ಪಾಕಿಸ್ತಾನಕ್ಕೆ ಮತ್ತೊಂದು ಶಾಕ್- PSL ಟೂರ್ನಿಯಿಂದ ಡಿವಿಲಿಯರ್ಸ್ ವಾಪಾಸ್!

By Web DeskFirst Published Mar 4, 2019, 3:38 PM IST
Highlights

ಪುಲ್ವಾಮಾ ದಾಳಿಯಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದೆ. ಒಂದೆಡೆ ಭಾರತೀಯ ಸೇನೆ ತಕ್ಕ ತಿರುಗೇಟು ನೀಡುತ್ತಿದ್ದರೆ, ಇತ್ತ ಕೇಂದ್ರ ಸರ್ಕಾರ ಪಾಕಿಸ್ತಾನ ಜೊತೆಗಿನ ಎಲ್ಲಾ ವ್ಯವಹಾರ ಸ್ಥಗಿತಗೊಳಿಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಗೂ ಹೊಡೆತ ಬಿದ್ದಿದೆ. ಎಬಿಡಿ ಇದೀಗ ಮನೆಯತ್ತ ಮುಖಮಾಡಿದ್ದಾರೆ.  

ಕರಾಚಿ(ಮಾ.04): ದುಬೈನಲ್ಲಿ ಆಯೋಜಿಸಲಾಗಿದೆ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ ಮೊದಲ ಹಂತದ ಪಂದ್ಯಗಳು ಮುಕ್ತಾಯಗೊಂಡಿದೆ. ಇದೀಗ ಟೂರ್ನಿ ಪಾಕಿಸ್ತಾನದಲ್ಲಿ ನಡೆಯುತ್ತಿದೆ. ಪುಲ್ವಾಮಾ ದಾಳಿ ಬಳಿಕ ಲಾಹೋರ್‌ನಲ್ಲಿ ಆಯೋಜಿಸಲಾದ ಪಂದ್ಯಗಳು ಇದೀಗ ಕರಾಚಿಗೆ ಸ್ಥಳಾಂತರವಾಗಿದೆ. ಇದರ ಬೆನ್ನಲ್ಲೇ PSL ಟೂರ್ನಿಗೆ ಮತ್ತೊಂದು ಶಾಕ್ ಎದುರಾಗಿದೆ.

ಇದನ್ನೂ ಓದಿ: ವೈರಲ್ ಆಯ್ತು ಎಬಿ ಡಿವಿಲಿಯರ್ಸ್ ಸ್ವಿಚ್ ಹಿಟ್ ಸಿಕ್ಸ್!

ಲಾಹೋರ್ ಕ್ವಾಲಂಡರ್ಸ್ ತಂಡದ ಸ್ಟಾರ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಇಂಜುರಿ ಸಮಸ್ಯೆಯಿಂದ PSL ಟೂರ್ನಿ ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ವಾಪಾಸಾಗಿದ್ದಾರೆ. ಬೆನ್ನು ನೋವಿಗೆ ತುತ್ತಾಗಿರುವ ಎಬಿ ಡಿವಿಯರ್ಸ್‌ಗೆ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಎಡಿಬಿ ತವರಿಗೆ ವಾಪಾಸ್ ಆಗಿದ್ದಾರೆ.

ಇದನ್ನೂ ಓದಿ: ಲಕ್ಕಿ ಬ್ಯಾಟ್’ಗೆ ಧೋನಿ ಗುಡ್’ಬೈ..! ಭಾರತೀಯ ಬ್ಯಾಟ್’ಗೆ ಜೈ..!

ವಿದೇಶಿ ಆಟಗಾರರು ಹಾಗೂ ಸ್ಟಾರ್ ಆಟಗಾರರ ಕೊರತೆಯಿಂದ PSL ಟೂರ್ನಿ ಹಲವು ಸಮಸ್ಯೆ ಎದುರಿಸುತ್ತಿದೆ. ಇಷ್ಟೇ ಅಲ್ಲ ಪುಲ್ವಾಮಾ ದಾಳಿ ಬಳಿಕ ಟೂರ್ನಿ ಪ್ರಸಾರದಿಂದ IMG ರಿಲಾಯನ್ಸ್ ಹಿಂದೆ ಸರಿದಿತ್ತು. ಭಾರತದಲ್ಲೂ PSL ಟೂರ್ನಿಯನ್ನ ನಿರ್ಬಂಧಿಸಲಾಗಿದೆ. ಇದೀಗ ಎಬಿ ಡಿವಿಲಿಯರ್ಸ್ ಅಲಭ್ಯತೆ ಟೂರ್ನಿ ಮೇಲೆ ಪರಿಣಾಮ ಬೀರಲಿದೆ.

click me!