ಬೆಂಗಳೂರು ಬುಲ್ಸ್ ಹಾಗೂ ಪಾಟ್ನಾ ಪೈರೇಟ್ಸ್ ನಡುವಿನ ಪ್ರೊ ಕಬ್ಡಡಿ ಪಂದ್ಯ ಟೈನಲ್ಲಿ ಅಂತ್ಯವಾಗಿದೆ. ಅಂತಿಮ ಕ್ಷಣದವರೆಗೂ ಅಭಿಮಾನಿಗಳನ್ನ ಹಿಡಿದಿಟ್ಟು ಈ ಪಂದ್ಯದಲ್ಲಿ ಗೆಲುವು ಯಾರಿಗೆ ಅನ್ನೋದು ಕುತೂಹಲವಾಗಿತ್ತು. ಇಲ್ಲಿದೆ ಈ ರೋಚಕ ಪಂದ್ಯದ ಹೈಲೈಟ್ಸ್.
ಪಂಚಕುಲ(ಡಿ.19): ಬೆಂಗಳೂರು ಬುಲ್ಸ್ ಹಾಗೂ ಪಾಟ್ನಾ ಪೈರೇಟ್ಸ್ ನಡುವಿನ ಪ್ರೊ ಕಬಡ್ಡಿ ಟೂರ್ನಿಯ 119ನೇ ಲೀಗ್ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿದೆ. ಉಭಯ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಿತು. ಆದರೆ ಅಂತ್ಯದಲ್ಲಿ 40-40 ಅಂಕಗಳಲ್ಲಿ ಟೈನಲ್ಲಿ ಅಂತ್ಯವಾಯಿತು.
ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ್ದ ಬೆಂಗಳೂರು ಬುಲ್ಸ್ ಮುನ್ನಡೆ ಕಾಯ್ದುಕೊಂಡಿತು. 20-11 ಅಂಕಗಳ ಅಂತರದಲ್ಲಿ ಮುನ್ನಡೆ ಪಡೆದುಕೊಂಡಿತ್ತು. ದ್ವಿತೀಯಾರ್ಧದಲ್ಲೂ ಬೆಂಗಳೂ ಆಗ್ರೆಸ್ಸಿವ್ ಬ್ರ್ಯಾಂಡ್ ಕಬಡ್ಡಿ ಆಟಕ್ಕೆ ಹೆಚ್ಚು ಒತ್ತು ನೀಡಿತು.
ಸೆಕೆಂಡ್ ಹಾಫ್‌ನಲ್ಲಿ ಬಹುತೇಕ ಮುನ್ನಡೆ ಕಾಯ್ದುಕೊಂಡ ಬೆಂಗಳೂರು ಬುಲ್ಸ್ ಅಂತಿಮ 1 ನಿಮಿಷದಲ್ಲಿ ಹಿನ್ನಡೆ ಅನುಭವಿಸಿತು. ಇದೇ ಅವಕಾಶ ಉಪಯೋಗಿಸಿಕೊಂಡ ಪಾಟ್ನ 3 ಅಂಕಗಳಿಸಿ 40-40 ಅಂತರದಲ್ಲಿ ಪಂದ್ಯವನ್ನ ಟೈಮಾಡಿ ನಿಟ್ಟುಸಿರುಬಿಟ್ಟಿತು.