
ಚೆನ್ನೈ[ಅ.08]: ನಾಯಕ ಅಜಯ್ ಠಾಕೂರ್ ಏಕಾಂಗಿ ಹೋರಾಟದ ಹೊರತಾಗಿಯೂ ಯುಪಿ ಯೋಧಾದ ಸಂಘಟಿತ ಪ್ರದರ್ಶನದೆದುರು ತಮಿಳ್ ತಲೈವಾಸ್ 37-32 ಅಂಕಗಳ ರೋಚಕ ಸೋಲು ಕಂಡಿತು.
ಇಲ್ಲಿನ ಜವಾಹರ್ ಲಾಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದ ಆರಂಭದಲ್ಲಿ ಯೋಧಾ ಪಡೆ ಪಡೆ ಆಕ್ರಮಣಕಾರಿಯಟವಾಡಿತು. ಪಂದ್ಯದ 8ನೇ ನಿಮಿಷದಲ್ಲಿ ತಲೈವಾಸ್ ತಂಡವನ್ನು ಆಲೌಟ್ ಮಾಡಿದ ಯೋಧಾ ಪಡೆ 10-0 ಅಂಕಗಳ ಮುನ್ನಡೆ ಸಾಧಿಸಿತು. ಪಂದ್ಯದ 12ನೇ ನಿಮಿಷದಲ್ಲಿ ಪ್ರಶಾಂತ್ ಕುಮಾರ್ ಅವರನ್ನು ಟ್ಯಾಕಲ್ ಮಾಡುವ ಮೂಲಕ ತಲೈವಾಸ್ ಮೊದಲ ಅಂಕ ಸಂಪಾದಿಸಿತು. ಮೊದಲಾರ್ಧ ಮುಕ್ತಾಯದ ವೇಳೆಗೆ ಯೋಧಾ ಪಡೆ 18-4 ಅಂಕಗಳ ಮುನ್ನಡೆ ಸಾಧಿಸಿತ್ತು.
ಇನ್ನು ದ್ವಿತಿಯಾರ್ಧದಲ್ಲಿ ಅಜಯ್ ಠಾಕೂರ್ ಮಿಂಚಿನ ಪ್ರದರ್ಶನ ತೋರುವ ಮೂಲಕ ಅಂತರವನ್ನು ತಗ್ಗಿಸುತ್ತಾ ಬಂದರು. ಮೊದಲಾರ್ಧದಲ್ಲಿ 14 ಅಂಕಗಳ ಹಿನ್ನಡೆಯಲ್ಲಿದ್ದ ತಲೈವಾಸ್ ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಭರ್ಜರಿಯಾಗಿಯೇ ಕಮ್’ಬ್ಯಾಕ್ ಮಾಡಿತು. ಕೊನೆಯ ಒಂದು ನಿಮಿಷವಿದ್ದಾಗ ತಲೈವಾಸ್ 31-33 ಅಂಕಗಳ ಅಲ್ಪ ಹಿನ್ನಡೆಯಲ್ಲಿತ್ತು. ಈ ವೇಳೆ ಎಚ್ಚರಿಕೆಯ ಆಟವಾಡಿದ ಯೋಧಾ ಪಡೆ ಕೊನೆಗೂ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು.
ಯುಪಿ ಗೆಲುವಿನಲ್ಲಿ ರೈಡಿಂಗ್’ನಲ್ಲಿ ಪ್ರಶಾಂತ್ ರೈ 8 ಅಂಕ ಪಡೆದರೆ, ನರೇಂದರ್ 4 ಅಂಕ ಸಂಪಾದಿಸಿದರು. ಇನ್ನು ತಲೈವಾಸ್ ಪರ ಅಜಯ್ ಠಾಕೂರ್ 12 ಅಂಕ ಕಲೆಹಾಕಿದರೆ, ಮಂಜೀತ್ ಚಿಲ್ಲಾರ್ ಟ್ಯಾಕಲ್’ನಲ್ಲಿ 4 ಅಂಕ ಪಡೆದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.