ಪಾಕಿಸ್ತಾನ ವಿರುದ್ಧ ಸೋಲಿನಿಂದ ಪಾರಾದ ಆಸ್ಟ್ರೇಲಿಯಾ!

By Web DeskFirst Published Oct 12, 2018, 10:48 AM IST
Highlights

ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಅಂತಿಮ ದಿನ ರೋಚಕ ಘಟ್ಟ ತಲುಪಿತ್ತು. ಉಭಯ ತಂಡಗಳು ಗೆಲುವಿಗಾಗಿ ಹೋರಾಟ ಮಾಡಿತು. ಆದರೆ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಇಲ್ಲಿದೆ ಹೈಲೈಟ್ಸ್.

ದುಬೈ(ಅ.12): ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನ ಡ್ರಾ ಮಾಡಿಕೊಳ್ಳುವಲ್ಲಿ ಆಸ್ಟ್ರೇಲಿಯಾ ಯಶಸ್ವಿಯಾಗಿದೆ.  ಉಸ್ಮಾನ್‌ ಖವಾಜ (141) ಹೋರಾಟದ ಶತಕ ನೆರವಿನಿಂದ ಆಸ್ಪ್ರೇಲಿಯಾ, ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಸೋಲಿನಿಂದ ಪಾರಾಗಿದೆ.

 

Usman Khawaja's Dubai epic joins some of the most iconic and memorable Aussie Test hundreds in the 21st century https://t.co/gFyGhyEc1m

— cricket.com.au (@cricketcomau)

 

ಪಂದ್ಯದ ಅಂತಿಮ ದಿನ ಸೋಲಿನಂಚಿನಲ್ಲಿದ್ದ ಆಸ್ಪ್ರೇಲಿಯಾಕ್ಕೆ ಖವಾಜ, ಟ್ರಾವಿಸ್‌ ಹೆಡ್‌ ಮತ್ತು ನಾಯಕ ಟಿಮ್‌ ಪೈನ್‌ ಆಸರೆಯಾದರು. ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 482 ಹಾಗೂ 2ನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 181 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. 

ಮೊದಲ ಇನ್ನಿಂಗ್ಸ್‌ನಲ್ಲಿ 202 ರನ್‌ಗೆ ಆಲೌಟ್‌ ಆಗಿದ್ದ ಆಸ್ಪ್ರೇಲಿಯಾ, 2ನೇ ಇನ್ನಿಂಗ್ಸ್‌ನಲ್ಲಿ 462 ರನ್‌ ಗುರಿ ಪಡೆದಿತ್ತು. ಆಸ್ಪ್ರೇಲಿಯಾ 8 ವಿಕೆಟ್‌ ನಷ್ಟಕ್ಕೆ 362 ರನ್‌ ಗಳಿಸಿತು. 

ಸ್ಕೋರ್‌ ವಿವರ: ಪಾಕಿಸ್ತಾನ 482, 181/6 ಡಿ. , ಆಸ್ಪ್ರೇಲಿಯಾ 202, 362/8

click me!