
ನವದೆಹಲಿ: ಭಯೋತ್ಪಾದನಾ ಚುಟವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ ವಿರುದ್ಧದ ವಾಗ್ದಾಳಿಯನ್ನು ಸುಪ್ರೀಂಕೋರ್ಟ್ ನೇಮಿತ ಬಿಸಿಸಿಐನ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಮುಂದುವರೆಸಿದ್ದು, ಪಾಕಿಸ್ತಾನಕ್ಕೆ ಕ್ರೀಡಾ ಜಗತ್ತಿನಿಂದಲೇ ಬಹಿಷ್ಕಾರ ಹಾಕಬೇಕೆಂದು ಆಗ್ರಹಿಸಿದ್ದಾರೆ.
ಆಟಗಾರರ ಸುರಕ್ಷತೆಯೇ ಮೊದಲ ಆದ್ಯತೆ: ಐಸಿಸಿ
ವರ್ಣಭೇದ ನೀತಿ ಅನುಸರಿಸಿದ ಕಾರಣ ಯಾವ ರೀತಿ ದಕ್ಷಿಣ ಆಫ್ರಿಕಾವನ್ನು ಬಹಿಷ್ಕರಿಸಲಾಗಿತ್ತೋ ಅದೇ ರೀತಿ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆನ್ನೆಲುಬಾಗಿರುವ ಪಾಕಿಸ್ತಾನವನ್ನು ಬಹಿಷ್ಕರಿಸಬೇಕೆಂದು ವಿನೋದ್ ರಾಯ್ ಒತ್ತಾಯಿಸಿದ್ದಾರೆ. ಕೇವಲ ಒಂದು ಅಥವಾ ಎರಡು ಪಂದ್ಯಗಳನ್ನು ಬಹಿಷ್ಕರಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಈ ರೀತಿಯ ಭಯೋತ್ಪಾದನ ಕೃತ್ಯಗಳಿಗೆ ಬೆಂಬಲ
ನೀಡುವ ರಾಷ್ಟ್ರಗಳನ್ನು ಶಾಶತ್ವವಾಗಿ ಕ್ರೀಡಾ ಚಟುವಟಿಕೆಗಳಿಂದ ಸಂಪೂರ್ಣವಾಗಿ ದೂರವಿರಿಸಬೇಕು. ಇದೇ ನಮ್ಮ ಉದ್ದೇಶವಾಗಿದೆ. ಇದಕ್ಕೆ ಇತರೆ ರಾಷ್ಟ್ರಗಳು ತಮ್ಮ ಬೆಂಬಲ ಸೂಚಿಸುವ ಮೂಲಕ ದುಷ್ಟರಿಗೆ ಪಾಠ ಕಲಿಸಲು ಮುಂದಾಗಬೇಕೆಂದು ರಾಯ್ ಒತ್ತಾಯಿಸಿದ್ದಾರೆ.
ವಿಶ್ವಕಪ್ 2019: ಬದ್ಧವೈರಿ ಪಾಕ್‌ಗೆ 2 ಅಂಕ ನೀಡಲು ಇಷ್ಟಪಡೋದಿಲ್ಲ - ಸಚಿನ್
‘ವರ್ಣಭೇದ ನೀತಿ ಅನುಸರಿಸಿದ ಕಾರಣ 1970ರಿಂದ 1991ರವರೆಗೂ ದಕ್ಷಿಣ ಆಫ್ರಿಕಾವನ್ನು ಕ್ರೀಡಾ ಚಟುವಟಿಕೆಗಳಿಂದ ಬಹಿಷ್ಕರಿಸಲಾಗಿತ್ತು. ಪಾಕ್ ವಿಚಾರದಲ್ಲೂ ಇದೇ ಮಾದರಿಯಲ್ಲಿ ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ’ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.