ಸ್ಮಿತ್ ಹಾಗೂ ವಾರ್ನರ್ ಇಬ್ಬರಿಗೂ ಐಪಿಎಲ್‌ನಲ್ಲಿ ಆಡಲು ಬಿಸಿಸಿಐ ಅನುಮತಿ ನೀಡದೇ ಇರಬಹುದು. ಒಂದು ವೇಳೆ ನೀಡಿದರೂ ಸ್ಮಿತ್ ಮತ್ತು ವಾರ್ನರ್‌ಗೆ ನಾಯಕತ್ವ ನೀಡಬಾರದು ಎಂದು ಫ್ರಾಂಚೈಸಿಗಳಿಗೆ ಷರತ್ತು ವಿಧಿಸಬಹುದು ಎಂದು ವರದಿಯಾಗಿದೆ.
ನವದೆಹಲಿ[ಜ.07]: ಆಸ್ಪ್ರೇಲಿಯಾದ ಕಳಂಕಿತ ಕ್ರಿಕೆಟಿಗ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್, ಐಪಿಎಲ್ 12ನೇ ಆವೃತ್ತಿಗೆ ಮರಳುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಸ್ಮಿತ್, ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕನಾಗಿ ಅಲ್ಲ, ಕೇವಲ ಆಟಗಾರನಾಗಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಐಪಿಎಲ್ 2019: ಯಾವ ತಂಡದಲ್ಲಿದ್ದಾರೆ ಉತ್ತಮ ವಿಕೆಟ್ ಕೀಪರ್?ಈ ಹಿನ್ನಲೆಯಲ್ಲಿ ಭಾರತದ ಅಜಿಂಕ್ಯ ರಹಾನೆ, ರಾಜಸ್ಥಾನ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಮಿತ್ ಹಾಗೂ ವಾರ್ನರ್ ಇಬ್ಬರಿಗೂ ಐಪಿಎಲ್‌ನಲ್ಲಿ ಆಡಲು ಬಿಸಿಸಿಐ ಅನುಮತಿ ನೀಡದೇ ಇರಬಹುದು. ಒಂದು ವೇಳೆ ನೀಡಿದರೂ ಸ್ಮಿತ್ ಮತ್ತು ವಾರ್ನರ್‌ಗೆ ನಾಯಕತ್ವ ನೀಡಬಾರದು ಎಂದು ಫ್ರಾಂಚೈಸಿಗಳಿಗೆ ಷರತ್ತು ವಿಧಿಸಬಹುದು ಎಂದು ವರದಿಯಾಗಿದೆ.
ರಾಜಸ್ಥಾನ ರಾಯಲ್ಸ್ ಫುಲ್ ಟೀಂ -ಉನಾದ್ಕಟ್‌ಗೆ 8.4 ಕೋಟಿ ಜಾಕ್‌ಪಾಟ್!
12ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 29ರಿಂದ ಆರಂಭವಾಗಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್’ನ ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ರಾಜಸ್ಥಾನ ರಾಯಲ್ಸ್, 11ನೇ ಆವೃತ್ತಿಯ ಐಪಿಎಲ್’ನಲ್ಲಿ ಕ್ವಾಲಿಫೈಯರ್ ಹಂತ ಪ್ರವೇಶಿಸಿತ್ತು.