ಹರ್ಯಾಣ ಮಣಿಸಿ ಪ್ಲೇ ಆಫ್‌ಗೆ ಅರ್ಹತೆ ಪಡೆದ ಬೆಂಗಳೂರು ಬುಲ್ಸ್!

By Web Desk  |  First Published Oct 2, 2019, 10:28 PM IST

ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಆರ್ಭಟಿಸುತ್ತಿರುವ ಬೆಂಗಳೂರು ಬುಲ್ಸ್, ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ. ಹರ್ಯಾಣ ವಿರುದ್ದ ಮಿಂಚಿನ ಪ್ರದರ್ಶನ ನೀಡೋ ಮೂಲಕ ಬುಲ್ಸ್, ಅರ್ಹತೆ ಗಿಟ್ಟಿಸಿಕೊಂಡಿದೆ.


ಪಂಚಕುಲ(ಅ.02): ಪ್ರೊ ಕಬಡ್ಡಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಸತತ 2ನೇ ಬಾರಿಗೆ ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ. ಹರ್ಯಾಣ ಸ್ಟೀಲರ್ಸ್ ವಿರುದ್ದದ ಮಹತ್ವದ ಪಂದ್ಯದಲ್ಲಿ ಬೆಂಗಳೂರು 59-36 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದೆ.

ಇದನ್ನೂ ಓದಿ: ಪ್ರೊ ಕಬಡ್ಡಿ ಟೂರ್ನಿ ಮೆರುಗು ಹೆಚ್ಚಿಸಿದ ಪ್ಯಾರ ಬ್ಯಾಡ್ಮಿಂಟನ್ ತಾರೆ ಮಾನಸಿ!

Tap to resize

Latest Videos

ಪಂದ್ಯದ ಆರಂಭದಲ್ಲಿ ಸೌರಭ್ ನಂದಲ್ ಟ್ಯಾಕಲ್‌ನಿಂದ ಬೆಂಗಳೂರು ಶುಭಾರಂಭ ಮಾಡಿತು. ಮೊದಲ ನಿಮಿಷದಲ್ಲಿ 2-0 ಅಂತರ ಕಾಯ್ದುಕೊಂಡ ಬುಲ್ಸ್, 4ನೇ ನಿಮಿಷದ ವೇಳೆ ಹಿಡಿತ ಸಡಿಲಗೊಳಿಸಿತು. ಹೀಗಾಗಿ ಸ್ಕೋರ್ 5-5 ಅಂತರಗಳಿಂದ ಸಮಬಲಗೊಂಡಿತು. 5ನೇ ನಿಮಿಷದಿಂದ ಹರ್ಯಾಣ ಮುನ್ನಡೆ ಪಡೆದುಕೊಂಡಿತು.

ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!

ಅದ್ಬುತ ಹೋರಾಟ ನೀಡಿದ ಹರ್ಯಾಣಕ್ಕೆ 12ನೇ ನಿಮಿಷದಲ್ಲಿ ಬೆಂಗಳೂರು ತಿರುಗೇಟು ನೀಡಿತು. ಹರ್ಯಾಣ ತಂಡವನ್ನು ಆಲೌಟ್ ಮಾಡಿದ ಬೆಂಗಳೂರು 17-15 ಅಂಕಗಳ ಮುನ್ನಡೆ ಪಡೆದುಕೊಂಡಿತು. 18ನೇ ನಿಮಿಷದಲ್ಲಿ 2ನೇ ಬಾರಿಗೆ ಹರ್ಯಾಣ ತಂಡವನ್ನು ಆಲೌಟ್ ಮಾಡಿದ ಬೆಂಗಳೂರು 26-17 ಅಂಕಗಳ ಮುನ್ನಡೆ ಪಡೆಯಿತು. 28-18 ಅಂಕಗಳೊಂದಿಗೆ ಬೆಂಗಳೂರು ಮೊದಲಾರ್ಧ ಅಂತ್ಯಗೊಳಿಸಿತು.

ಇದನ್ನೂ ಓದಿ: ಸುವರ್ಣನ್ಯೂಸ್.ಕಾಂ ಜೊತೆ ಬೆಂಗಳೂರು ಬುಲ್ಸ್ ನಾಯಕನ Exclusive ಮಾತು!

ದ್ವಿತಿಯಾರ್ಧದಲ್ಲಿ ಹರ್ಯಾಮ ಚೇತರಿಸಿಕೊಳ್ಳಲು ಬುಲ್ಸ್ ಅವಕಾಶ ನೀಡಲಿಲ್ಲ. ಬೋನಸ್ ಪಾಯಿಂಟ್ ಮೂಲಕ ಅಂಕಗಳಿಸಿದರೂ ಹರ್ಯಾಣ ಮುನ್ನಡೆ ಪಡೆದುಕೊಳ್ಳಲಿಲ್ಲ. 11ನೇ ನಿಮಿಷದಲ್ಲಿ 3ನೇ ಬಾರಿಗೆ ಹರ್ಯಾಣ ತಂಡವನ್ನು ಆಲೌಟ್ ಮಾಡಿದ ಬುಲ್ಸ್, 44-28 ಅಂಕಗಳ ಅಂತರ ಪಡೆದುಕೊಂಡಿತು. ಪಂದ್ಯ ಮುಕ್ತಾಯದ ವೇಳೆ 4ನೇ ಬಾರಿಗೆ ಹರ್ಯಾಣ ಆಲೌಟ್‌ಗೆ ತುತ್ತಾಯಿತು. ಈ ಮೂಲಕ ಬೆಂಗಳು ಬುಲ್ಸ್ 59-36 ಅಂಕಗಳ ಗೆಲುವು ಸಾಧಿಸಿತು. ಇಷ್ಟೇ ಅಲ್ಲ ಪ್ಲೇ ಆಫ್‌ಗೆ ಅರ್ಹತೆ ಪಡೆಯಿತು.

click me!