ಕರ್ನಾಟಕ ಕ್ರಿಕೆಟ್'ಗೆ ಉತ್ತಪ್ಪ ಗುಡ್'ಬೈ: ಕೇರಳ ಕ್ರಿಕೆಟ್'ನತ್ತ ಮುಖ

Published : Jun 21, 2017, 09:52 AM ISTUpdated : Apr 11, 2018, 01:12 PM IST
ಕರ್ನಾಟಕ ಕ್ರಿಕೆಟ್'ಗೆ ಉತ್ತಪ್ಪ ಗುಡ್'ಬೈ: ಕೇರಳ ಕ್ರಿಕೆಟ್'ನತ್ತ ಮುಖ

ಸಾರಾಂಶ

ರಾಬಿನ್‌ ಉತ್ತಪ್ಪ ಅವರನ್ನು ಉಳಿಸಿಕೊಳ್ಳುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಸಕಲ ಪ್ರಯತ್ನಗಳು ವಿಫಲಗೊಂಡಿದೆ. ಉತ್ತಪ್ಪ ಅವರ ಮನವಿಗೆ ಮಣಿದ ರಾಜ್ಯ ಕ್ರಿಕೆಟ್‌ ಸಂಸ್ಥೆ ಅವರಿಗೆ ನಿರಾಕ್ಷೇಪಣ ಪತ್ರವನ್ನು ನೀಡಿದ್ದು, 2017-18ರ ದೇಸಿ ಋುತುವಿನಲ್ಲಿ ಉತ್ತಪ್ಪ, ಕರ್ನಾಟಕದ ಬದಲು ಬೇರೆ ತಂಡದ ಪರ ಆಡಲಿದ್ದಾರೆ.

ಬೆಂಗಳೂರು(ಜೂ.21): ರಾಬಿನ್‌ ಉತ್ತಪ್ಪ ಅವರನ್ನು ಉಳಿಸಿಕೊಳ್ಳುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಸಕಲ ಪ್ರಯತ್ನಗಳು ವಿಫಲಗೊಂಡಿದೆ. ಉತ್ತಪ್ಪ ಅವರ ಮನವಿಗೆ ಮಣಿದ ರಾಜ್ಯ ಕ್ರಿಕೆಟ್‌ ಸಂಸ್ಥೆ ಅವರಿಗೆ ನಿರಾಕ್ಷೇಪಣ ಪತ್ರವನ್ನು ನೀಡಿದ್ದು, 2017-18ರ ದೇಸಿ ಋುತುವಿನಲ್ಲಿ ಉತ್ತಪ್ಪ, ಕರ್ನಾಟಕದ ಬದಲು ಬೇರೆ ತಂಡದ ಪರ ಆಡಲಿದ್ದಾರೆ. ಮೂಲಗಳ ಪ್ರಕಾರ ಉತ್ತಪ್ಪ ಕೇರಳ ತಂಡದ ಪರ ಆಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೇರಳ ಕ್ರಿಕೆಟ್‌ ಸಂಸ್ಥೆ ಸಹ ‘ಏಷ್ಯಾನೆಟ್‌'ಗೆ ಕಳೆದ ತಿಂಗಳು ಸ್ಪಷ್ಟಪಡಿಸಿತ್ತು.

2002ರಲ್ಲಿ ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದ 17 ವಯಸ್ಸಿನ ಉತ್ತಪ್ಪ, ರಾಜ್ಯ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆದರೆ 2016-17ರ ರಣಜಿ ಋುತುವಿನಲ್ಲಿ ಉತ್ತಪ್ಪಗೆ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಉತ್ತಪ್ಪ ರಾಜ್ಯ ಕ್ರಿಕೆಟ್‌ ತೊರೆದಿರುವ ಕುರಿತು ಕೆಎಸ್‌ಸಿಎ ಹಂಗಾಮಿ ಕಾರ್ಯದರ್ಶಿ ಸುಧಾಕರ್‌ ರಾವ್‌ ‘ಕನ್ನಡಪ್ರಭ'ದೊಂದಿಗೆ ಮಾತನಾಡಿ ‘ನಾನು ಉತ್ತಪ್ಪ ಅವರೊಂದಿಗೆ 2 ಬಾರಿ ದೀರ್ಘ ಸಮಾಲೋಚನೆ ನಡೆಸಿದೆ. ಅವರನ್ನು ಉಳಿಸಿಕೊಳ್ಳುವ ಸಕಲ ಪ್ರಯತ್ನ ನಡೆಸಿದೆವು. ಆದರೆ ರಾಜ್ಯ ತಂಡ ತೊರೆಯಲು ಅವರಿಗೆ ಅವರದ್ದೇ ಆದ ಕಾರಣಗಳಿವೆ. ಮೂರ್ನಾಲ್ಕು ತಂಡಗಳು ತಮ್ಮನ್ನು ಸಂಪರ್ಕಿಸಿರುವುದಾಗಿ ರಾಬಿನ್‌ ಹೇಳಿದರು. ನಿರಾಕ್ಷೇಪಣ ಪತ್ರ ನೀಡುವಂತೆ ಅವರು ಮನವಿ ಮಾಡಿದ ಬಳಿಕ ನಮಗೆ ಬೇರೆ ದಾರಿ ಇರಲಿಲ್ಲ. ಕರ್ನಾಟಕ ಕ್ರಿಕೆಟ್‌ಗೆ ಅವರ ಕೊಡುಗೆ ಅಪಾರ. ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ' ಎಂದರು.

ಈ ಬಗ್ಗೆ ‘ಕನ್ನಡಪ್ರಭ' ಉತ್ತಪ್ಪ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರ ದೂರವಾಣಿ ಚಾಲ್ತಿಯಲ್ಲಿರಲಿಲ್ಲ. ಮೂಲಗಳ ಪ್ರಕಾರ ಅವರು ವಿದೇಶ ಪ್ರವಾಸ ಹೋಗಿರುವುದಾಗಿ ತಿಳಿದುಬಂದಿದೆ. ಉತ್ತಪ್ಪ, ಕೇರಳ ತಂಡ ಸೇರುವುದು ಖಚಿತವಾಗಿದೆಯಾದರೂ ಅಧಿಕೃತವಾಗಿ ಅವರಿನ್ನೂ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಪ್ರವಾಸ ಮುಗಿಸಿ ಬಂದ ನಂತರ ಉತ್ತಪ್ಪ ಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. 2009-10ರ ಋುತುವಿನಲ್ಲಿ ಉತ್ತಪ್ಪ ಕರ್ನಾಟಕ ರಣಜಿ ತಂಡವನ್ನು ಮುನ್ನಡೆಸಿದ್ದರು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ICC Men’s T20 World Cup: ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ಅಚ್ಚರಿಯ ಆಯ್ಕೆ, ಗಿಲ್‌ಗಿಲ್ಲ ಸ್ಥಾನ
ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ