Pro Kabaddi League ಯು ಮುಂಬಾ, ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ಸತತ 2ನೇ ಜಯ

By Kannadaprabha News  |  First Published Oct 15, 2022, 9:41 AM IST

ಮಾಜಿ ಚಾಂಪಿಯನ್‌ಗಳಾದ ಯು ಮುಂಬಾ, ಜೈಪುರ ಪಿಂಕ್‌ ಪ್ಯಾಂಥರ್ಸ್‌ ಭರ್ಜರಿ ಜಯ
ಟೂರ್ನಿಯಲ್ಲಿ ಸತತ ಎರಡು ಗೆಲುವು ದಾಖಲಿಸಿದ ಈ ಎರಡು ತಂಡಗಳು
3ನೇ ಪಂದ್ಯದಲ್ಲೂ ಸೋಲಿನ ಸುಳಿಗೆ ಸಿಲುಕಿದ ತಮಿಳ್ ತಲೈವಾಸ್


ಬೆಂಗಳೂರು(ಅ.15): 9ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಮಾಜಿ ಚಾಂಪಿಯನ್‌ ಯು ಮುಂಬಾ ಸತತ 2ನೇ ಗೆಲುವು ಸಾಧಿಸಿದೆ. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ತಂಡ ತಮಿಳ್‌ ತಲೈವಾಸ್‌ ವಿರುದ್ಧ 39-32 ಅಂಕಗಳಿಂದ ಜಯಭೇರಿ ಬಾರಿಸಿತು. ತಾರಾ ರೈಡರ್‌ ಪವನ್‌ ಶೆರಾವತ್‌ ಅನುಪಸ್ಥಿತಿಯಲ್ಲಿ ತಲೈವಾಸ್‌ 3ನೇ ಪಂದ್ಯದಲ್ಲೂ ಗೆಲುವು ಕಾಣದಾಯಿತು. ನರೇಂದ್ರ 15 ರೈಡ್‌ ಅಂಕ ಗಳಿಸಿದರೂ ತಂಡಕ್ಕೆ ಗೆಲುವಿನ ಖುಷಿ ಸಿಗಲಿಲ್ಲ.

ಆರಂಭದಲ್ಲಿ ತಲೈವಾಸ್‌, ಮುಂಬಾ ವಿರುದ್ಧ ಮೇಲುಗೈ ಸಾಧಿಸಿತ್ತು. ಮೊದಲಾರ್ಧದಲ್ಲಿ 16-15ರಿಂದ ಮುಂದಿದ್ದ ತಲೈವಾಸ್‌ ಬಳಿಕ ಕಳಪೆ ಆಟವಾಡಿ 2 ಬಾರಿ ಆಲೌಟ್‌ ಆಯಿತು. ತಂಡದ ರಕ್ಷಣಾ ಪಡೆಯೂ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಗುಮಾನ್‌ ಸಿಂಗ್‌ 12, ಆಶಿಶ್‌ 9, ಜೈ ಭಗವಾನ್‌ 7 ರೈಡ್‌ ಅಂಕ ಗಳಿಸಿ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Here are some of the top clicks of the action from the mat⚡ pic.twitter.com/je4A5Ag92L

— ProKabaddi (@ProKabaddi)

Tap to resize

Latest Videos

ಜೈಪುರ ದೊಡ್ಡ ಜಯ: ಚೊಚ್ಚಲ ಆವೃತ್ತಿ ಚಾಂಪಿಯನ್‌ ಜೈಪುರ ಪಿಂಕ್‌ ಪ್ಯಾಂಥ​ರ್‍ಸ್ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿತು. ಶುಕ್ರವಾರದ 2ನೇ ಪಂದ್ಯದಲ್ಲಿ ಹರಾರ‍ಯಣ ಸ್ಟೀಲರ್ಸ್‌ ವಿರುದ್ಧ 44-31 ಅಂಕಗಳಿಂದ ಜಯಗಳಿಸಿತು. ಮೊದಲೆರಡು ಪಂದ್ಯ ಗೆದ್ದಿದ್ದ ಹರಾರ‍ಯಣಕ್ಕೆ ಇದು ಮೊದಲ ಸೋಲು. 16 ಅಂಕ ಗಳಿಸಿದ ಹರ್ಯಾಣದ ಮೀತು ಸಾಹಸ ವ್ಯರ್ಥವಾಯಿತು. ಅರ್ಜುನ್‌ ದೇಶ್ವಾಲ್‌ (14 ರೈಡ್‌ ಅಂಕ) ಜೈಪುರ ಗೆಲುವಿಗೆ ಕೊಡುಗೆ ನೀಡಿದರು.

ಇಂದಿನ ಪಂದ್ಯಗಳು

ಜೈಪುರ-ಗುಜರಾತ್‌ ಜೈಂಟ್ಸ್‌, ಸಂಜೆ 7.30ಕ್ಕೆ
ದಬಾಂಗ್‌ ಡೆಲ್ಲಿ-ತೆಲುಗು ಟೈಟಾನ್ಸ್‌, ರಾತ್ರಿ 8.30ಕ್ಕೆ
ಬೆಂಗಾಲ್‌-ಪಾಟ್ನಾ, ರಾತ್ರಿ 9.30ಕ್ಕೆ

ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌: ರುದ್ರಾಂಕ್ಷ್ ವಿಶ್ವ ಚಾಂಪಿಯನ್‌

ಕೈರೋ: ಭಾರತದ ಯುವ ಶೂಟರ್‌ ರುದ್ರಾಂಕ್ಷ್ ಬಾಲಾಸಾಹೇಬ್‌ ಪಾಟೀಲ್‌ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಕೈರೋದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ 18 ವರ್ಷದ ರುದ್ರಾಂಕ್ಷ್ ಶುಕ್ರವಾರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯ ಫೈನಲ್‌ನಲ್ಲಿ 17-13 ಅಂಕಗಳ ಅಂತರದಲ್ಲಿ ಇಟಲಿಯ ಡ್ಯಾನಿಲೋ ಡೆನಿಸ್‌ರನ್ನು ಮಣಿಸಿ ಚಿನ್ನಕ್ಕೆ ಮುತ್ತಿಟ್ಟರು.

ಸ್ವತಃ ನೀರಜ್ ಚೋಪ್ರಾ ಬಂದ್ರೂ ಅಭ್ಯಾಸಕ್ಕೆ ಅವಕಾಶ ಇಲ್ಲ, ಏನಿದು ಕಂಠೀರವ ಕ್ರೀಡಾಂಗಣದ ವಿವಾದ!

ಒಂದು ಹಂತದಲ್ಲಿ 4-10ರಿಂದ ಹಿಂದಿದ್ದರೂ ಬಳಿಕ ಪ್ರಾಬಲ್ಯ ಸಾಧಿಸಿದ ರುದ್ರಾಂಕ್‌್ಷ ಸ್ವರ್ಣ ತನ್ನದಾಗಿಸಿಕೊಂಡರು. ಈ ಮೂಲಕ 10 ಮೀ. ಏರ್‌ ರೈಫಲ್‌ನಲ್ಲಿ ಚಾಂಪಿಯನ್‌ ಆದ 2ನೇ ಭಾರತೀಯ ಎನಿಸಿಕೊಂಡರು. ಇದಕ್ಕೂ ಮೊದಲು 2006ರಲ್ಲಿ ಅಭಿನವ್‌ ಬಿಂದ್ರಾ ಕ್ರೊವೇಷಿಯಾದಲ್ಲಿ ನಡೆದ ಕೂಟದಲ್ಲಿ ಚಿನ್ನ ಗೆದ್ದಿದ್ದರು. ಒಟ್ಟಾರೆ ರುದ್ರಾಂಕ್‌್ಷ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ 6ನೇ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಒಲಿಂಪಿಕ್ಸ್‌ಗೆ ಅರ್ಹತೆ: 2ನೇ ಭಾರತೀಯ

ಕೂಟದಲ್ಲಿ ಚಿನ್ನ ಗೆಲ್ಲುವ ಮೂಲಕ ರುದ್ರಾಂಕ್ಷ್ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಪ್ರವೇಶ ಪಡೆದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ ಮೂಲಕ ಒಲಿಂಪಿಕ್ಸ್‌ಗೆ ನಾಲ್ಕು ಸ್ಥಾನಗಳು ನಿರ್ಧಾರವಾಗಲಿವೆ. ಕಳೆದ ತಿಂಗಳು ಕ್ರೊವೇಷಿಯಾದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನ ಟ್ರ್ಯಾಪ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ ಭೌನೀಶ್‌ ಮೆಂಡಿರಟ್ಟ 2024ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಶೂಟರ್‌ ಎನಿಸಿದ್ದರು.

click me!