ಬೆಂಗಳೂರಲ್ಲಿ ಮುಂಬೈಗೆ ಕಾದಿದೆ ಹೊಸ ಪಿಚ್; ಯಾರಿಗೆ ಅನುಕೂಲ ಈ ಪಿಚ್? ಇಲ್ಲಿದೆ ಪಿಚ್ ರಿಪೋರ್ಟ್

Published : Apr 14, 2017, 09:02 AM ISTUpdated : Apr 11, 2018, 12:51 PM IST
ಬೆಂಗಳೂರಲ್ಲಿ ಮುಂಬೈಗೆ ಕಾದಿದೆ ಹೊಸ ಪಿಚ್; ಯಾರಿಗೆ ಅನುಕೂಲ ಈ ಪಿಚ್? ಇಲ್ಲಿದೆ ಪಿಚ್ ರಿಪೋರ್ಟ್

ಸಾರಾಂಶ

ಇಂದಿನ ಪಂದ್ಯದಲ್ಲಿ ಹೊಸ ಪಿಚ್ ಮುಂಬೈ ಇಂಡಿಯನ್ಸ್'ಗೆ ಎದುರಾಗಲಿದೆ. ಆರ್'ಸಿಬಿ ಮತ್ತು ಡೆಲ್ಲಿ ಡೇರ್'ಡೆವಿಲ್ಸ್ ನಡುವಿನ ಇವತ್ತಿನ ಪಂದ್ಯದಲ್ಲಿ ಬೇರೆಯದೇ ಪಿಚ್'ನಲ್ಲಿ ಆಡಲಾಗಿತ್ತು. ಬೌಲರ್ ಮತ್ತು ಬ್ಯಾಟ್ಸ್'ಮ್ಯಾನ್ ಇಬ್ಬರಿಗೂ ಆ ಪಿಚ್'ನಲ್ಲಿ ಸಮಾನ ಅವಕಾಶವಿತ್ತು. ಆದರೆ, ಇವತ್ತಿನ ಪಂದ್ಯದಲ್ಲಿ ಆಡಲಾಗುವ ಪಿಚ್ ಪಕ್ಕಾ ಬ್ಯಾಟಿಂಗ್ ಪಿಚ್ ಆಗಿದೆ. ಬ್ಯಾಟುಗಾರರ ಸ್ವರ್ಗವೆನಿಸಲಿದೆ.

ಬೆಂಗಳೂರು(ಏ. 14): ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಆರ್'ಸಿಬಿ ವರ್ಸಸ್ ಮುಂಬೈ ಇಂಡಿಯನ್ಸ್ ಹಣಾಹಣಿ ನಡೆಯಲಿದೆ. ಚಿನ್ನಸ್ವಾಮಿಯು ಮುಂಬೈ ಇಂಡಿಯನ್ಸ್ ತಂಡಕ್ಕೆ ಅದೃಷ್ಟದ ಮೈದಾನವಾಗಿದೆ. ಇಲ್ಲಿ ಮುಂಬೈಕರ್'ಗಳು ಆಡಿದ 7 ಪಂದ್ಯಗಳ ಪೈಕಿ ಆರರಲ್ಲಿ ದಿಗ್ವಿಜಯ ಸಾಧಿಸಿದ್ದಾರೆ. ಪಕ್ಕಾ ಬ್ಯಾಟ್ಸ್'ಮ್ಯಾನ್'ಗಳಿಗೆ ಅನುಕೂಲವಾಗುವ ಪಿಚ್'ಗಳನ್ನು ಹೊಂದಿರುವ ಚಿನ್ನಸ್ವಾಮಿ ಗ್ರೌಂಡ್'ನಲ್ಲಿ ಮುಂಬೈ ಬ್ಯಾಟುಗಾರರೇ ಹೆಚ್ಚು ಮಿಂಚಿದ್ದಾರೆ. ಆದರೆ, ಆರ್'ಸಿಬಿ ಬ್ಯಾಟ್ಸ್'ಮ್ಯಾನ್ ಎಬಿ ಡೀವಿಲಿಯರ್ಸ್ ಅತ್ಯದ್ಭುತ ಫಾರ್ಮ್'ನಲ್ಲಿದ್ದಾರೆ. ವಿರಾಟ್ ಕೊಹ್ಲಿ ತಂಡಕ್ಕೆ ಮರಳಿ ಬಂದಿರುವುದು ಆನೆಬಲ ಬಂದಂತಾಗಿದೆ. ಕ್ರಿಸ್ ಗೇಲ್, ವ್ಯಾಟ್ಸನ್, ಕೇದಾರ್ ಜಾಧವ್ ಮಿಂಚಿದರೆ ಆರ್'ಸಿಬಿ ತಂಡದ ಸ್ಕೋರನ್ನು ನಿಯಂತ್ರಿಸುವವರೇ ಇಲ್ಲದಂತಾಗುತ್ತದೆ. ಇವತ್ತಿನ ಪಂದ್ಯದಲ್ಲಿ ಆರ್'ಸಿಬಿ ತಂಡದ ಪರ ವಿಷ್ಣು ವಿನೋದ್ ಮತ್ತು ಕೆಎಲ್ ರಾಹುಲ್ ಇಬ್ಬರೂ ಆಡುವುದು ಡೌಟು.

ಇಂದಿನ ಪಂದ್ಯದಲ್ಲಿ ಹೊಸ ಪಿಚ್ ಮುಂಬೈ ಇಂಡಿಯನ್ಸ್'ಗೆ ಎದುರಾಗಲಿದೆ. ಆರ್'ಸಿಬಿ ಮತ್ತು ಡೆಲ್ಲಿ ಡೇರ್'ಡೆವಿಲ್ಸ್ ನಡುವಿನ ಇವತ್ತಿನ ಪಂದ್ಯದಲ್ಲಿ ಬೇರೆಯದೇ ಪಿಚ್'ನಲ್ಲಿ ಆಡಲಾಗಿತ್ತು. ಬೌಲರ್ ಮತ್ತು ಬ್ಯಾಟ್ಸ್'ಮ್ಯಾನ್ ಇಬ್ಬರಿಗೂ ಆ ಪಿಚ್'ನಲ್ಲಿ ಸಮಾನ ಅವಕಾಶವಿತ್ತು. ಆದರೆ, ಇವತ್ತಿನ ಪಂದ್ಯದಲ್ಲಿ ಆಡಲಾಗುವ ಪಿಚ್ ಪಕ್ಕಾ ಬ್ಯಾಟಿಂಗ್ ಪಿಚ್ ಆಗಿದೆ. ಬ್ಯಾಟುಗಾರರ ಸ್ವರ್ಗವೆನಿಸಲಿದೆ. ಹೊನಲು ಬೆಳಕಿನಲ್ಲಿ ಚೇಸಿಂಗ್ ಮಾಡುವಾಗ ಹೆಚ್ಚು ಅನುಕೂಲವಾಗಲಿದೆ. ವಿರಾಟ್ ಕೊಹ್ಲಿ ಕೂಡ ಇದನ್ನೇ ಹೇಳಿದ್ದಾರೆ. ಚೀಸಿಂಗ್ ಮಾಡುವ ತಂಡಕ್ಕೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಟಾಸ್ ಗೆದ್ದವರೇ ಬಾಸ್ ಆಗಲಿದ್ದಾರೆ.

ಸಂಭಾವ್ಯ ತಂಡಗಳು:

ಆರ್'ಸಿಬಿ ತಂಡ: ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎಬಿ ಡೀವಿಲಿಯರ್ಸ್, ಶೇನ್ ವ್ಯಾಟ್ಸನ್, ಕೇದಾರ್ ಜಾಧವ್, ಮಂದೀಪ್ ಸಿಂಗ್, ಸ್ಟುವರ್ಟ್ ಬಿನ್ನಿ, ಪವನ್ ನೇಗಿ, ಟಿಮಲ್ ಮಿಲ್ಸ್, ಯುಜವೇಂದ್ರ ಚಾಹಲ್, ಅನಿಕೇತ್ ಚೌಧರಿ.

ಮುಂಬೈ ಇಂಡಿಯನ್ಸ್: ಪಾರ್ಥಿವ್ ಪಟೇಲ್, ಜೋಸ್ ಬಟ್ಲರ್, ರೋಹಿತ್ ಶರ್ಮಾ, ನಿತೀಶ್ ರಾಣಾ, ಕೀರೋನ್ ಪೊಲಾರ್ಡ್, ಕೃಣಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಹರ್ಭಜನ್ ಸಿಂಗ್, ಟಿಮ್ ಸೌಥೀ, ಲಸಿತ್ ಮಾಲಿಂಗ, ಜಸ್'ಪ್ರೀತ್ ಬುಮ್ರಾ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ
ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಹಾರ್ದಿಕ್ ದಾಖಲೆ, ಸೌತ್ ಆಫ್ರಿಕಾಗೆ 232 ರನ್ ಟಾರ್ಗೆಟ್