PKL 2019; ಮುಂಬೈ ಮಣಿಸಿದ ಬೆಂಗಳೂರು; ಪ್ಲೇ ಆಫ್ ತವಕದಲ್ಲಿ ಬುಲ್ಸ್!

By Web Desk  |  First Published Sep 27, 2019, 10:02 PM IST

ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಗೆಲುವು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮುಂಬೈ ವಿರುದ್ಧದ ಗೆಲುವು ಬುಲ್ಸ್ ತಂಡದ ಪ್ಲೇ ಕನಸನ್ನು ಮತ್ತಷ್ಟು ಗಟ್ಟಿಗೊಳಿಸಿದೆ.


ಜೈಪುರ(ಸೆ.27): ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್ ಸ್ಥಾನಕ್ಕೇರಲು ತಂಡಗಳ ಹೋರಾಟ ತೀವ್ರ ಗೊಂಡಿದೆ. ದಿಲ್ಲಿ ದಬಾಂಗ್ ಹಾಗೂ ಬೆಂಗಾಲ್ ವಾರಿಯರ್ ಈಗಾಗಲೇ ಸ್ಥಾನ ಖಚಿತಪಡಿಸಿಕೊಂಡಿದೆ. ಇದೀಗ ಬೆಂಗಳೂರು ಬುಲ್ಸ್ ಕೂಡ ಪ್ಲೇ ಸ್ಥಾನಕ್ಕೇರಲು ತುದಿಗಾಲಲ್ಲಿ ನಿಂತಿದೆ. ಮಹತ್ವದ ಪಂದ್ಯದಲ್ಲಿ ಯು ಮುಂಬಾ ಮಣಿಸಿದ ಬೆಂಗಳೂರು ಬುಲ್ಸ್ ಅಭಿಮಾನಿಗಳ ನಿರೀಕ್ಷೆ ಇಮ್ಮಡಿಗೊಳಿಸಿದ್ದಾರೆ.

ಇದನ್ನೂ ಓದಿ: ಪ್ರೊ ಕಬಡ್ಡಿ ಟೂರ್ನಿ ಮೆರುಗು ಹೆಚ್ಚಿಸಿದ ಪ್ಯಾರ ಬ್ಯಾಡ್ಮಿಂಟನ್ ತಾರೆ ಮಾನಸಿ!...

ಬೆಂಗಳೂರು ಹಾಗೂ ಯು ಮುಂಬಾ ಪಂದ್ಯ ಆರಂಭದಿಂದಲೇ ಕುತೂಹಲ ಮೂಡಿಸಿತು. ಕಾರಣ ಉಭಯ ತಂಡಗಳು ಸಮಬಲದ ಹೋರಾಟ ನೀಡಿತು. 5ನೇ ನಿಮಿಷದಲ್ಲಿ 4-4 ಅಂಕಗಳ ಸಮಬಲಗೊಂಡಿದ್ದ ಪಂದ್ಯದಲ್ಲಿ ಮರು ನಿಮಿಷದಲ್ಲಿ ಪವನ್ ಶೆರವಾತ್ ರೈಡ್ ಮೂಲಕ 6-4 ಮುನ್ನಡೆ ಸಾಧಿಸಿತು. ಆದರೆ 10 ನೇ ನಿಮಿಷದಲ್ಲಿ 10-10 ಅಂಕಗಳ ಅಂತರದಲ್ಲಿ ಸಮಬಲ ಮಾಡಿಕೊಂಡಿತು.

ಪಂದ್ಯದ 15ನೇ ನಿಮಿಷದಲ್ಲಿ ಬೆಂಗಳೂರು 10-9 ಅಂಕಗಳಿಂದ ಮುನ್ನಡೆ ಪಡೆದುಕೊಂಡಿತು. ಮೊದಲಾರ್ಧದ ಮುಕ್ತಾಯಕ್ಕೆ ಇನ್ನೊಂದು ನಿಮಿಷ ಬಾಕಿ ಇರುವಗಾಲೇ ಪವನ್ ಶೆರಾವತ್ ಭರ್ಜರಿ ರೈಡ್‌ನಿಂದ ಮುಂಬೈ ಆಲೌಟ್‌ಗೆ ತುತ್ತಾಯಿತು. ಹೀಗಾಗಿ ಬೆಂಗಳೂರು 17-10 ಅಂಕಗಳಿಂದ ಮುನ್ನಡೆ ಪಡೆದುಕೊಂಡಿತು. ಮೊದಲಾರ್ಧದಲ್ಲಿ 17-11 ಅಂತರದಲ್ಲಿ ಅಂತ್ಯಗೊಳಿಸಿತು.

Tap to resize

Latest Videos

ದ್ವಿತಿಯಾರ್ಧದಲ್ಲಿ ಬೆಂಗಳೂರು ಬುಲ್ಸ್ ಅಂತರ ಕಾಯ್ದುಕೊಂಡಿತು. ಆದರೆ ಯು ಮುಂಬಾ ತಿರುಗೇಟು ನೀಡೋ ಪ್ರಯತ್ನ ಮಾಡಿತು. 15ನೇ ನಿಮಿಷದಲ್ಲಿ ಬೆಂಗಳೂರು ಬುಲ್ಸ್ ಆಲೌಟ್‌ಗೆ ಗುರಿಯಾಯಿತು. ಈ ಮೂಲಕ ಯು ಮುಂಬಾ 28-32 ಅಂಕ ಸಂಪಾದಿಸಿತು. ಆದರೆ ಹೆಚ್ಚಿನ ಅಂಕ ಬಿಟ್ಟುಕೊಡದ ಬೆಂಗಳೂರು ಬುಲ್ಸ್, 35-33 ಅಂಕಗಳಿಂದ ಗೆಲುವು ಕಂಡಿತು.
 

click me!