ಜೈಪುರದಲ್ಲಿ 12ನೇ ಆವೃತ್ತಿ ಐಪಿಎಲ್ ಟೂರ್ನಿಗಾಗಿ ನಡೆದ ಹರಾಜಿನಲ್ಲಿ RCB ತಂಡ ಶಿಮ್ರೊನ್ ಹೆಟ್ಮೆರ್ ಖರೀದಿ ಮಾಡಿತ್ತು. 4.2 ಕೋಟಿಗೆ ಶಿಮ್ರೊನ್ ಖರೀದಿಸುತ್ತಿದ್ದಂತೆ, ಹೊಟೆಲ್‌ನಲ್ಲಿ ಹರಾಜು ವೀಕ್ಷಿಸುತ್ತಿದ್ದ ಶಿಮ್ರೊನ್ ಪ್ರತಿಕ್ರಿಯೆ ವೈರಲ್ ಆಗಿದೆ.
ಜೈಪುರ(ಡಿ.19): ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವೆಸ್ಟ್ಇಂಡೀಸ್ ಬ್ಯಾಟ್ಸ್‌ಮನ್ ಶಿಮ್ರೊನ್ ಹೆಟ್ಮೆರ್‌ಗೆ ಬರೊಬ್ಬರಿ 4.2 ಕೋಟಿ ರೂಪಾಯಿ ನೀಡಿ ಖರೀದಿಸಿತು. ಐಪಿಎಲ್ ಹರಾಜನ್ನ ಕುತೂಹಲದಿಂದ ನೋಡುತ್ತಿದ್ದ ಶಿಮ್ರೊನ್, ತಂಡಕ್ಕೆ ಆಯ್ಕೆಯಾಗುತ್ತಿದ್ದಂತೆ ಸಂತಸದಿಂದ ತೇಲಾಡಿದರು.
ಇದನ್ನೂ ಓದಿ: ಹರಾಜಿನ ಬಳಿಕ RCB ಕಂಪ್ಲೀಟ್ ತಂಡ ಹೀಗಿದೆ ನೋಡಿ!
RCB ತಂಡ ಖರೀದಿಸುತಿದ್ದಂತೆ, ಶಿಮ್ರೊನ್ ಪ್ರತಿಕ್ರಿಯೆ ವೀಡಿಯೋ ಇದೀಗ ವೈರಲ್ ಆಗಿದೆ. ಫ್ರಾಂಚೈಸಿಗಳು ಶಿಮ್ರೊನ್ ಹೆಸರಿಗೆ ಬಿಡ್ ಮಾಡುತ್ತಿದ್ದಂತೆ ಕುಣಿದು ಕುಪ್ಪಳಿಸಿದ್ದಾರೆ. ಕೋಟಿ ಕೋಟಿ ರೂಪಾಯಿ ಹೆಚ್ಚಾಗುತ್ತಿದ್ದಂತೆ, ಶಿಮ್ರೊನ್ ಶರ್ಟ್ ಬಿಚ್ಚಿ ಹೊಟೆಲ್ ರೂಂನಲ್ಲಿ ಕುಣಿದಾಡಿದ್ದಾರೆ . ಬಳಿಕ ದೇವರಿಗೆ ಕೈಮುಗಿದು ಪ್ರಾರ್ಥಿಸಿದ್ದಾರೆ.
ಸಂತಸದ ಬಳಿಕ ಹರಾಜಿನಲ್ಲಿ ಖರೀದಿ ಮಾಡಿದ RCB ತಂಡಕ್ಕೆ ಧನ್ಯವಾದ ಹೇಳಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.
For the fans in Bangalore pic.twitter.com/ivDIGqcb3x
— Shimron Hetmyer (@Shetmyer02)