಲ್‌ (14) ಉತ್ತಮ ರೈಡಿಂಗ್‌ ಪ್ರದರ್ಶನ ನೀಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. 

ದ್ವಿತಿಯಾರ್ಧದ ಆರಂಭದಲ್ಲೇ ಗುಜರಾತ್‌ ಜಯಂಟ್ಸ್‌ ಎದುರಾಳಿಯನ್ನು ಆಲೌಟ್‌ ಮಾಡುವ ಮೂಲಕ 25-23 ಅಂಕಗಳಲ್ಲಿ ಮುನ್ನಡೆ ಕಂಡು ಪಂದ್ಯದ ಮೇಲೆ ಹಿಡಿತ ಸಾಧಿಸಿತು. ನಂತರದ ಐದು ನಿಮಿಷಗಳ ಅವಧಿಯಲ್ಲಿ ಯುಪಿ ಯೋಧಾಸ್‌ ಎರಡನೇ ಬಾರಿಗೆ ಆಲೌಟ್‌ ಆಗುವವ ಮೂಲಕ ಗುಜರಾತ್‌ ಜಯಂಟ್ಸ್‌ 37-29 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು.  ಪಂದ್ಯ ಮುಗಿರಯಲು 4 ನಿಮಿಷ ಬಾಕಿ ಇರುವಾಗ ಯುಪಿ ಯೋಧಾಸ್‌ ಮತ್ತೊಮ್ಮೆ ಆಲೌಟ್‌ ಆಗುವ ಮೂಲಕ ಗುಜರಾತ್‌ ಜಯಂಟ್ಸ್‌ 49-38 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡು ಜಯದತ್ತ ಹೆಜ್ಜೆ ಹಾಕಿತು.

ಬುಲ್ಸ್ ಡಿಚ್ಚಿಗೆ ತಮಿಳು ತಲೈವಾಸ್‌ ಪಲ್ಟಿ, ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಬೆಂಗಳೂರು!

ಯುಪಿ ಯೋಧಾಸ್‌ ಮುನ್ನಡೆ: ಉತ್ತಮ ಪೈಪೋಟಿಯಿಂದ ಕೂಡಿದ ಪ್ರಥಮಾರ್ಧದಲ್ಲಿ ಯುಪಿ ಯೋಧಾಸ್‌ ತಂಡ ಗುಜರಾತ್‌ ಜಯಂಟ್ಸ್‌ ವಿರುದ್ಧ 21-19 ಅಂತರದಲ್ಲಿ ಮುನ್ನಡೆದಿದೆ. ಪ್ರದೀಪ್‌ ನರ್ವಾಲ್‌ (8) ಹಾಗೂ ಸುರಿಂದರ್‌ ಗಿಲ್‌ (5) ರೈಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ತಂಡದ ಮುನ್ನಡೆಗೆ ನೆರವಾದರು. ಪ್ರದೀಪ್‌ ನರ್ವಾಲ್‌ ಸೂಪರ್‌ ರೈಡ್‌ ಸಾಧನೆ ಪಂದ್ಯದ ಆಕರ್ಷಣೆಯಾಗಿತ್ತು. 

ಗುಜರಾತ್‌ ಜಯಂಟ್ಸ್‌ ಪರ ನಾಯಕ ಚಂದ್ರನ್‌ ರಂಜಿತ್‌ 13 ಅಂಕಗಳನ್ನು ಗಳಿಸಿ ಪ್ರಥಮಾರ್ಧದಲ್ಲೇ ಸೂಪರ್‌ ಟೆನ್‌ ಸಾಧನೆ ಮಾಡಿದರು. ರಂಜಿತ್‌ ಅವರ ಒಟ್ಟು ಅಂಕದಲ್ಲಿ ಸೂಪರ್‌ ರೈಡ್‌ ಸಾಧನೆಯೂ ಸೇರಿತ್ತು. ಸಮಬಲದ ಹೋರಾಟ ಕಂಡು ಬಂದ ಪಂದ್ಯದಲ್ಲಿ ಗುಜರಾತ್‌ ಜಯಂಟ್ಸ್‌ ಆಲೌಟ್‌ ಆದದ್ದು ಅಂಕದಲ್ಲಿನ ಅಂತರಕ್ಕೆ ಕಾರಣವಾಯಿತು. ತಂಡದ ಪರ ರಾಕೇಶ್‌ 3 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ಗುಜರಾತ್‌ ಜಯಂಟ್ಸ್‌ ರೈಡಿಂಗ್‌ನಲ್ಲಿ 16 ಅಂಕಗಳನ್ನು ಗಳಿಸಿ ಪ್ರಭುತ್ವ ಸಾಧಿಸಿತ್ತು. ಟ್ಯಾಕಲ್‌ನಲ್ಲಿ ಇತ್ತಂಡಗಳು ತಲಾ 2 ಅಂಕ ಗಳಿಸಿ ಸಮಬಲ ಸಾಧಿಸಿದವು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?