
ಜೊಹಾನ್ಸ್'ಬರ್ಗ್(ಫೆ.10): 2011ರಿಂದ ದ.ಆಫ್ರಿಕಾ ತವರಿನ ಋತುವಿನಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಹಾಗೂ ಸಂತ್ರಸ್ತರ ನೆರವಿಗಾಗಿ ‘ಪಿಂಕ್ ಒನ್‌ಡೇ’ಯನ್ನು ನಡೆಸುತ್ತಿದೆ. ಇಂದಿನ ಪಂದ್ಯದಲ್ಲಿ ಆಫ್ರಿಕಾ ಆಟಗಾರರು ಗುಲಾಬಿ ಬಣ್ಣದ ಉಡುಗೆ ತೊಟ್ಟು ಆಡಲಿದ್ದಾರೆ.
ವಿಶೇಷ ಎಂದರೆ ಪಿಂಕ್ ಒನ್‌ಡೇ ಆಡಿದಾಗಲೆಲ್ಲಾ ದ.ಆಫ್ರಿಕಾ ಗೆಲುವು ಸಾಧಿಸಿದೆ. ಇದುವರೆಗೆ 6 ಪಿಂಕ್ ಒನ್'ಡೇ ಪಂದ್ಯಗಳನ್ನಾಡಿರುವ ದಕ್ಷಿಣ ಆಫ್ರಿಕಾ ಆರು ಪಂದ್ಯಗಳಲ್ಲೂ ಜಯದ ಸಿಹಿಯುಂಡಿದೆ. ಇದೀಗ ಭಾರತ ವಿರುದ್ಧದ ಸರಣೀಯಲ್ಲಿ 3-0 ಹಿನ್ನಡೆ ಅನುಭವಿಸಿ ಒತ್ತಡದಲ್ಲಿರು ಆಫ್ರಿಕಾ ಪುಟಿದೇಳುವುದೇ ಎನ್ನುವುದನ್ನು ಕಾದು ನೋಡಬೇಕಿದೆ.
ಇನ್ನು ಪಿಂಕ್ ಒನ್'ಡೇ ಪಂದ್ಯಗಳಲ್ಲಿ ಎಬಿ ಡಿವಿಲಿಯರ್ಸ್'ರಿಂದ ವಿಸ್ಫೋಟಕ ಆಟ ಮೂಡಿಬಂದಿದೆ. 2015ರಲ್ಲಿ ವಿಂಡೀಸ್ ವಿರುದ್ಧ ಕೇವಲ 44 ಎಸೆತಗಳಲ್ಲಿ 149 ರನ್ ಚಚ್ಚಿದ್ದ ವಿಲಿಯರ್ಸ್, 2013ರಲ್ಲಿ ಭಾರತ ವಿರುದ್ಧ ಪಿಂಕ್ ಒನ್ ಡೇಯಲ್ಲಿ 47 ಎಸೆತಗಳಲ್ಲಿ 77 ರನ್ ಗಳಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.