ಉಗ್ರ ರೂಪ ತಾಳಿದ ಕೋಚ್ ಶಾಸ್ತ್ರಿ; ಟೀಂ ಇಂಡಿಯಾ ಕ್ರಿಕೆಟಿಗರಿಗ ಎದುರಾಯ್ತು ಸಂಕಷ್ಟ!

By Web Desk  |  First Published Sep 10, 2019, 2:23 PM IST

ಟೀ ಇಂಡಿಯಾ ಕ್ರಿಕೆಟ್ ತಂಡದ ಕೋಚ್ ರವಿ ಶಾಸ್ತ್ರಿ 2ನೇ ಅವಧಿಗೆ ಸ್ಟ್ರಿಕ್ಟ್ ಆಗಿದ್ದಾರೆ. ಮೊದಲ ಅವಧಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಕ್ರಿಕೆಟಿಗರ ಕುರಿತು ಮೃದು ಧೋರಣೆ ತೋರಿದ್ದ ಶಾಸ್ತ್ರಿ ಉಗ್ರರೂಪ ತಾಳಿದ್ದಾರೆ. ಶಾಸ್ತಿ ಹೊಸ ಅವತಾರಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು ಹೈರಾಣಾಗಿದ್ದಾರೆ. 


ಮುಂಬೈ(ಸೆ.10): ಟೀಂ ಇಂಡಿಯಾ ಕೋಚ್ ಆಗಿ ಪುನರ್ ಆಯ್ಕೆಯಾಗಿರುವ ರವಿ ಶಾಸ್ತ್ರಿ 2ನೇ ಅವಧಿಯ ಮೊದಲ ಸವಾಲು ಸೌತ್ ಆಫ್ರಿಕಾ ವಿರುದ್ದದ ಸರಣಿ. ಸೆ.15 ರಿಂದ ಟೂರ್ನಿ ಆರಂಭಗೊಳ್ಳಲಿದೆ. 2ನೇ ಬಾರಿ ಕೋಚ್ ಹುದ್ದೆ ಅಲಂಕರಿಸಿರುವ ಶಾಸ್ತ್ರಿ ತಮ್ಮ ಹಿಡಿತ ಬಿಗಿಗೊಳಿಸಿದ್ದಾರೆ.  ಇದು ಹಲವು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸಂಕಷ್ಟ ತಂದೊಡ್ಡಿದೆ.

ಇದನ್ನೂ ಓದಿ: ಯೋ-ಯೋ ಟೆಸ್ಟ್ ರಾಯುಡು ಫೇಲ್-ಮತ್ತೊರ್ವ ಸಿಎಸ್‌ಕೆ ಆಟಗಾರನಿಗೆ ಚಾನ್ಸ್

Tap to resize

Latest Videos

ಕೋಚ್ ಶಾಸ್ತ್ರಿ ಇದೀಗ ಭಾರತ ತಂಡ ಪ್ರತಿನಿಧಿಸುವ ಆಟಗಾರರ ಯೋ-ಯೋ ಟೆಸ್ಟ್ ಪ್ರಮಾಣವನ್ನು ಹೆಚ್ಚಿಸಿದ್ದಾರೆ. ತಂಡಕ್ಕೆ ಆಯ್ಕೆಯಾಗುವ ಆಟಗಾರರು ಯೋ-ಯೋ ಟೆಸ್ಟ್ ಪಾಸ್ ಆಗಿರಬೇಕು.   ಸದ್ಯ ಟೀಂ ಇಂಡಿಯಾಗೆ ಎಂಟ್ರಿ ಕೊಡಲು 16.1 ಲೆವಲ್ ಯೋ-ಯೋ ಟೆಸ್ಟ್ ಪಾಸ್ ಆಗಿರಬೇಕು. ಇನ್ಮುಂದೆ ಈ ಪ್ರಮಾಣವನ್ನು 17ಕ್ಕೆ ಹೆಚ್ಚಿಸಲು ಶಾಸ್ತ್ರಿ ಪ್ರಸ್ತಾವನೆ ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ಯೋ ಯೋ ಟೆಸ್ಟ್ ಫೇಲ್ ಆದ ಟೀಂ ಇಂಡಿಯಾದ ಐವರು ಆಟಗಾರರಿವರು..!

ಸೆ.15 ರಿಂದ ಆರಂಭವಾಗಲಿರುವ ಸೌತ್ ಆಫ್ರಿಕಾ ವಿರುದ್ಧ ಸರಣಿಯಿಂದಲೇ ಹೊಸ ಯೋ-ಯೋ ಟೆಸ್ಟ್ ಜಾರಿಯಾಗಲಿದೆ. ಭಾರತ ತಂಡ ಪ್ರತಿನಿಧಿಸುವ ಪ್ರತಿಯೊಬ್ಬರು ಅತ್ಯಂತ ಫಿಟ್ ಆಗರಬೇಕು ಅನ್ನೋದು ಶಾಸ್ತ್ರಿ ಅಭಿಮತ. ಈಗಾಗಲೇ ಹಲವರು ಯೋ-ಯೋ ಟೆಸ್ಟ್ ಪಾಸ್ ಆಗದ ಕಾರಣ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.

click me!