
ಬೆಂಗಳೂರು: ಕ್ರೀಡೆ ಯಾವುದೇ ಇರಲಿ ಬೆಂಗಳೂರಿನ ತಂಡದ ವಿಚಾರ ಬಂದಾಗ ಪುಟ್ಟ ಮಕ್ಕಳು ಕೂಡ ಜಾಗೃತರಾಗುತ್ತಾರೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಯಾವ ರೀತಿ ಸಣ್ಣವರಿಂದ ಹಿಡಿದು ದೊಡ್ಡವರವರೆಗೆ ಅಭಿಮಾನಿಗಳಿದ್ದಾರೋ ಅದೇ ರೀತಿ ಪ್ರೊ ಕಬಡ್ಡಿಯಲ್ಲಿ ಮಿಂಚುತ್ತಿರುವ ಬೆಂಗಳೂರು ಬುಲ್ಸ್ ತಂಡಕ್ಕೂ ಪುಟ್ಟ ಪುಟ್ಟ ಮಕ್ಕಳು ಅಭಿಮಾನಿಗಳಿದ್ದಾರೆ. ಪ್ರಸ್ತುತ ಪ್ರೊ ಕಬಡ್ಡಿಯಲ್ಲಿ 10ನೇ ಆವೃತಿ ನಡೆಯುತ್ತಿದ್ದು, ಪುಟ್ಟ ಬಾಲಕನೋರ್ವ ಬೆಂಗಳೂರು ಬುಲ್ಸ್ ತಂಡದ ಆಟಗಾರ ಭರತ್ ಹೂಡಾ ಅವರಿಗೆ ಹುರಿದುಂಬಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇನ್ಸ್ಟಾಗ್ರಾಮ್‌ನಲ್ಲಿ ಬೆಂಗಳೂರು ಬುಲ್ಸ್ ಅಧಿಕೃತ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಪ್ರೊ ಕಬ್ಬಡಿಯಲ್ಲಿ ಬೆಂಗಳೂರು ತಂಡವನ್ನು ಬೆಂಬಲಿಸುತ್ತಿರುವ ಅನೇಕ ಅಭಿಮಾನಿಗಳು ಬಾಲಕ ಆಟಗಾರರನ್ನು ಹುರಿದುಂಬಿಸುತ್ತಿರುವ ರೀತಿಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಬಾಲಕ ಏನ್ ಹೇಳ್ದ ನೋಡಿ
ಹೇಯ್ ಬ್ರೋ ನೀನು ಶುಡ್ನಾಟ್ ಬಿಕಂ ಥರ್ಡ್( ಹೇಯ್ ಬ್ರೋ ನೀನು 3ನೇ ಸ್ಥಾನ ಬರಲೇ ಬಾರದು ನೀನೇದಿದ್ದರೂ ಪ್ರಥಮ ಸ್ಥಾನ ಪಡೆಯಲೇಬೇಕು. ನೀನು ಕಬಡ್ಡಿಯಲ್ಲಿ ಮೊದಲ ಸ್ಥಾನ ಪಡೆಯಲೇಬೇಕು. ನೀನು ಏನು ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡಲೇಬೇಕು. ಒಂದು ವೇಳೆ ನಿನಗೆ ಕಾಲು ನೋವಾದರೂ ಸರಿ, ನಿನಗೆ ಕೈ ನೋವಾದರೂ ಸರಿ, ನಿನಗೆ ಏನು ನೋವಾದರೂ ಸರಿ ನೀನು ಮಾತ್ರ ಸೋಲಬಾರದು, ಯಾಕೆಂದರೆ ನೀನು ಬೆಂಗಳೂರು ಬುಲ್, ಮತ್ತು ನೆನಪಿಟ್ಟುಕೋ ಬುಲ್‌ಗಳು (ಎತ್ತುಗಳು) ಯಾವತ್ತು ಸೋತು ಶರಣಾಗುವುದಿಲ್ಲ ಎಂದು ಆ ಬಾಲಕ ಆಟಗಾರ ಭರತ್ ಹೂಡಾಗೆ ಹುರಿದುಂಬಿಸಿದ್ದಾನೆ. ಈ ವೇಳೆ ಜೊತೆಯಲ್ಲೇ ಇದ್ದವರು ಹೌದು ಬುಲ್‌ಗಳು (ಗೂಳಿಗಳು) ಯಾವತ್ತೂ ಸೋಲು ಬಯಸುವುದಿಲ್ಲ ಎಂದು ಹೇಳುತ್ತಾರೆ. ಅಲ್ಲದೇ ಆ ಬಾಲಕನಿಗೆ ಎಲ್ಲರೂ ಚಪ್ಪಾಳೆ ತಟ್ಟುವಂತೆ ಕೇಳುತ್ತಾರೆ. ಬಾಲಕನ ಮಾತನ್ನು ನಗುವೊಗದಿಂದ ಕೇಳಿದ ಆಟಗಾರ ಭರತ್ ಹೂಡಾ ಕೂಡ ನಗುಮೊಗದಿಂದಲೇ ಬಾಲಕನಿಗೆ ಹಸ್ತಲಾಘಯಿಸಿ ಚಪ್ಪಾಳೆ ತಟ್ಟುತ್ತಾನೆ.
Pro Kabaddi League: ಯು ಮುಂಬಾ, ಹರ್ಯಾಣಗೆ ಗೆಲುವು
ಪುಟ್ಟ ಬಾಲಕ ಇಷ್ಟು ಸಣ್ಣ ವಯಸ್ಸಿಗೆ ಈ ರೀತಿ ಹಿರಿಯ ಆಟಗಾರನಿಗೆ ಹುರಿದುಂಬಿಸುತ್ತಿರುವ ರೀತಿ ಅನೇಕರಿಗೆ ಖುಷಿ ನೀಡಿದೆ. ಅನೇಕರು ಬಾಲಕನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಬೆಂಗಳೂರು ಫ್ಯಾನ್ಸ್ ತಮ್ಮ ರಕ್ತದಲ್ಲೇ ಹುರಿದುಂಬಿಸುವ ಕಲೆಯನ್ನು ಹೊಂದಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಸದಾ ಸೋಲುವ ಆರ್‌ಸಿಬಿ ತಂಡದ ಕ್ಯಾಂಪ್‌ಗೆ ಈ ಬಾಲಕನ್ನು ಕರೆದೊಯ್ಯುವಂತೆ ಕಾಮೆಂಟ್ ಮಾಡಿದ್ದಾರೆ.
ಈ ವೀಡಿಯೋ ಪೋಸ್ಟ್ ಮಾಡಿದ ಬೆಂಗಳೂರು ಬುಲ್ಸ್ ತಂಡ ನೋಡಿ ಸಣ್ಣದೊಂದು ಗೂಳಿ ನಮ್ಮ ಬೆಂಕಿಗೆ ಏನು ಹೇಳಿದ ನೋಡಿ ಎಂದು ಬರೆದಿದ್ದಾರೆ. ಬಾಲಕನ ವೀಡಿಯೋ ನೋಡಿದ ಒಬ್ಬರು ಈತ ಮುಂದೆ ಭಾರತ ತಂಡದ ಕೋಚ್ ಆಗುವಂತೆ ಕಾಣಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈತ ಬೆಂಗಳೂರು ಬುಲ್ಸ್‌ನ ಭವಿಷ್ಯದ ಪ್ರತಿಭೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಬಾಲಕ ಭರತ್‌ನ ಶಕ್ತಿಯ ಮೂಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮೋಟಿವೇಷನ್ ಸ್ಪೀಕರ್ ಜನಿಸಿದ ಎಂದು ಇನ್ನೊಬ್ಬ ನೋಡುಗರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಮೈದಾನದಲ್ಲಿ ಕುಳಿತ ಪ್ರೊ ಕಬಡ್ಡಿ ಆಟಗಾರನನ್ನು ಬಾಲಕ ಹುರಿದುಂಬಿಸುತ್ತಿರುವ ರೀತಿ ಅನೇಕ ಕ್ರೀಡಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು. ಆ ವೀಡಿಯೋವನ್ನು ನೀವು ನೋಡಿ ಕಣ್ತುಂಬಿಕೊಳ್ಳಿ.
Pro Kabaddi League: ಬೆಂಗಳೂರು ಬುಲ್ಸ್‌ಗೆ ಸತತ ಎರಡನೇ ಜಯ..!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.