
ಮುಂಬೈ[ಆ.16]: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಯ್ಕೆಗೆ ಕಪಿಲ್ ದೇವ್ ನೇತೃತ್ವದ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ಶುಕ್ರವಾರ 6 ಅಭ್ಯರ್ಥಿಗಳ ಸಂದರ್ಶನ ನಡೆಸಲಿದೆ. ಹಾಲಿ ಕೋಚ್ ರವಿ ಶಾಸ್ತ್ರಿ ಹೆಸರು ಸಹ ಅಂತಿಮ ಪಟ್ಟಿಯಲ್ಲಿದ್ದು, ಅವರೇ ಕೋಚ್ ಆಗಿ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.
ಟೀಂ ಇಂಡಿಯಾ ಕೋಚ್ ರೇಸ್‌ನಲ್ಲಿರುವ 6 ಮಂದಿಯ ಕಿರುಪರಿಚಯ
ಶಾಸ್ತ್ರಿ ಜತೆ ನ್ಯೂಜಿಲೆಂಡ್‌ನ ಮಾಜಿ ಕೋಚ್ ಮೈಕ್ ಹೆಸ್ಸನ್, ಆಸ್ಪ್ರೇಲಿಯಾದ ಮಾಜಿ ಆಟಗಾರ ಟಾಮ್ ಮೂಡಿ, ವಿಂಡೀಸ್ ಹಾಗೂ ಆಫ್ಘಾನಿಸ್ತಾನದ ಮಾಜಿ ಕೋಚ್ ಫಿಲ್ ಸಿಮನ್ಸ್, ಭಾರತ ತಂಡದ ಮಾಜಿ ವ್ಯವಸ್ಥಾಪಕ ಲಾಲ್‌ಚಂದ್ ರಜಪೂತ್ ಹಾಗೂ ಭಾರತದ ಮಾಜಿ ಆಲ್ರೌಂಡರ್, ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ಮಾಜಿ ಕೋಚ್ ರಾಬಿನ್ ಸಿಂಗ್ ಕಣದಲ್ಲಿದ್ದಾರೆ.
ಮತ್ತೊಂದು ಅವಧಿಗೆ ಶಾಸ್ತ್ರಿಯೇ ಟೀಂ ಇಂಡಿಯಾ ಕೋಚ್?
2017ರಲ್ಲಿ ಕೋಚ್ ಆಗಿ ನೇಮಕಗೊಂಡ ಶಾಸ್ತ್ರಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಬಹುತೇಕ ಆಟಗಾರರ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜುಲೈ 2017ರಿಂದ ಈ ವರೆಗೂ ಟೀಂ ಇಂಡಿಯಾ 21 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಭಾರತ 13ರಲ್ಲಿ ಗೆದ್ದಿದೆ. ಶಾಸ್ತ್ರಿ ಮಾರ್ಗದರ್ಶನದಲ್ಲಿ ಭಾರತ 36 ಟಿ20ಗಳಲ್ಲಿ 25 ಜಯ, 60 ಏಕದಿನಗಳಲ್ಲಿ 43 ಗೆಲುವುಗಳನ್ನು ಕಂಡಿದೆ.
ಶಾಸ್ತ್ರಿಯೇ ಕೋಚ್ ಆಗಿ ಮುಂದುವರಿದರೂ, ಅವರಿಷ್ಟದ ಸಹಾಯಕ ಸಿಬ್ಬಂದಿ ಸಿಗುವುದು ಅನುಮಾನವಾಗಿದೆ. ಭರತ್ ಅರುಣ್ ಬೌಲಿಂಗ್ ಕೋಚ್ ಆಗಿ ಮುಂದುವರಿಯುವುದು ಬಹುತೇಕ ಖಚಿತ. ಆದರೆ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್‌ರನ್ನು ಬಿಸಿಸಿಐ ಬದಲಿಸುವ ಸಾಧ್ಯತೆ ಇದ್ದು, ಮಾಜಿ ಆಟಗಾರ ವಿಕ್ರಮ್ ರಾಥೋಡ್ ಈ ಹುದ್ದೆಗೇರಲು ಮುಂಚೂಣಿಯಲ್ಲಿದ್ದಾರೆ. ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್‌ಗೆ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಜಾಂಟಿ ರೋಡ್ಸ್‌ರಿಂದ ಸ್ಪರ್ಧೆಯಿದೆ. ಕ್ರಿಕೆಟ್ ಸಲಹಾ ಸಮಿತಿ ಪ್ರಧಾನ ಕೋಚ್‌ರನ್ನು ಆಯ್ಕೆ ಮಾಡಿದರೆ, ಎಂ.ಎಸ್.ಕೆ.ಪ್ರಸಾದ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ, ಸಹಾಯಕ ಸಿಬ್ಬಂದಿಯನ್ನು ಆಯ್ಕೆ ಮಾಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.