ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಫೈನಲ್ ಪ್ರವೇಶಿಸಿದೆ. 2018ರ ಅಂತಿಮ ದಿನ ನಡೆದ ರೋಚಕ ಪಂದ್ಯದಲ್ಲಿ ಅಂತಿಮ 10 ನಿಮಿಷದಲ್ಲಿ ಬೆಂಗಳೂರು ಬುಲ್ಸ್ ಇತಿಹಾಸ ರಚಿಸಿತು. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.
ಕೊಚ್ಚಿ(ಡಿ.31): ಕನ್ನಡಿಗರ ಹೊಸ ವರ್ಷದ ಸಂಭ್ರಮ ಇಮ್ಮಡಿಯಾಗಿದೆ. ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಮೊದಲನೇ ಕ್ವಾಲಿಯರ್ ಪಂದ್ಯದಲ್ಲಿ ನಮ್ಮ ಬೆಂಗಳೂರು ಬುಲ್ಸ್ ಭರ್ಜರಿ ಗೆಲುವು ಸಾಧಿಸಿದೆ. ಗುಜರಾತ್ ಫಾರ್ಚುನ್‌ಜೈಂಟ್ಸ್ ವಿರುದ್ದದ ಪಂದ್ಯದಲ್ಲಿ ಬೆಂಗಳೂರು 41-29 ಅಂಕಗಳ ಗೆಲುವು ಸಾಧಿಸಿ, ಫೈನಲ್ ಪ್ರವೇಶಿಸಿದೆ.
ಇದನ್ನೂ ಓದಿ: ಶ್ರೀಮಂತ ಕ್ರೀಡೆಗಳಲ್ಲಿದ್ದ ಜಿಪಿಎಸ್ ಇದೀಗ ಕಬಡ್ಡಿಗೂ ಎಂಟ್ರಿ!
ಕೊಚ್ಚಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಹಾಗೂ ಗುಜರಾತ್ ಗೆಲುವಿಗಾಗಿ ಕಠಿಣ ಹೋರಾಟ ನಡೆಸಿತು. ಮೊದಲಾರ್ಧದಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನೀಡಿತು. ಫಸ್ಟ್ ಹಾಫ್ ಅಂತ್ಯದಲ್ಲಿ ಬೆಂಗಳೂರು 13-14 ಅಂಕ ಪಡೆದು ಕೇವಲ ಒಂದು ಅಂಕದಿಂದ ಹಿನ್ನಡೆ ಅನುಭವಿಸಿತ್ತು.
ಇದನ್ನೂ ಓದಿ: ಪ್ರೊ ಕಬಡ್ಡಿ: ಯು ಮುಂಬಾ- ಬೆಂಗಾಲ್ ಟೂರ್ನಿಯಿಂದ ಔಟ್
ದ್ವಿತೀಯಾರ್ಧದಲ್ಲಿ ಚುರು ಕಿನ ಆಟವಾಡಿದ ಬೆಂಗಳೂರು, ಅಂಕ ಬೇಟೆ ಮುಂದುವರಿಸಿತು. ಗುಜರಾತ್ ರೈಡರ್‌ಗಳನ್ನ ಕಟ್ಟಿ ಹಾಕಿತು. ರೈಡ್‌ನಲ್ಲೂ ಪ್ರಾಬಲ್ಯ ಮೆರೆದ ಬುಲ್ಸ್, ಮುನ್ನಡೆ ಪಡೆಯಿತು. ಅಂತಿಮ ಹಂತದಲ್ಲಿ ಗುಜರಾತ್ ಹೋರಾಟ ನಡೆಸಿದರೂ ಸಾಧ್ಯವಾಗಲಿಲ್ಲ. ಹೀಗಾಗಿ ಬೆಂಗಳೂರು ಬುಲ್ಸ್ 41-29 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ಈ ಮೂಲಕ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿತು.