ವಿರಾಟ್ ಕೊಹ್ಲಿ, ಉನ್ಮಕ್ತ್ ಚಾಂದ್ ದಾಖಲೆ ಅಳಿಸಿ ಹಾಕಿದ ಪೃಥ್ವಿ ಶಾ

By Suvarna Web Desk  |  First Published Feb 3, 2018, 8:25 PM IST

ಈ ಮೊದಲು 2008ರ ವಿಶ್ವಕಪ್'ನಲ್ಲಿ ನಾಯಕನಾಗಿದ್ದ ವಿರಾಟ್ ಕೊಹ್ಲಿ 6 ಪಂದ್ಯಗಳಲ್ಲಿ 235 ರನ್ ಸಿಡಿಸಿದ್ದರು. ಇನ್ನು 2012ರಲ್ಲಿ ಉನ್ಮಕ್ತ್ ಚಾಂದ್ 6 ಪಂದ್ಯಗಳಲ್ಲಿ 246 ರನ್ ಬಾರಿಸಿದ್ದರು. ಆದರೆ ಪೃಥ್ವಿ ಶಾ 261 ರನ್ ಕಲೆಹಾಕುವ ಮೂಲಕ ಕೊಹ್ಲಿ ಹಾಗೂ ಚಾಂದ್ ದಾಖಲೆ ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತಕ್ಕೆ ಪೃಥ್ವಿ ಶಾ ನಾಯಕತ್ವದಲ್ಲಿ 4ನೇ ಅಂಡರ್ 19 ವಿಶ್ವಕಪ್ ಲಭಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್'ನಲ್ಲಿ ಸಾಂಘಿಕ ಪ್ರದರ್ಶನ ತೋರಿದ ಪೃಥ್ವಿ ಶಾ ಪಡೆ ಅಂಡರ್ 19 ವಿಶ್ವಕಪ್'ನಲ್ಲಿ ಅಜೇಯವಾಗಿ ಪ್ರಶಸ್ತಿ ಜಯಿಸಿದೆ. ಆಸ್ಟ್ರೇಲಿಯಾ ತಂಡವನ್ನು 8 ವಿಕೆಟ್'ಗಳಿಂದ ಮಣಿಸಿದ ಕಿರಿಯರ ಟೀಂ ಇಂಡಿಯಾ ವಿಜಯದ ಕೇಕೆ ಹಾಕಿತು.

ಇದೇವೇಳೆ ಅಂಡರ್ 19 ತಂಡದ ನಾಯಕ, ಯುವ ಪ್ರತಿಭೆ ಪೃಥ್ವಿ ಶಾ, ಈ ಹಿಂದಿನ ಅಂಡರ್ 19 ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ, ಉನ್ಮಕ್ತ್ ಚಾಂದ್ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಹೌದು, ಟೂರ್ನಿಯುದ್ದಕ್ಕೂ ಗಮನಾರ್ಹ ಪ್ರದರ್ಶನ ತೋರಿದ ಪೃಥ್ವಿ ಶಾ 6 ಪಂದ್ಯಗಳಲ್ಲಿ 65.25ರ ಸರಾಸರಿಯಲ್ಲಿ 261 ರನ್ ಕಲೆಹಾಕುವ ಮೂಲಕ ಅಂಡರ್ 19 ವಿಶ್ವಕಪ್'ನಲ್ಲಿ ಗರಿಷ್ಠ ರನ್ ಕಲೆಹಾಕಿದ ಟೀಂ ಇಂಡಿಯಾ ನಾಯಕ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.

Latest Videos

click me!