
ಮುಂಬೈ(ಫೆ.18): ಪುಲ್ವಾಮ ಭಯೋತ್ವಾದಕ ದಾಳಿ ಬಳಿಕ ಪಾಕಿಸ್ತಾನ ಒಂಟಿಯಾಗಿದೆ. ಭಾರತ ನೀಡುತ್ತಿರುವ ಒಂದೊಂದೆ ಹೊಡೆತದಿಂದ ಪಾಕ್ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಪಾಕಿಸ್ತಾನ ಸೂಪರ್ ಲೀಗ್(PSL)ಕ್ರಿಕೆಟ್ ಟೂರ್ನಿ ಭಾರತದಲ್ಲಿ ಪ್ರಸಾರ ನಿರ್ಬಂಧಿಸಿದೆ. ಇದರ ಬೆನ್ನಲ್ಲೇ PSL ಟೂರ್ನಿಯ ನಿರ್ಮಾಣ ಜವಾಬ್ದಾರಿಯಿಂದ IMG ರಿಲಯನ್ಸ್ ಹಿಂದೆ ಸರಿದಿದೆ.
ಇದನ್ನೂ ಓದಿ: ಪುಲ್ವಾಮ ದಾಳಿ: ಭಾರತದಲ್ಲಿ ಪಾಕಿಸ್ತಾನ ಲೀಗ್ ಕ್ರಿಕೆಟ್ ಪ್ರಸಾರ ನಿರ್ಬಂಧ!
ಪಾಕಿಸ್ತಾನ ಸೂಪರ್ ಲೀಗ್ ಕ್ರಿಕೆಟ್ ಟೂರ್ನಿ ಪ್ರಸಾರ ಸಂಪೂರ್ಣ ಜವಾಬ್ದಾರಿ IMG ರಿಲಯನ್ಸ್ ಹೊಂದಿದೆ. ಪಾಕಿಸ್ತಾನ ಸೇರಿದಂತೆ ವಿವಿದ ದೇಶಗಳ ವಾಹಿನಗಳಲ್ಲಿ ಟೂರ್ನಿ ಪ್ರಸಾರ ಮಾಡಲು ಬೇಕಾದ ತಾಂತ್ರಿಕ ಸಹಕಾರ, ಉದ್ಯೋಗಿಗಳು, ಕ್ಯಾಮಾರಮ್ಯಾನ್, ಸ್ಯಾಟಲೈಟ್ ನಿರ್ವಹಣೆ ಸೇರಿದಂತೆ ಎಲ್ಲಾ ರೀತಿಯ ಬ್ರಾಡ್‌ಕಾಸ್ಟ್ ರೈಟ್ಸ್ IMG ರಿಲಯನ್ಸ್ ಕೈಯಲ್ಲಿದೆ. ಇದೀಗ ಪುಲ್ವಾಮ ದಾಳಿ ಬಳಿಕ IMG ರಿಲಯನ್ಸ್ PSL ನಿಂದ ಹಿಂದೆ ಸರಿದಿದೆ.
ಇದನ್ನೂ ಓದಿ: ಪುಲ್ವಾಮ ದಾಳಿ: ಪಾಕಿಸ್ತಾನ ಲೀಗ್ ಕ್ರಿಕೆಟ್ ಲೈವ್ ಸ್ಕೋರ್‌ಗೂ ಬ್ರೇಕ್!
ಪುಲ್ವಾಮ ದಾಳಿಯಿಂದ 40ಕ್ಕೂ ಹೆಚ್ಚು ಭಾರತೀಯ CRPF ಯೋಧರು ಹುತಾತ್ಮರಾಗಿದ್ದಾರೆ. ಈ ಸಂದರ್ಭದಲ್ಲಿ ನಮಗೆ ವಾಣಿಜ್ಯ ವ್ಯವಹಾರಗಳಿಗಿಂತ ದೇಶವೇ ಮುಖ್ಯ ಎಂದು IMG ರಿಲಯನ್ಸ್ ಹೇಳಿದೆ. PSL ಟೂರ್ನಿ ಪ್ರಸಾರವನ್ನ ಭಾರತದಲ್ಲಿ ಸ್ಟಾರ್ ಸ್ಪೋರ್ಟ್‌ನ ಡಿ ಸ್ಪೋರ್ಟ್ ವಾಹಿನಿ ಮಾಡುತ್ತಿತ್ತು. ಇದೀಗ ಈ ವಾಹಿನಿ ಪಾಕ್ ಕ್ರಿಕೆಟ್ ಲೀಗ್ ಪ್ರಸಾರ ನಿರ್ಬಂಧಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.