ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬಿಗಿ ಹಿಡಿತ ಸಾಧಿಸಿದೆ. ಪುಣೇರಿ ಪಲ್ಟಾನ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಸತತ 2ನೇ ಜಯ ಕಂಡಿತು. ಇಷ್ಟೇ ಅಲ್ಲ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿತು.
ಬೆಂಗಳೂರು(ಅ.09): ಪ್ರೋ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಪ್ರಾಬಲ್ಯ ಮುಂದುವರಿಸಿದೆ. ಇಂದು ಪುಣೇರಿ ಪಲ್ಟಾನ್ ವಿರುದ್ಧ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 41-39 ಅಂಕಗಳಿಂದ ಗೆಲುವು ಸಾಧಿಸಿತು. ಮೊದಾಲಾರ್ಧದಲ್ಲಿ ಬುಲ್ಸ್ ಭಾರಿ ಮುನ್ನಡೆ ಕಾಯ್ದುಕೊಂಡರೆ ದ್ವಿತಿಯಾರ್ಧದಲ್ಲಿ ಪುಣೇರಿ ದಿಟ್ಟ ಹೋರಾಟ ನೀಡಿತು. ಆದರೆ ಅಂತಿಮ ಹಂತದಲ್ಲಿ ಬುಲ್ಸ್ 2 ಅಂಕಗಳ ಅಂತರಗಲ್ಲಿ ಪಂದ್ಯ ಗೆದ್ದುಕೊಂಡಿತು. ಮೋಹಿತ್ ಗೋಯಾತ್ ಹಾಗೂ ಅಸ್ಲಾಮ್ ಇಮಾನ್ದಾರ್ ರೈಡರ್ ಪಾಯಿಂಟ್ಸ್ ಬುಲ್ಸ್ ತಂಡಕ್ಕೆ ನೆರವಾಯಿತು. ಇದರ ಜೊತೆಗೆ ಡಿಫೆಂಡರ್ ಗೌರವ್ ಕಾತ್ರಿ ಸೇರಿದಂತ ಇತರರ ಕೊಡುಗೆ ಬುಲ್ಸ್ ತಂಡದ ಗೆಲುವಿನಲ್ಲಿ ಸಹಕಾರಿಯಾಯಿತು.
ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮಣಿಸಿದ ಬೆಂಗಳೂರು ಬುಲ್ಸ್, ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ಮಣಿಸಿದೆ. ಈ ಮೂಲಕ ಸತತ 2 ಗೆಲುವು ದಾಖಲಿಸಿ 10 ಅಂಕಗಳನನ್ನು ಸಂಪಾದಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಪಿಂಕ್ ಪ್ಯಾಂಥರ್ಸ್, ಬೆಂಗಾಲ್ ವಾರಿಯರ್ಸ್‌ಗೆ ಜಯ
ಬೆಂಗಳೂರು, ಅಕ್ಟೋಬರ್ 9: ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿವೋ ಪ್ರೋ ಕಬಡ್ಡಿ ಲೀಗ್‌ನ ಮೂರನೇ ದಿನದ ಮೊದಲ ಎರಡು ಪಂದ್ಯಗಳಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳು ಜಯ ಗಳಿಸಿ ಪ್ರಭುತ್ವ ಸಾಧಿಸಿವೆ. ದಿನದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಎದುರಾಳಿ ಪಾಟ್ನಾ ಪೈರೇಟ್ಸ್ ವಿರುದ್ಧ 35-30 ಅಂಕಗಳ ಅಂತರದಲ್ಲಿ ಜಯ ಗಳಿಸಿತು. ಎರಡನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ 45-25 ಅಂಕಗಳ ಅಂತರದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಜಯ ಗಳಿಸಿತು. ಬೆಂಗಾಲ್ ವಾರಿಯರ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ (11) ಮತ್ತು ದೀಪಕ್ ಹೂಡಾ (11) ಈ ಬೃಹತ್ ಅಂತರದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರು ಬೆಂಗಾಲ್ ವಾರಿಯರ್ಸ್‌ಗೆ ಈ ಜಯ ಆತ್ಮವಿಶ್ವಾಸವನ್ನು ತುಂಬಿತು. ತೆಲುಗು ಟೈಟಾನ್ಸ್ ಸತತ ಎರಡು ಸೋಲುಗಳೊಂದಿಗೆ ಅಂಕ ಪಟ್ಟಿಯಲ್ಲಿ ಹಿನ್ನಡೆ ಕಂಡಿತು.
ಪಾಟ್ನಾ ಪೈರೇಟ್ಸ್ ಹಾಗೂ ಪುಣೇರಿ ಪಲ್ಟನ್ ಪಂದ್ಯ ರೋಚಕ ಟೈನಲ್ಲಿ ಅಂತ್ಯ!
ಪ್ರಥಮಾರ್ಧದಲ್ಲಿ ವಾರಿಯರ್ಸ್ ಮುನ್ನಡೆ: ತೆಲುಗು ಟೈಟಾನ್ಸ್ ತಂಡದ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಬೆಂಗಾಲ್ ವಾರಿಯರ್ಸ್ ಪ್ರಥಮಾರ್ಧದಲ್ಲಿ 25-10 ಅಂಕಗಳ ಅಂತರದಲ್ಲಿ ಮುನ್ನಡೆ ಕಂಡುಕೊಂಡಿತು. ರೈಡಿಂಗ್‌ನಲ್ಲಿ ಒಟ್ಟು 17 ಅಂಕಗಳನ್ನು ಗಳಿಸಿದ ವಾರಿಯರ್ಸ್ 14 ಅಂಕಗಳನ್ನು ಗಳಿಸಿತು. ಟ್ಯಾಕಲ್‌ನಲ್ಲಿ 7 ಅಂಕಗಳನ್ನು ಗಳಿಸಿತಲ್ಲದೆ ಎರಡು ಬಾರಿ ಟೈಟಾನ್ಸ್ ತಂಡವನ್ನು ಆಲೌಟ್ ಮಾಡಿತು. ನಾಯಕ ಮಣಿಂದರ್ ಸಿಂಗ್ ವಾರಿಯರ್ಸ್ ಪರ 8 ಅಂಕಗಳನ್ನು ಗಳಿಸಿ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಶ್ರೀಕಾಂತ್ ಜಾದವ್ 6 ಅಂಕಗಳನ್ನು ಗಳಿಸಿ ಯಶಸ್ವಿ ರೈಡರ್ ಎನಿಸಿದರು. ಟ್ಯಾಕಲ್‌ನಲ್ಲಿ ಗಿರೀಶ್ ಮಾರುತಿ 3 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು.
ಪಿಂಕ್ ಪ್ಯಾಂಥರ್ಸ್‌ಗೆ ಜಯ: ಅರ್ಜುನ್ ದೆಶ್ವಾಲ್ (17 ಅಂಕಗಳು) ಅವರ ಅದ್ಭುತ ರೈಡಿಂಗ್ ನೆರವಿನಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ವಿವೋ ಪ್ರೋ ಕಬಡ್ಡಿ ಲೀಗ್‌ನ ತನ್ನ ಎರಡನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ 35-30 ಅಂಕಗಳ ಅಂತರದಲ್ಲಿ ಜಯ ಗಳಿಸಿದೆ. ಪಾಟ್ನಾ ಪೈರೇಟ್ಸ್ ತಂಡದ ಸಚಿನ್ (10)ಹಾಗೂ ರೋಹಿತ್ ಗುಲಿಯಾ(11) ದ್ವಿತಿಯಾರ್ಧದ ಕೊನೆಯಲ್ಲಿ ಉತ್ತಮ ಹೋರಾಟ ನೀಡಿ ಸೂಪರ್ 10 ಸಾಧನೆ ಮಾಡಿದರೂ ಆಗಲೇ ಕಾಲ ಮಿಂಚಿತ್ತು. ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡ ಪುಣೇರಿ ಪಲ್ಟನ್ ವಿರುದ್ಧ ಸಮಬಲ ಸಾಧಿಸಿತ್ತು.
ತೆಲುಗು ಟೈಟಾನ್ಸ್‌ಗೆ ಡಿಚ್ಚಿ ಹೊಡೆದ ಬೆಂಗಳೂರಿನ ಗೂಳಿಗಳು..!
ಪಿಂಕ್ ಪ್ಯಾಂಥರ್ಸ್‌ಗೆ ಮುನ್ನಡೆ: ಅರ್ಜುನ್ ದೇಶ್ವಾಲ್(11) ಅವರು ರೈಡಿಂಗ್ ಮೂಲಕ ಸೂಪರ್ 10 ಸಾಧನೆ ಮಾಡುವುದರೊಂದಿಗೆ ಜೈಪುರ ಪಿಂಕ್ ಪ್ಯಾಂಥರ್ಸ್ ಪ್ರಥಮಾರ್ಧದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ 18-14 ಅಂತರದಲ್ಲಿ ಮುನ್ನಡೆ ಕಂಡಿದೆ. ಅಂಕುಶ್ ಟ್ಯಾಕಲ್ ಮೂಲಕ 2 ಅಂಕ ಗಳಿಸಿ ತಂಡದ ಮುನ್ನಡೆಗೆ ನೆರವಾದರು. ಪಾಟ್ನಾ ಪೈರೇಟ್ಸ್ ಪರ ಆಲ್ರೌಂಡರ್ ರೋಹಿತ್ ಗೂಲಿಯಾ 6 ಅಂಕ ಮತ್ತು ರೈಡಿಂಗ್‌ನಲ್ಲಿ ಸಚಿನ್ 4 ಅಂಕಗಳನ್ನು ಗಳಿಸಿ ಆರಂಬದಲ್ಲಿ ದಿಟ್ಟ ಸವಾಲು ನೀಡಿದ್ದರು. ಆದರೆ ತಂಡ ಒಂದು ಬಾರಿ ಆಲೌಟ್ ಆದದ್ದು ಪ್ರಥಮಾರ್ಧದ ಹಿನ್ನಡೆಗೆ ಕಾರಣವಾಯಿತು.