
ಕರಾಚಿ(ಸೆ.27): ಪಾಕಿಸ್ತಾನ ತನ್ನ ನೆಲದಲ್ಲಿ ಕ್ರಿಕೆಟ್ ಸರಣಿ ಆಯೋಜಿಸಲು 10 ವರ್ಷ ತೆಗೆದುಕೊಂಡಿದೆ. ಆದರೆ ಶ್ರೀಲಂಕಾ ಹೊರತು ಪಡಿಸಿದರೆ ಇನ್ಯಾವ ತಂಡ ಕೂಡ ಪಾಕಿಸ್ತಾನ ಪ್ರವಾಸಕ್ಕೆ ಮುಂದೆ ಬಂದಿಲ್ಲ. ಇಷ್ಟಾದರೂ ಪಾಕಿಸ್ತಾನ ಅಭಿಮಾನಿಗಳಲ್ಲಿ ತಾವು ವಿಶ್ವದ ಅತ್ಯುತ್ತಮ ಹಾಗೂ ಶಾಂತಿ ಪ್ರೀಯ ರಾಷ್ಟ ಅನ್ನೋ ಭಾವನೆ ಇದೆ. ಇಷ್ಟೇ ಅಲ್ಲ ಟ್ರೋಲ್ ಮೂಲಕವೇ ವಿಶ್ವ ಆಳುತ್ತೇವೆ ಅನ್ನೋ ಭ್ರಮೆ ಕಡಿಮೆಯಾಗಿಲ್ಲ. ಇದೀಗ ಪಾಕಿಸ್ತಾನ ಹಾಗೂ ಶ್ರೀಲಂಕಾ ಕ್ರಿಕೆಟಿಗರು ಟಿ ಟಾಲೆಂಜ್ ವಿಡಿಯೋ ಮಾಡಿದ್ದಾರೆ. ಆದರೆ ಪಾಕಿಸ್ತಾನ ಅಭಿಮಾನಿಗಳು ಭಾರತದ IAF ಪೈಲೆಟ್ ಅಭಿನಂದನ್ ವರ್ಧಮಾನ್‌ನ್ನು ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ: 10 ವರ್ಷಗಳ ಬಳಿಕ ಟೂರ್ನಿ ಆಯೋಜಿಸಿದ ಪಾಕ್‌ಗೆ ಶಾಕ್: PAKvSL ಪಂದ್ಯ ರದ್ದು!
ಪಾಕಿಸ್ತಾನ ಪ್ರವಾಸ ಮಾಡಿರುವ ನಾವು ಉತ್ತಮ ಪ್ರದರ್ಶನ ನೀಡಲಿದ್ದೇವೆ. ನಮ್ಮ ಪ್ರದರ್ಶನ ಪಾಕ್ ಚಹಾ ರೀತಿಯಲ್ಲಿ ಉತ್ತಮವಾಗರಲಿದೆ ಎಂದು ಶ್ರೀಲಂಕಾ ನಾಯಕ ಲಹೀರು ತಿರಿಮನ್ನೆ ಹೇಳಿದ್ದಾರೆ. ಈ ಚಾಲೆಂಜ್ ಸ್ವೀಕರಿಸಿದ ಪಾಕಿಸ್ತಾನ ವೇಗಿ ವಹಾಬ್ ರಿಯಾಜ್, ಮೈದಾನದಲ್ಲಿ ಮುಖಾಮುಖಿಯಾಗೋಣ, ಟಿ ಚೆನ್ನಾಗಿದೆ ಜೊತೆಗೆ ಬಿಸ್ಕರ್ ಇರಬೇಕು ಎಂದಿದ್ದಾರೆ. \
ಇದನ್ನೂ ಓದಿ: ಕಾಶ್ಮೀರಕ್ಕಾಗಿ ಸೇನಾ ಕ್ಯಾಪ್ ಧರಿಸಿಸುತ್ತಾ ಪಾಕ್ ತಂಡ? ಕೋಚ್ ಮಿಸ್ಬಾ ನೀಡಿದ್ರು ಉತ್ತರ!
ಈ ವೀಡಿಯೋ ಮೂಲಕ ಭಾರತದ ಪೈಲೆಟ್ ಅಭಿನಂದನ್ ವರ್ಧಮಾನ್‌ಗೆ ಟಾಂಗ್ ನೀಡಲಾಗಿದೆ ಎಂದು ಪಾಕಿಸ್ತಾನ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಲಹೀರು ತಿರಿಮನ್ನೆ ಹಾಗೂ ವಹಾಬ್ ರಿಯಾಜ್ ವಿಡಿಯೋ ಮೂಲಕ ಭಾರತಕ್ಕೆ ಸರಿಯಾದ ತಿರುಗೇಟು ನೀಡಿದ್ದಾರೆ ಎಂದು ಪಾಕಿಸ್ತಾನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
2019ರ ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ದಾಳಿಯಿಂದ ಭಾರತ ಬಾಲಾಕೋಟ್ ಮೇಲೆ ಏರ್‌ಸ್ಟ್ರೈಕ್ ಮಾಡಿತ್ತು. ಬಳಿಕ ಉಭಯ ದೇಶಗಳ ನಡುವೆ ಗಡಿ ರೇಖೆಯಲ್ಲಿ ಯುದ್ದವೇ ನಿರ್ಮಾಣವಾಗಿತ್ತು. ಭಾರತದ ಮೇಲೆ ದಾಳಿ ಮಾಡಲು ಬಂದು ಪಾಕ್ ವಿಮಾನ ಹಿಮ್ಮೆಟ್ಟಿಸುವ ವೇಳೆ ಭಾರತದ ಮಿಗ್-21 ಪತನವಾಗಿತ್ತು. ಪೈಲೆಟ್ ಅಭಿನಂದನ್ ಪಾಕಿಸ್ತಾನದಲ್ಲಿ ಸೆರೆಯಾಗಿದ್ದರು. ಬಳಿಕ ವಿಡಿಯೋದಲ್ಲಿ ಅಭಿನಂದನ್, ತಾನು ಪಾಕಿಸ್ತಾನ ಸೇನಾ ವಶದಲ್ಲಿದ್ದು, ಸುರಕ್ಷಿತವಾಗಿದ್ದೇನೆ. ಚಹಾ ಕುಡಿಯುತ್ತಿದ್ದೇನೆ. ಚಹಾ ಉತ್ತಮವಾಗಿದೆ ಎಂದಿದ್ದರು.
ಇದನ್ನೂ ಓದಿ: ಪೈಲೆಟ್ ಅಭಿನಂದನ್ ಬಳಸಿ ಪಾಕಿಸ್ತಾನ ಚೀಪ್ ಗಿಮಿಕ್ - ವಿಶ್ವಕಪ್ ಫ್ಯಾನ್ಸ್ ಗರಂ!
ಪಾಕಿಸ್ತಾನಿಯರು ಅಭಿನಂದನ್ ಸೆರೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರತವನ್ನು ಕುಟುಕಿದ್ದರು. ಬಳಿಕ ವಿಶ್ವಕಪ್ ಟೂರ್ನಿ ವೇಳೆ ಇಂಡೋ-ಪಾಕ್ ಕ್ರಿಕೆಟ್ ಪಂದ್ಯಕ್ಕೂ ಅಭಿನಂದನ್ ಕುರಿತ ಜಾಹೀರಾತು ಮಾಡಿ ಟೀಕೆಗೆ ಗುರಿಯಾಗಿತ್ತು. ಇದೀಗ ಮತ್ತೆ ಅಭಿನಂದನ್ ಎಳೆದು ತಂದು ಆನಂದ ಪಡುತ್ತಿದ್ದಾರೆ.
ಇದನ್ನೂ ಓದಿ: ಪಾಕ್ ಅಭಿಮಾನಿಗೆ ಅಭಿನಂದನ್ ಮೀಸೆ: #UltimatePunch
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.