ಪ್ರೊ ಕಬಡ್ಡಿ: ಜೈಪುರಕ್ಕೆ ಸುಲಭ ಜಯ

Published : Aug 16, 2019, 10:21 AM ISTUpdated : Aug 16, 2019, 10:25 AM IST
ಪ್ರೊ ಕಬಡ್ಡಿ: ಜೈಪುರಕ್ಕೆ ಸುಲಭ ಜಯ

ಸಾರಾಂಶ

ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ತೋರಿದ ನಾಯಕ ದೀಪಕ್ ಹೂಡಾ ಜೈಪುರ ತಂಡಕ್ಕೆ ಗೆಲುವು ತಂದಿತ್ತರು. ಪುಣೇರಿ ಪಲ್ಟಾನ್ ತಂಡ 5ನೇ ಸೋಲಿಗೆ ಸಾಕ್ಷಿಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ಅಹ್ಮದಾಬಾದ್‌[ಆ.16]: ಪ್ರೊ ಕಬಡ್ಡಿ ಲೀಗ್ 7ನೇ ಆವೃತ್ತಿಯಲ್ಲಿ ಜೈಪುರ ಪಿಂಕ್‌ ಪ್ಯಾಂಥ​ರ್ಸ್ ಯಶಸ್ಸಿನ ಓಟ ಮುಂದುವರಿದಿದೆ. 

ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!

ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ನಾಯಕ ದೀಪಕ್‌ ಹೂಡಾ (09 ರೈಡ್‌ ಅಂಕ) ಅವರ ಆಕರ್ಷಕ ಪ್ರದರ್ಶನದ ನೆರವಿನಿಂದ ಜೈಪುರ, ಪುಣೇರಿ ಪಲ್ಟನ್‌ ವಿರುದ್ಧ 33-25 ಅಂಕಗಳಲ್ಲಿ ಗೆಲುವು ಸಾಧಿಸಿತು. ಈ ಜಯದೊಂದಿಗೆ ಜೈಪುರ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು. 

ಇನ್ನೂ ಮುಗಿದಿಲ್ಲ ಅಂತಾರಾಷ್ಟ್ರೀಯ ಕರಿಯರ್ , ಪ್ರತಿಕ್ರಿಯೆ ನೀಡಿದ ಗೇಲ್!

ಮೊದಲಾರ್ಧದ ಮುಕ್ತಾಯಕ್ಕೆ 17-11ರ ಮುನ್ನಡೆ ಸಾಧಿಸಿದ್ದ ಪಿಂಕ್‌ ಪ್ಯಾಂಥ​ರ್ಸ್, ದ್ವಿತೀಯಾರ್ಧದಲ್ಲೂ ಆಕ್ರಮಣಕಾರಿ ಆಟವಾಡಿತು. ಪಂದ್ಯದಲ್ಲಿ 2 ಬಾರಿ ಪುಣೆ ಆಲೌಟ್‌ ಮಾಡಿ, 8 ಅಂಕಗಳ ಅಂತರದಲ್ಲಿ ಸುಲಭ ಗೆಲುವು ದಾಖಲಿಸಿತು. ದಿಗ್ಗಜ ಆಟಗಾರ ಅನೂಪ್‌ ಕುಮಾರ್‌ ಮಾರ್ಗದರ್ಶನದ ಪುಣೆಗಿದು ಟೂರ್ನಿಯಲ್ಲಿ 5ನೇ ಸೋಲಾಗಿದ್ದು, ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಉಳಿದಿದೆ.

ಇಂದಿನ ಪಂದ್ಯಗಳು: 
ಮುಂಬಾ-ಪಾಟ್ನಾ, ಸಂಜೆ 7.30ಕ್ಕೆ, 
ಗುಜರಾತ್‌-ಜೈಪುರ, ರಾತ್ರಿ 8.30ಕ್ಕೆ
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!