ಪಾಕ್ ಪ್ರವಾಸಕ್ಕೆ ಲಂಕಾ ಕ್ರಿಕೆಟಿಗರ ಬಹಿಷ್ಕಾರ; ಭಾರತದ ಕೈವಾಡ ಎಂದ ಸಚಿವ!

By Web Desk  |  First Published Sep 10, 2019, 4:04 PM IST

ಶ್ರೀಲಂಕಾ ಕ್ರಿಕೆಟಿಗರು ಕ್ರಿಕೆಟ್ ಸರಣಿಗಾಗಿ ಪಾಕಿಸ್ತಾನ ಪ್ರವಾಸ ಮಾಡಲು ನಿರಾಕರಿಸಿದ್ದಾರೆ. ಲಸಿತ್ ಮಲಿಂಗ, ಎಂಜಲೋ ಮ್ಯಾಥ್ಯೂಸ್ ಸೇರಿದಂತೆ 10 ಕ್ರಿಕೆಟಿಗರು ಸರಣಿ ಬಹಿಷ್ಕರಿಸಿದ್ದಾರೆ. ಆದರೆ ಲಂಕಾ ಕ್ರಿಕೆಟಿಗರ ಈ ನಿರ್ಧಾರದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನ ಸಚಿವ ಆರೋಪಿಸಿದ್ದಾನೆ. 


ಇಸ್ಲಾಮಾಬಾದ್(ಸೆ.10): ಸುರಕ್ಷತೆಯ ದೃಷ್ಟಿಯಿಂದ ಕ್ರಿಕೆಟ್ ಸರಣಿಗಾಗಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಲಸಿತ್ ಮಾಲಿಂಗ ಸೇರಿದಂತೆ 10 ಶ್ರೀಲಂಕಾ ಕ್ರಿಕೆಟಿಗರು ನಿರಾಕರಿಸಿದ್ದಾರೆ. ಸೆ.27 ರಿಂದ ಆರಂಭಗೊಳ್ಳಲಿರುವ ಏಕದಿನ ಹಾಗೂ ಟಿ20 ಸರಣಿಗೆ ಕೆಲ ದಿನ ಬಾಕಿ ಇರುವಾಗಲೇ ಲಂಕಾ ಕ್ರಿಕೆಟಿಗರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.  ಆದರೆ ಲಂಕಾ ಕ್ರಿಕೆಟಿಗರ ನಿರ್ಧಾರದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫಾವದ್ ಚೌಧರಿ ಆರೋಪಿಸಿದ್ದಾರೆ.

ಇದನ್ನೂ  ಓದಿ: ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಡೌಟ್; ನರಕ ಪ್ರವಾಸಕ್ಕೆ 10 ಲಂಕಾ ಕ್ರಿಕೆಟಿಗರ ನಕಾರ!

Latest Videos

undefined

ಭಾರತದ ವಿರುದ್ಧ ಸದಾ ಕೆಂಡಕಾರುವು ಫಾವದ್ ಚೌಧರಿ ಇದೀಗ ಲಂಕಾ ಕ್ರಿಕೆಟಿಗರ ಸರಣಿ ಬಹಿಷ್ಕಾರದ ಹಿಂದೆ ಭಾರತದ ಮಾಸ್ಟರ್ ಪ್ಲಾನ್ ಇದೆ ಎಂದಿದ್ದಾರೆ. ಈ ಕುರಿತು ಬಾಲಿಶವಾಗಿ ಟ್ವೀಟ್ ಮಾಡಿದ್ದಾರೆ. ಶ್ರೀಲಂಕಾ ಕ್ರಿಕೆಟಿಗರು ಪಾಕಿಸ್ತಾನ ಪ್ರವಾಸ ಬಹಿಷ್ಕರಿಸಿದಿದ್ದರೆ ಐಪಿಎಲ್ ಟೂರ್ನಿಯಲ್ಲಿ ಅವಕಾಶ ಕೊಡುವುದಿಲ್ಲ. ಇದು ಭಾರತ ಅತ್ಯಂತ ಕೆಳಮಟ್ಟದ ರಾಜಕೀಯ. ಚಂದ್ರನ ಅಂಗಳದಿಂದ ಕ್ರೀಡೆಯವರೆಗೂ ಭಾರತದ ಕೆಟ್ಟ ನಡೆತೆ ಎದ್ದು ಕಾಣುತ್ತಿದೆ. ಈ ಕುರಿತು ನನಗೆ ಕ್ರೀಡಾ ವೀಕ್ಷಕ ವಿವರಣೆಗಾರರು ಹೇಳಿದ್ದಾರೆ ಎಂದು ಫಾವದ್ ಟ್ವೀಟ್ ಮಾಡಿದ್ದಾರೆ.

 

Informed sports commentators told me that India threatened SL players that they ll be ousted from IPL if they don’t refuse Pak visit, this is really cheap tactic, jingoism from sports to space is something we must condemn, really cheap on the part of Indian sports authorities

— Ch Fawad Hussain (@fawadchaudhry)

ಇದನ್ನೂ  ಓದಿ: 2025ರಲ್ಲಿ ಕೊಹ್ಲಿ ಪಾಕ್ ತಂಡದ ಆರಂಭಿಕ; ನೆಟ್ಟಿಗರ ಅತಿರೇಕಕ್ಕೆ ಆಕ್ರೋಶ!

ಲಂಕಾ ಕ್ರಿಕೆಟಿಗರು ಪಾಕಿಸ್ತಾನ ಪ್ರವಾಸ ಬಹಿಷ್ಕರಿಸಲು ಭದ್ರತೆ ಭಯವೇ ಕಾರಣ. 2009ರಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಈ ವೇಳೆ ಭಯೋತ್ಪಾದರು ಲಂಕಾ ತಂಡದ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಹಲವು ಕ್ರಿಕೆಟಿಗರು ಗಾಯಗೊಂಡಿದ್ದರು. ಈ ಘಟನೆ ಬಳಿಕ ಯಾವುದೇ ದೇಶ ಪಾಕಿಸ್ತಾನ ಪ್ರವಾಸ ಮಾಡುತ್ತಿಲ್ಲ. ಆದರೆ 2015ರಲ್ಲಿ ಜಿಂಬ್ಬಾಬ್ವೆ ಹಾಗೂ ಶ್ರೀಲಂಕಾ ತಂಡ ಟಿ20 ಸರಣಿಗಾಗಿ ಪಾಕಿಸ್ತಾನ ಪ್ರವಾಸ ಮಾಡಿತ್ತು. ಇದೀಗ ಲಂಕಾದ 10 ಕ್ರಿಕೆಟಿಗರು ಪಾಕಿಸ್ತಾನ ಪ್ರವಾಸ ಮಾಡಲು ಹಿಂದೇಟು ಹಾಕಿದ್ದಾರೆ. ಇದಕ್ಕೆ ಭಾರತವನ್ನು ಗುರಿಯಾಗಿಸಲಾಗುತ್ತಿದೆ.
 

click me!