IPL 2020; ಕುಂಬ್ಳೆಗೆ ಕೋಚ್ ಜವಾಬ್ದಾರಿ ನೀಡಲು ಮುಂದಾದ KXIP?

By Web DeskFirst Published Oct 2, 2019, 6:52 PM IST
Highlights

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನೂತನ ಕೋಚ್ ಹುಡುಕಾಟದಲ್ಲಿ ತೊಡಗಿದೆ. ಇದೀಗ ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆಯನ್ನು ಕೋಚ್ ಆಗಿ ಆಯ್ಕೆ ಮಾಡಲು ಪಂಜಾಬ್ ತಂಡ ಸಿದ್ಧತೆ ನಡೆಸುತ್ತಿದೆ. 

ಪಂಜಾಬ್(ಅ.02): ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇದೀಗ 2020ರ ಐಪಿಎಲ್ ಟೂರ್ನಿಗೆ ಸಿದ್ಧತೆ ಆರಂಭಿಸಿದೆ. ಮೈಕ್ ಹೆಸೆನ್ ಕೋಚ್ ಹುದ್ದೆಯಿಂದ ಕೆಳಿಗಿದ ಬೆನ್ನಲ್ಲೇ ಹೊಸ ಕೋಚ್ ಹುಡುಕಾಟಕ್ಕೆ ಪಂಜಾಬ್ ಮುಂದಾಗಿದೆ.  ಹಲವು ದಿಗ್ಗಜ ಕೋಚ್ ಪಟ್ಟಿಯನ್ನು ಸಿದ್ಧಪಡಿಸಿದೆ. ಇದರಲ್ಲಿ ಕೆಲವರ ಹೆಸರನ್ನು ಅಂತಿಮಗೊಳಿಸಿದೆ. ಇದೀಗ ಕನ್ನಡಿಗ, ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆಗೆ ಕೋಚ್ ಜವಾಬ್ದಾರಿ ನೀಡಲು ಉತ್ಸುಕವಾಗಿದೆ.

ಇದನ್ನೂ ಓದಿ: BCCI ನೊಟೀಸ್ ಬೆನ್ನಲ್ಲೇ CACಗೆ ಕಪಿಲ್ ದೇವ್ ರಾಜಿನಾಮೆ!

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅನಿಲ್ ಕುಂಬ್ಳೆಯನ್ನು ನೂತನ ಕೋಚ್ ಆಗಿ ನೇಮಕ ಮಾಡಲು ಕಸರತ್ತು ನಡೆಸುತ್ತಿದೆ. 2017ರಲ್ಲಿ ಟೀಂ ಇಂಡಿಯಾ ಕೋಚ್ ಹುದ್ದೆಗೆ ರಾಜಿನಾಮೆ ನೀಡಿದ ಬಳಿಕ ಕುಂಬ್ಳೆ ಕೋಚಿಂಗ್‌ನಿಂದ ದೂರ ಉಳಿದಿದ್ದಾರೆ. 2013ರಿಂದ 2195ರ ವರೆಗೆ ಕುಂಬ್ಳೆ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿಯು ಕಾರ್ಯನಿರ್ವಹಿಸಿದ್ದಾರೆ.

ಇದನ್ನೂ ಓದಿ: ಕನ್ನಡಿಗ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಆಯ್ಕೆಗಾರ ಆಗಬೇಕು: ಸೆಹ್ವಾಗ್‌!

ಕುಂಬ್ಳೆ ಕೋಚ್ ಆಯ್ಕೆಗೆ ಪಂಜಾಬ್ ಉತ್ಸಾಹ ತೋರಿದೆ ನಿಜ. ಆದರೆ ಈ ಕುರಿತು ಕುಂಬ್ಳೆ ಮೌನವಾಗಿದ್ದಾರೆ. ಒಂದು ವೇಳೆ ಕುಂಬ್ಳೆ ಕೋಚ್ ಆಗಿ ಆಯ್ಕೆಯಾದರೆ, ತಂಡದ ನಾಯಕ ಆರ್ ಅಶ್ವಿನ್ ತಂಡದಲ್ಲೇ ಉಳಿಯಲಿದ್ದಾರೆ.  ಆರ್ ಅಶ್ವಿನ್ ಡೆಲ್ಲಿ ತಂಡ ಸೇರಿಕೊಳ್ಳೋ ಸಿದ್ಧತೆಯಲ್ಲಿದ್ದಾರೆ. ಬಿಸಿಸಿಐನ ಸ್ವಹಿತಾಸಕ್ತಿ ಸಂಘರ್ಷದ ಕಾರಣದಿಂದ ಹಲವು ಕ್ರಿಕೆಟಿಗರು ಎರಡೆರಡು ಹುದ್ದೆಗಳ ಉಸಾಬರಿ ಬೇಡ ಎಂದು ದೂರ ಉಳಿಯುತ್ತಿದ್ದಾರೆ.

click me!