ಪಾಕ್ ಕ್ರಿಕೆಟಿಗನ ದಾಖಲೆ ಮುರಿದ ಆರ್. ಅಶ್ವಿನ್​

By Internet DeskFirst Published Sep 26, 2016, 5:45 AM IST
Highlights

ಕಾನ್ಪುರ(ಸೆ.26): ಕಾನ್ಪುರದಲ್ಲಿ ನಡೆಯುತ್ತಿರುವ ಐತಿಹಾಸಿಕ #500Test ಟೆಸ್ಟ್​ನಲ್ಲಿ ಆಫ್​ ಸ್ಪಿನ್ನರ್​ ರವಿಚಂದ್ರನ್​ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅತಿ ಕಡಿಮೆ ಪಂದ್ಯದಲ್ಲಿ 200 ವಿಕೆಟ್​ ಪಡೆದ ಭಾರತದ ಮೊದಲ ಕ್ರಿಕೆಟರ್​ ಎಂಬ ಶ್ರೇಯಸ್ಸಿಗೆ ಪಾತ್ರರಾದರು. 

ವಿಶ್ವದಲ್ಲೇ ಅತ್ಯಂತ ಕಡಿಮೆ ಪಂದ್ಯದಲ್ಲಿ 200 ವಿಕೆಟ್​ ಪಡೆದ ಎರಡನೇ ಆಟಗಾರನೆಂಬ ಹಿರಿಮೆಗೆ ಅಶ್ವಿನ್​ ಭಾಜನರಾದರು, ನ್ಯೂಜಿಲೆಂಡ್​ ವಿರುದ್ಧದ ಎರಡನೇ ಇನ್ನಿಂಗ್ಸ್​ನಲ್ಲಿ ರವಿಂಚದ್ರನ್​  ಅಶ್ವಿನ್ ಭರ್ಜರಿ ಆರಂಭ ಮಾಡಿದರು. ಪ್ರಮುಖ ಮೂರು ವಿಕೆಟ್​ ಪಡೆಯುವ ಮೂಲಕ ನ್ಯೂಜಿಲೆಂಡ್​ ತಂಡಕ್ಕೆ ಆರಂಭಿಕ ಆಘಾತ ನೀಡಿದರು. 

Latest Videos

ಅಶ್ವಿನ್ 200 ವಿಕೆಟ್​ ಸಾಧನೆ: 
ನ್ಯೂಜಿಲೆಂಡ್​ ನಾಯಕ ಕೇನ್​ ವಿಲಿಯಮ್ಸನ್​ ವಿಕೆಟ್​ ಪಡೆಯುತ್ತಿದ್ದಂತೆ ರವಿಚಂದ್ರನ್​ ಅಶ್ವಿನ್ ಹೊಸದೊಂದು ದಾಖಲೆಗೆ ಪಾತ್ರರಾದರು.  ಭಾರತದ ಪರ ಹಾಗೂ ಏಷ್ಯಾದಲ್ಲಿ ವೇಗವಾಗಿ  200 ವಿಕೆಟ್​​​ ಪಡೆದ ಸಾಧನೆ ಮಾಡಿದರು. 

ವಾಖರ್ ದಾಖಲೆ ಮುರಿದ ಅಶ್ವಿನ್ : 37 ಟೆಸ್ಟ್​ನಲ್ಲಿ ಅಶ್ವಿನ್​ಗೆ 200 ವಿಕೆಟ್​
ವೈಯಕ್ತಿಕ 37ನೇ ಟೆಸ್ಟ್​​ ಆಡುತ್ತಿರುವ ಅಶ್ವಿನ್​, ನ್ಯೂಜಿಲೆಂಡ್​ ವಿರುದ್ಧದ ಮೊದಲ ಇನ್ನಿಂಗ್ಸ್​​ನಲ್ಲಿ 4 ವಿಕೆಟ್​​ ಉರುಳಿಸಿದರು. ಇನ್ನು 2ನೇ ಇನ್ನಿಂಗ್ಸ್​​ನಲ್ಲಿ ಮೊದಲ 3 ವಿಕೆಟ್​​​ ಪಡೆಯುತ್ತಿದ್ದಾಗೆಯೇ ಅಶ್ವಿನ್​​ ಈ ಸಾಧನೆ ಮಾಡಿದರು. ಏಷ್ಯಾ ಬೌಲರ್​​ಗಳ ಪೈಕಿ ವಾಖರ್​​ ಯೂನಿಸ್​​ 38 ಟೆಸ್ಟ್​​​ಗಳಲ್ಲಿ 200 ವಿಕೆಟ್​​ ಸಾಧನೆ ಮಾಡಿದಿದ್ದು ಈ ವರೆಗಿನ ದಾಖಲೆಯಾಗಿತ್ತು.
 
ಆಸ್ಟ್ರೇಲಿಯಾದ ಕ್ಲಾರಿ ಗ್ರಿಮ್ಮೆಟ್​ 36 ಟೆಸ್ಟ್​ನಲ್ಲಿ 200 ವಿಕೆಟ್​ ಪಡೆಯುವ ಮೂಲಕ ಅತಿ ಕಡಿಮೆ ಪಂದ್ಯದಲ್ಲಿ ಗರಿಷ್ಟ ವಿಕೆಟ್​ ಸಾಧನೆ ಮಾಡಿದ್ದಾರೆ. ಆದರೆ ರವಿಚಂದ್ರನ್​ ಅಶ್ವಿನ್​ ಈ ಸಾಧನೆ ಮಾಡಲು 37 ಪಂದ್ಯ ತೆಗೆದುಕೊಂಡ್ರು.  ಹಾಗಾಗಿ ಟೆಸ್ಟ್​ನಲ್ಲಿ ಅತ್ಯಂತ ವೇಗವಾಗಿ 200 ವಿಕೆಟ್​ ಪಡೆದ ಸಾಧನೆ ಮಾಡಿದರು. 

37 ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್​ ಅಶ್ವಿನ್​ 25.13ರ ಸರಾಸರಿಯಲ್ಲಿ 200 ವಿಕೆಟ್​ ಪಡೆದಿದ್ದಾರೆ. 66 ರನ್​ ನೀಡಿರುವುದು ಅವರ ಬೆಸ್ಟ್ ಬೌಲಿಂಗ್​ ಆಗಿದೆ. ಟೆಸ್ಟ್ ಇನ್ನಿಂಗ್ಸ್​ವೊಂದರಲ್ಲಿ 18 ಸಲ ಐದು ವಿಕೆಟ್​ ಹಾಗೂ ಟೆಸ್ಟ್​ ಪಂದ್ಯವೊಂದರಲ್ಲಿ ನಾಲ್ಕು ಸಲ 10 ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ. 

ತವರಿನಲ್ಲಿ ಅತ್ಯಂತ ಮಾರಕವಾಗಿ ಬೌಲಿಂಗ್ ಮಾಡುವ ಅಶ್ವಿನ್​ ಅತ್ಯಂತ ಯಶಸ್ವಿ ಆಲ್​ರೌಂಡರ್​​ ಕೂಡ ಹೌದು. ತವರಿನಲ್ಲಿ  ಸಮರೋಪಾದಿಯಲ್ಲಿ  ಭಾರತ ಟೆಸ್ಟ್ ಸರಣಿಗಳನ್ನು ಆಡಲಿದೆ. ಭಾರತದಲ್ಲಿ ಇನ್ನೂ 12 ಟೆಸ್ಟ್ ಆಡಬೇಕಿರುವ ಅಶ್ವಿನ್​ ಹಲವು ದಾಖಲೆಗಳನ್ನು ಬರೆಯುವ, ಪುಡಿ-ಪುಡಿ ಮಾಡುವ ವಿಶ್ವಾಸದಲ್ಲಿದ್ದಾರೆ. ಹಾಗಾಗಿ ಅಶ್ವಿನ್​ ಅತ್ಯಂತ ಕಡಿಮೆ ಪಂದ್ಯದಲ್ಲಿ 300 ವಿಕೆಟ್​ ಪಡೆದ ಸಾಧನೆ ಮಾಡುವುದರ ಜೊತೆಗೆ ಹಲವು ದಾಖಲೆಗಳನ್ನು ಬರೆಯುವ ಆತುರದಲ್ಲಿದ್ದಾರೆ.

click me!