PKL 7: ಬೆಂಗಳೂರು ಬುಲ್ಸ್‌ಗೆ ಸೋಲಿನ ಶಾಕ್ ಕೊಟ್ಟ ದಬಾಂಗ್ ಡೆಲ್ಲಿ

By Web Desk  |  First Published Aug 24, 2019, 9:19 PM IST

7ನೇ ಆವೃತ್ತಿಯ ಪ್ರೊ ಕಬಡ್ಡಿಯ ಲೀಗ್ ಟೂರ್ನಿಯಲ್ಲಿ ದಬಾಂಗ್ ಡೆಲ್ಲಿ ತಂಡ ಬೆಂಗಳೂರು ತಂಡಕ್ಕೆ ಆಘಾತ ನೀಡಿದೆ. ಕೇವಲ 2 ಅಂಕಗಳಿಂದ ರೋಚಕವಾಗಿ ಜಯ ಸಾಧಿಸಿದ ಡೆಲ್ಲಿ 3ನೇ ಸ್ಥಾನಕ್ಕೇರಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ,..


ನವದೆಹಲಿ[ಆ.24]: ಪವನ್ ಶೆರಾವತ್[17 ಅಂಕ] ಮಿಂಚಿನ ಪ್ರದರ್ಶನದ ಹೊರತಾಗಿಯೂ ಕೊನೆಯ ಕ್ಷಣದಲ್ಲಿ ಕಮ್ ಬ್ಯಾಕ್ ಮಾಡಿದ ದಬಾಂಗ್ ಡೆಲ್ಲಿ 33-31 ಅಂಕಗಳ ಅಂತರದ ರೋಚಕ ಜಯ ಸಾಧಿಸಿದೆ. 13 ಅಂಕ ಪಡೆದ ನವೀನ್ ಕುಮಾರ್ ಡೆಲ್ಲಿ ಪಾಲಿನ ಸೂಪರ್ ಹೀರೋ ಆಗಿ ಹೊರಹೊಮ್ಮಿದರು. ಈ ಗೆಲುವಿನೊಂದಿಗೆ ದಬಾಂಗ್ ಡೆಲ್ಲಿ ಮೂರನೇ ಸ್ಥಾನಕ್ಕೇರಿದರೆ, ಟೂರ್ನಿಯಲ್ಲಿ 4ನೇ ಸೋಲು ಕಂಡ ಬೆಂಗಳೂರು ಬುಲ್ಸ್ ತಂಡ 5ನೇ ಸ್ಥಾನದಲ್ಲೇ ಉಳಿದಿದೆ.

ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!

Latest Videos

undefined

ಏಳನೇ ಆವೃತ್ತಿಯ ಡೆಲ್ಲಿ ಚರಣದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಬೆಂಗಳೂರು 5 ಅಂಕ ಗಳಿಸಿದ ಬಳಿಕ ಡೆಲ್ಲಿ ಮೊದಲ ಅಂಕ ಕಲೆಹಾಕಿತು. ಇದರ ಹೊರತಾಗಿಯೂ ಅಂಕ ಗಳಿಸುತ್ತಾ ಸಾಗಿದ ಬೆಂಗಳೂರು ಬುಲ್ಸ್ 19-11 ಅಂಕಗಳ ಮುನ್ನಡೆ ಸಾಧಿಸಿತು. ಪವನ್ ಶೆರಾವತ್ ಮೊದಲಾರ್ಧದಲ್ಲೇ 9 ಅಂಕಗಳಿಸಿ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು.

PKL 2019: ಗೆಲುವಿನ ಸಿಹಿ ಕಂಡ ಗುಜರಾತ್, ಯು ಮುಂಬಾ!

ಮೊದಲಾರ್ಧದ ಬಳಿಕ ಡೆಲ್ಲಿ ಆಕ್ರಮಣಕಾರಿ ಆಟಕ್ಕೆ ಮೊರೆ ಹೋಯಿತು. ಡೆಲ್ಲಿ ಪರ ನವೀನ್ ಕುಮಾರ್ ನಿರಂತರ ಅಂಕ ಕಲೆಹಾಕುತ್ತಾ ಸಾಗಿದರು. ಇನ್ನೇನು ಪಂದ್ಯ ಮುಕ್ತಾಯಕ್ಕೆ ಕೊನೆಯ ಎರಡುವರೆ ನಿಮಿಷವಿದ್ದಾಗ ಬೆಂಗಳೂರು ತಂಡವನ್ನು ಆಲೌಟ್ ಮಾಡಿದ ಡೆಲ್ಲಿ 28-26 ಮುನ್ನಡೆ ಸಾಧಿಸಿತು. ಕೊನೆಯ ನಿಮಿಷದಲ್ಲಿ ಪವನ್ ಶೆರಾವತ್ ಅವರನ್ನು ಟ್ಯಾಕಲ್ ಮಾಡಿದ ರವೀಂದ್ರ ಪೆಹಲ್ ಟ್ಯಾಕಲ್ ಮಾಡುವ ಮೂಲಕ ಡೆಲ್ಲಿ ಗೆಲುವನ್ನು ಖಚಿತಪಡಿಸಿದರು.

ಪ್ರಮುಖ ಅಂಕಿ-ಅಂಶ: 

* ಡೆಲ್ಲಿ ತಂಡದ ಚಂದ್ರನ್ ರಂಜಿತ್ 50ನೇ ಪ್ರೊ ಕಬಡ್ಡಿ ಪಂದ್ಯವನ್ನಾಡಿದರು.

* ಪವನ್ ಶೆರಾವತ್ 450ನೇ ರೇಡ್ ಪಾಯಿಂಟ್ ಕಲೆಹಾಕಿದರು.

* ನವೀನ್ ಕುಮಾರ್ 250+ ರೇಡ್ ಪಾಯಿಂಟ್ ಕಲೆ ಹಾಕಿದರು. 
 

click me!