ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಬೀಗಿದ ಟೀಂ ಇಂಡಿಯಾ ಅದ್ಧೂರಿಯಾಗಿ ಸಂಭ್ರಮಿಸಿದೆ. ಕೊಹ್ಲಿ ಸೈನ್ಯದ ಗೆಲುವಿಗೆ ಹಲವು ದಿಗ್ಗಜರು ಅಭಿನಂದನೆ ಸಲ್ಲಿಸಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಕೂಡ ಟೀಂ ಇಂಡಿಯಾವನ್ನ ಅಭಿನಂದಿಸಿದ್ದಾರೆ.
ಸಿಡ್ನಿ(ಜ.07): ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಯನ್ನ 2-1 ಅಂತರದಲ್ಲಿ ಗೆದ್ದು ದಾಖಲೆ ಬರೆದ ಟೀಂ ಇಂಡಿಯಾಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದೇ ಮೊದಲ ಭಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಸರಣಿ ಗೆದ್ದಿರುವ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ. ಕೊಹ್ಲಿ ತಂಡದ ಈ ಸಾಧನಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಭಾರತ್ ಬಂದ್ : ಬಸ್ ಸೇವೆ ಇದೆಯಾ..? ಸರ್ಕಾರ ಬೆಂಬಲಿಸುತ್ತಾ..?
ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಸಾಧನೆ ಮಾಡಿದ ಟೀಂ ಇಂಡಿಯಾಗೆ ಅಭಿನಂದನೆಗಳು. ಕಠಿಣ ಹೋರಾಟ, ತಂಡದ ಸಾಂಘಿಕ ಪ್ರದರ್ಶನದಿಂದ ಗೆಲುವು ಸಾಧ್ಯವಾಗಿದೆ. ಈ ಗೆಲುವಿಗೆ ಟೀಂ ಇಂಡಿಯಾ ಅರ್ಹವಾಗಿದೆ. ಕೆಲ ಅದ್ಬುತ ಪ್ರದರ್ಶನಕ್ಕೆ ಸರಣಿ ಸಾಕ್ಷಿಯಾಗಿದೆ. ಮುಂದಿನ ಪಂದ್ಯಗಳಲ್ಲೂ ಯಶಸ್ಸು ಸಿಗಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
A historic cricketing accomplishment in Australia!
Congratulations to the Indian Cricket Team for the hard-fought and richly deserved series victory.
The series witnessed some memorable performances and solid teamwork.
Best wishes for the various games ahead.
ಇದನ್ನೂ ಓದಿ: 1.10 ಲಕ್ಷ ಸಾಮರ್ಥ್ಯ,700 ಕೋಟಿ ವೆಚ್ಚ- ತಲೆ ಎತ್ತಲಿದೆ ವಿಶ್ವದ ಬೃಹತ್ ಕ್ರೀಡಾಂಗಣ
ಆಸ್ಟೇಲಿಯಾ ವಿರುದ್ಧದ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಮಳೆಯಿಂದಾಗಿ ಡ್ರಾನಲ್ಲಿ ಅಂತ್ಯಗೊಂಡಿತು. ಹೀಗಾಗಿ ಭಾರತ ಸರಣಿಯನ್ನ 2-1 ಅಂತರದಲ್ಲಿ ಗೆದ್ದುಕೊಂಡಿತು. ಇದುವರೆಗೆ ಟೀಂ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಸರಣಿ ಗೆದ್ದಿರಲಿಲ್ಲ. ಇದೀಗ ಈ ಸಾಧನೆ ಮಾಡಿದ ಮೊದಲ ಭಾರತ ತಂಡ ಅನ್ನೋ ಹೆಗ್ಗಳಿಕೆಗೆ ಕೊಹ್ಲಿ ಸೈನ್ಯ ಪಾತ್ರವಾಗಿದೆ.