ಕ್ರಿಸ್ ಗೇಲ್, ಎಬಿಡಿ ಮತ್ತು ಮಾಲಿಂಗ ಅವರ ವೀಕ್ನೆಸ್'ಗಳೇನು?

By Suvarna Web DeskFirst Published Apr 14, 2017, 9:31 AM IST
Highlights

ಆರ್'ಸಿಬಿಯ ಎಬಿ ಡೀವಿಲಿಯರ್ಸ್ ಅವರಂತೂ ಮಾಲಿಂಗರ ಮೇಲೆ ಅಕ್ಷರಶಃ ಸವಾರಿ ಮಾಡಿದ್ದಾರೆ. ಮಾಲಿಂಗರ 42 ಬಾಲ್'ನಲ್ಲಿ ಎಬಿಡಿ 71 ರನ್ ಸ್ಕೋರ್ ಮಾಡಿದ್ದಾರೆ. ಆದರೆ, ಒಮ್ಮೆಯೂ ಮಾಲಿಂಗಗೆ ಎಬಿಡಿಯನ್ನು ಬಲಿತೆಗೆದುಕೊಳ್ಳಲು ಆಗಿಲ್ಲ. ಹೀಗಾಗಿ, ಎಬಿಡಿಯೇ ಮಾಲಿಂಗರ ವೀಕ್ನೆಸ್.

ಬೆಂಗಳೂರು(ಏ. 14): ಇವತ್ತಿನ ಆರ್'ಸಿಬಿ ವರ್ಸಸ್ ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯವು ಹೈವೋಲ್ಟೇಜ್ ಹಣಾಹಣಿಯಾಗಿರಲಿದೆ. ಕ್ರಿಸ್ ಗೇಲ್, ಎಬಿಡಿ, ಕೊಹ್ಲಿ, ವ್ಯಾಟ್ಸನ್, ಪೊಲ್ಲಾರ್ಡ್'ರಂಥ ಸ್ಫೋಟಕ ಬ್ಯಾಟುಗಾರರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರನ್ ಹೊಳೆ ಹರಿಸುವ ನಿರೀಕ್ಷೆ ಇದೆ. ಎದುರಾಳಿ ತಂಡದ ಆಟಗಾರರ ದೌರ್ಬಲ್ಯಗಳನ್ನು ಬಳಸಿಕೊಂಡು ತಂಡಗಳು ರಣತಂತ್ರ ರೂಪಿಸಲಿದೆ. ಈ ನಿಟ್ಟಿನಲ್ಲಿ ಕೆಲ ಪ್ರಮುಖ ಆಟಗಾರರ ವೀಕ್ನೆಸ್ ರಿಪೋರ್ಟ್ ಇಲ್ಲಿದೆ.

1) ಗೇಲ್ ವೀಕ್ನೆಸ್:
ಕ್ರಿಸ್ ಗೇಲ್ ಅವರಿಗೆ ಬಲಗೈ ಸ್ಪಿನ್ನರ್'ಗಳ ವಿಚಾರದಲ್ಲಿ ವೀಕ್ನೆಸ್ ಇದೆ. ಐಪಿಎಲ್'ನ 56 ಮ್ಯಾಚ್'ನಲ್ಲಿ ಗೇಲ್ 19 ಬಾರಿ ಬಲಗೈ ಸ್ಪಿನ್ನರ್ಸ್'ಗೆ ವಿಕೆಟ್ ಒಪ್ಪಿಸಿದ್ದಾರೆ. ಹರ್ಭಜನ್ ಸಿಂಗ್ ಅವರು ಗೇಲ್'ಗೆ ಇದೂವರೆಗೆ 65 ಎಸೆತ ಹಾಕಿ 65 ರನ್ನಿತ್ತು 3 ಬಾರಿ ವಿಕೆಟ್ ಕಬಳಿಸಿದ್ದಾರೆ.

2) ಎಬಿಡಿ ವೀಕ್ನೆಸ್:
ಕ್ರಿಸ್ ಗೇಲ್'ಗೆ ಬಲಗೈ ಸ್ಪಿನ್ನರ್'ಗಳ ವೀಕ್ನೆಸ್ ಇದ್ದರೆ, ಎಬಿ ಡೀವಿಲಿಯರ್ಸ್'ಗೆ ಎಡಗೈ ಸ್ಪಿನ್ನರ್ಸ್ ಸ್ವಲ್ಪಮಟ್ಟಿಗಾದರೂ ಕಂಟಕವಾಗಿದ್ದಾರೆ. ಚುಟುಕು ಕ್ರಿಕೆಟ್'ನಲ್ಲಿ 146 ಸ್ಟ್ರೈಕ್ ರೇಟ್ ಹೊಂದಿರುವ ಎಬಿಡಿ ಅವರು ಎಡಗೈ ಸ್ಪಿನ್ನರ್ಸ್ ವಿರುದ್ಧ ಆಡಿದ 46 ಇನ್ನಿಂಗ್ಸಲ್ಲಿ 135.75 ಸ್ಟ್ರೈಕ್ ರೇಟ್'ನಲ್ಲಿ 448 ರನ್ ಗಳಿಸಿದ್ದಾರೆ. ಆದರೆ, 9 ಬಾರಿ ಅವರಿಗೆ ಬಲಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಎಡಗೈ ಸ್ಪಿನ್ನರ್ ಕೃಣಾಲ್ ಪಾಂಡ್ಯ ಕಳೆ ವರ್ಷದ ಐಪಿಎಲ್'ನಲ್ಲಿ ಎಬಿಡಿಯನ್ನು ಎರಡು ಬಾರಿ ಔಟ್ ಮಾಡಿದ್ದಾರೆ. 10 ಬಾಲ್ ಎಸೆತು ಕೇವಲ 7 ರನ್ನಿತ್ತು ಎರಡು ಸಲ ಎಬಿಡಿಯನ್ನು ಬಲಿತೆಗೆದುಕೊಂಡಿದ್ದಾರೆ.

3) ಮಾಲಿಂಗ ವೀಕ್ನೆಸ್:
ಶ್ರೀಲಂಕಾದ ಅದ್ಭುತ ಫಾಸ್ಟ್ ಬೌಲರ್ ಲಸಿತ್ ಮಾಲಿಂಗ ಅವರೆಂದರೆ ಪ್ರತಿಯೊಂದೂ ತಂಡವು ಹೆದರುತ್ತವೆ. ಅವರ ಯಾರ್ಕರ್'ಗಳು ಹಾಗಿರುತ್ತವೆ. ಆದರೆ, ಆರ್'ಸಿಬಿ ತಂಡದವರು ಮಾತ್ರ ಮಾಲಿಂಗರ ಬೌಲಿಂಗನ್ನು ಬಹಳ ಸಮರ್ಥವಾಗಿ ಎದುರಿಸುತ್ತಾರೆ. ಮಾಲಿಂಗ ಹೆಚ್ಚು ಯಶಸ್ಸು ಕಾಣದ ಏಕೈಕ ತಂಡವೆಂದರೆ ಆರ್'ಸಿಬಿ ಎನ್ನಬಹುದು. ಆರ್'ಸಿಬಿ ವಿರುದ್ಧ ಮಾಲಿಂಗ 36 ಸರಾಸರಿಯಲ್ಲಿ ಕೇವಲ 13 ವಿಕೆಟ್ ಗಳಿಸಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 31.80 ರನ್ ಸರಾಸರಿಯಂತೆ 5 ವಿಕೆಟ್ ಸಂಪಾದಿಸಿದ್ದಾರೆ. ಬೆಂಗಳೂರಲ್ಲಿ ಇವರ ಎಕನಾಇ ರೇಟ್ ಬರೋಬ್ಬರಿ 7.95 ಇದೆ. ಆರ್'ಸಿಬಿಯ ಎಬಿ ಡೀವಿಲಿಯರ್ಸ್ ಅವರಂತೂ ಮಾಲಿಂಗರ ಮೇಲೆ ಅಕ್ಷರಶಃ ಸವಾರಿ ಮಾಡಿದ್ದಾರೆ. ಮಾಲಿಂಗರ 42 ಬಾಲ್'ನಲ್ಲಿ ಎಬಿಡಿ 71 ರನ್ ಸ್ಕೋರ್ ಮಾಡಿದ್ದಾರೆ. ಆದರೆ, ಒಮ್ಮೆಯೂ ಮಾಲಿಂಗಗೆ ಎಬಿಡಿಯನ್ನು ಬಲಿತೆಗೆದುಕೊಳ್ಳಲು ಆಗಿಲ್ಲ. ಹೀಗಾಗಿ, ಎಬಿಡಿಯೇ ಮಾಲಿಂಗರ ವೀಕ್ನೆಸ್.

click me!