
ಚಾಂಪಿಯನ್ಸ್ ಟ್ರೋಫಿಯ ಫನಲ್ ಮುಗಿದು ವಿನ್ನರ್ಸ್ ಟ್ರೋಫಿಯನ್ನು ತಮ್ಮ ದೇಶಕ್ಕೆ ಕೊಂಡೊಯ್ದೂ ಆಗಿದೆ. ಆದರೆ ಜನರು ಮಾತ್ರ ಈ ಗುಂಗಿನಿಂದ ಇನ್ನೂ ಹೊರ ಬಂದಿಲ್ಲ, ಸಾಮಾಜಿಕ ಜಾಲಾತಾಣಗಳೂ ಈ ನೆನಪನ್ನು ಮರೆಯಲು ಬಿಡುತ್ತಿಲ್ಲ. ಆದರೆ ಹಿಂದಿನ ಬಾರಿಗೆ ಹೋಲಿಸಿದರೆ ಈ ಬಾರಿ ಎರಡೂ ದೇಶದ ಆಟಗಾರರ ನಡುವೆ ಉತ್ತಮ ಸಂಬಂಧ ಬೆಸೆದುಕೊಂಡಿರುವುದು ಸಾಮಾಜಿಕ ಜಾಲಾತಾಣಗಳಲ್ಲಿ ಹೆಚ್ಚು ಕಂಡು ಬಂದಿದೆ. ಆಟಗಾರರು ತಮ್ಮ ಕ್ರೀಡಾ ಮನೋಭಾವದಿಂದ ಆಟ ಯಾವತ್ತಿದ್ದರೂ ಗಡಿ ವಿಚಾರಕ್ಕೆ ಸೀಮಿತವಲ್ಲ ಎಂಬುವುದನ್ನು ಸಾಬೀತುಪಡಿಸಿದ್ದಾರೆ.
ಇದೀಗ ಪಾಕ್ ತಂಡದ ಓಪನರ್ ಅಜರ್ ಅಲಿ ಮಾಡಿರುವ ಒಂದು ಟ್ವೀಟ್ ಇಂತಹುದೇ ಮನೋಭಾವ ಮತ್ತೆ ಹುಟ್ಟಿಸುವಂತೆ ಮಾಡಿದೆ. ಇವರ ಈ ಟ್ವೀಟ್ ಭಾರತೀಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ತಮ್ಮ ಟ್ವೀಟ್'ನಲ್ಲಿ ತನ್ನ ಮಕ್ಕಳ ಫೋಟೋ ಶೇರ್ ಮಾಡಿಕೊಂಡಿರುವ ಅಜರ್ ಅಲಿ 'ನನ್ನ ಮಕ್ಕಳಿಗಾಗಿ ಸಮಯ ಕೊಟ್ಟ ಈ ಕ್ರಿಕೆಟ್ ದಿಗ್ಗಜರಿಗೆ ನನ್ನ ಧನ್ಯವಾದಗಳು' ಎಂದು ಧೋನಿ, ವಿರಾಟ್ ಹಾಗೂ ಯುವಿಗೆ ಧನ್ಯವಾದ ಹೇಳಿದ್ದಾರೆ. ಅಜರ್ ಮಾಡಿರುವ ಈ ಟ್ವೀಟ್'ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಟ್ವೀಟ್ ಬಾಲಿವುಡ್'ನ ಖ್ಯಾತ ಸಿನಿಮಾ ನಿರ್ದೇಶಕ ಮಹೇಶ್ ಭಟ್ ಅವರ ಮನಗೆಲ್ಲುವಲ್ಲಿಯೂ ಯಶಸ್ವಿಯಾಗಿದೆ. ಈ ಟ್ವೀಟ್'ಗೆ ಪ್ರತಿಕ್ರಿಯಿಸಿರುವ ಅವರು 'ಮಾನವೀಯತೆ ಮರುಕಳಿಸಿದೆ! ಜಗತ್ತು ನಮ್ಮ ಕ್ರಿಯೆಗಳಿಂದ ಬದಲಾಗುತ್ತದೆ. ನಮ್ಮ ಯೋಚನೆರಗಳಿಂದಲ್ಲ' ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಅಜರ್ ಕೂಡಾ ಪ್ರತಿಕ್ರಿಯಿಸಿದ್ದು ಇವರ ಮೇಲೆ ನನಗೆ ಅಪಾರ ಅಭಿಮಾನವಿದೆ ಎಂದಿದ್ದಾರೆ.
ಹಲವರು ಧೋನಿ, ಕೊಹ್ಲಿ ಹಾಗೂ ಯುವಿಯನ್ನು ಕ್ರಿಕೆಟ್ ದಿಗ್ಗಜರು ಎಂದು ಸಂಭೋದಿಸಿದ್ದರಿಂದ ಅಜರ್'ಗೆ ಧನ್ಯವಾದ ತಿಳಿಸಿದ್ದಾರೆ.
ಇನ್ನು ಕೆಲವರು ಕ್ರಿಕೆಟ್'ನ ಮಹಿಮೆಯೇ ಅಂತಹುದು, ಇದನ್ನೇ ಮಾನವೀಯತೆ ಎನ್ನುವುದು ಎಂದಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಇಂತಹುದೇ ಮನೋಭಾವ ಹುಟ್ಟಿಸುವಂತಹ 'ಧೋನಿ ಪಾಕ್ ಕ್ರಿಕೆಟರ್ ಸರ್ಫರಾಜ್ ಮಗನನ್ನು ಎತ್ತಿಕೊಂಡಿದ್ದ ಫೋಟೋ' ಒಂದು ವೈರಲ್ ಆಗಿತ್ತು. ಇದು ಇಂಡೋ ಪಾಕ್ ಅಭಿಮಾನಿಗಳ ಹೃದಯಗೆದ್ದಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.