
ಮುಂಬೈ(ಡಿ.30): ಎಷ್ಟೇ ಪ್ರಯತ್ನಿಸಿದರೂ ಲಯಕ್ಕೆ ಮರಳದ ಹಿನ್ನೆಲೆಯಲ್ಲಿ ವಿಶ್ವದಾಖಲೆ ವೀರ, ಮುಂಬೈನ ಪ್ರಣವ್ ಧನವಾಡೆ ಕ್ರಿಕೆಟ್'ಗೆ ಅಚ್ಚರಿಯ ವಿದಾಯ ಘೋಷಿಸಿದ್ದಾರೆ.
2016ರಲ್ಲಿ ತಮ್ಮ ಶಾಲೆಯ ಅಂಡರ್ 16 ತಂಡವನ್ನು ಪ್ರತಿನಿಧಿಸಿದ್ದ ಆಟೋ ಚಾಲಕನ ಮಗ ಪ್ರಣವ್, ಒಂದೇ ಇನ್ನಿಂಗ್ಸ್'ನಲ್ಲಿ 1009 ರನ್ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ್ದರು. ಪ್ರಣವ್ ಸಾಧನೆ ಪರಿಗಣಿಸಿ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ತಿಂಗಳಿಗೆ ₹10,000 ವಿದ್ಯಾರ್ಥಿ ವೇತನ ಸಹ ನೀಡುತ್ತಿದೆ.
ಆದರೆ, ಕಳೆದ ಒಂದೂವರೆ ವರ್ಷದಿಂದ ಲಯಕ್ಕೆ ಮರಳದ ಕಾರಣ ಪ್ರಣವ್, ಓದಿನ ಕಡೆ ಹೆಚ್ಚಿನ ಗಮನ ಹರಿಸಲು ಕ್ರಿಕೆಟ್'ಗೆ ವಿದಾಯ ಹೇಳಿದ್ದಾರೆ. ಕಳಪೆ ಫಾರ್ಮ್ ಕಾರಣ ಅವರನ್ನು ಮುಂಬೈ ಅಂಡರ್-16 ತಂಡದಿಂದ ಕೈಬಿಡಲಾಗಿತ್ತು. ಎಷ್ಟೇ ಪ್ರಯತ್ನಿಸಿದರೂ ಲಯಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ಬಳಿಕ ಬೆಂಗಳೂರಿನಲ್ಲಿ ಭಾರತ ಕಿರಿಯರ ತಂಡದ ಕೋಚ್ ದ್ರಾವಿಡ್'ರಿಂದ ಮಾರ್ಗದರ್ಶನ ಪಡೆದರೂ ಪ್ರಯೋಜನವಾಗಿರಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.