PKL 2019: ಬೆಂಗಾಲ್ ವಾರಿಯರ್ಸ್ ಘರ್ಜನೆಗೆ ಯು ಮುಂಬಾ ಶರಣು!

By Web Desk  |  First Published Sep 11, 2019, 10:02 PM IST

ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ಅಬ್ಬರ ಮುಂದುವರಿದಿದೆ. 8ನೇ ಗೆಲುವಿನ ಮೂಲಕ 2ನೇ ಸ್ಥಾನ ಸಂಪಾದಿಸಿರುವ ಬೆಂಗಾಲ್, ಇದೀಗ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿದೆ. ಬೆಂಗಾಲ್ ಹಾಗೂ ಯು ಮುಂಬಾ ನಡೆವಿನ  ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.


ಕೋಲ್ಕತಾ(ಸೆ.11): ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ಗೆಲುವಿನ ಓಟ ಮುಂದುವರಿಸಿದೆ. ಯು ಮುಂಬಾ ವಿರುದ್ದದ 85ನೇ ಲೀಗ್ ಪಂದ್ಯದಲ್ಲಿ ಬೆಂಗಾಲ್ 29-26 ಅಂಕಗಳಿಂದ ಗೆಲುವು ಸಾಧಿಸಿತು. ಈ ಮೂಲಕ 15 ಪಂದ್ಯಗಳಲ್ಲಿ 8 ಗೆಲುವು, 4 ಸೋಲು ಹಾಗೂ 3 ಟೈ ಪಂದ್ಯಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದೆ.

ಇದನ್ನೂ ಓದಿ: ಸಂದರ್ಶನ: ಪ್ರೊ ಕಬಡ್ಡಿ ಕನಸು ಕಾಣುವ ಯುವಕರಿಗೆ ಪವನ್ ಶೆರಾವತ್ ಸಲಹೆ...

Tap to resize

Latest Videos

ಮೊದಲಾರ್ಧದಲ್ಲಿ ಮುಂಬೈ ಆರಂಭ ಉತ್ತಮವಾಗಿತ್ತು. ಅರ್ಜುನ್ ದೇಸ್ವಾಲ್ ಅವರ ಸೂಪರ್ ರೈಡ್ ಹಾಗೂ ಬೋನಸ್ ಪಾಯಿಂಟ್ ಮೂಲಕ ಮುಂಬೈ 3-0 ಅಂತರದ ಮುನ್ನಡೆ ಪಡೆದುಕೊಂಡಿತು. ಆರಂಭಿಕ  2 ನಿಮಿಷದ ಬಳಿಕ ಬೆಂಗಾಲ್ ಅಂಕ ಖಾತೆ ತೆರೆಯಿತು. 5ನೇ ನಿಮಿಷದಲ್ಲಿ ಬೆಂಗಾಲ್ 4-4 ಅಂಕಗಳಿಂದ ಸಮಬಲ ಮಾಡಿಕೊಂಡಿತು. ಅಷ್ಟರಲ್ಲೇ ಮುಂಬೈ ಮಂಕಾಯಿತು.

ಇದನ್ನೂ ಓದಿ: ಸುವರ್ಣನ್ಯೂಸ್.ಕಾಂ ಜೊತೆ ಬೆಂಗಳೂರು ಬುಲ್ಸ್ ನಾಯಕನ Exclusive ಮಾತು!

ಆರಂಭ ಶೂರತ್ವ ತೋರಿದ ಯು ಮುಂಬಾ ಮತ್ತೆ ಅಬ್ಬರಿಸಲಿಲ್ಲ. ಆದರೆ ಸಿಕ್ಕ ಅವಕಾಶವನ್ನು ಬಳಿಸಿಕೊಂಡ ಬೆಂಗಾಲ್ ವಾರಿಯರ್ಸ್ 16-13 ಅಂಕಗಳ ಮುನ್ನಡೆಯೊಂದಿಗೆ ಮೊದಲಾರ್ಧ ಅಂತ್ಯಗೊಳಿಸಿತು. ದ್ವಿತಿಯಾರ್ಧದಲ್ಲಿ ಯು ಮುಂಬಾ ಮುನ್ನಡೆಗಾಗಿ ಹೋರಾಟ ನಡೆಸಿದರೂ ಕೈಗೂಡಲಿಲ್ಲ. ಅಂತಿಮವಾಗಿ ಬೆಂಗಾಲ್ 29-26 ಅಂಕಗಳಿಂದ ಗೆಲುವು ಸಾದಿಸಿತು.

ಹರ್ಯಾಣ vs ಜೈಪುರ ಪಂದ್ಯ ಟೈ:
ಪ್ರೊ ಕಬಡ್ಡಿ ಲೀಗ್ ಟೂರ್ನಿಯ 84ನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ಹಾಗೂ ಜೈಪುರು ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾಗಿತ್ತು. ರೋಚಕ ಪಂದ್ಯ 32-32 ಅಂಕಗಳಿಂದ ಟೈನಲ್ಲಿ ಅಂತ್ಯವಾಯಿತು. ಮೊದಲಾರ್ಧದ ಅಂತ್ಯದಲ್ಲಿ ಹರ್ಯಾಣ 18-14 ಅಂಕಗಳ ಮುನ್ನಡೆ ಪಡೆದುಕೊಂಡಿತ್ತು. ಆದರೆ ಸೆಕೆಂಡ್ ಹಾಫ್‌ನಲ್ಲಿ ಆಕ್ರಮಣಕಾರಿ ಆಟವಾಡಿದ ಜೈಪುರ ತಿರುಗೇಟು ನೀಡಿತು.  ರೋಚಕ ಹೋರಾಟದಲ್ಲಿ ಜೈಪುರ ಹಾಗೂ ಹರ್ಯಾಣ 32-32 ಅಂಕಳಿಂದ ಟೈನಲ್ಲಿ ಅಂತ್ಯವಾಯಿತು.

click me!