ಈ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಗೆ ಪಾಕ್ ಶಾಕ್ ನೀಡಲಿದೆ ಎಂದ ಇಂಜಮಾಮ್

By Web DeskFirst Published May 27, 2019, 11:43 AM IST
Highlights

ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧ ಪಾಕಿಸ್ತಾನ ತಂಡವು ಒಮ್ಮೆಯೂ ಗೆಲುವು ಸಾಧಿಸಿಲ್ಲ. ಆದರೆ ಈ ಬಾರಿ ಪಾಕಿಸ್ತಾನ ತಿರುಗೇಟು ನೀಡಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಆಯ್ಕೆ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ಇಂಜಮಾಮ್ ಉಲ್-ಹಕ್ ಹೇಳಿದ್ದಾರೆ. ಮತ್ತೇನಂದ್ರು ನೀವೇ ನೋಡಿ...

ಕರಾಚಿ(ಮೇ.27): ಪ್ರಸಕ್ತ ಸಾಲಿನ ವಿಶ್ವಕಪ್’ನಲ್ಲಿ ಪಾಕಿಸ್ತಾನ ತಂಡ, ಈ ಬಾರಿ ಭಾರತ ವಿರುದ್ಧ ಈ ಹಿಂದಿನ ಆರು ವಿಶ್ವಕಪ್ ಪಂದ್ಯಗಳ ನಿರಂತರ ಸೋಲಿಗೆ ಬ್ರೇಕ್ ಹಾಕಲಿದೆ ಎಂದು ಪಾಕ್ ಆಯ್ಕೆ ಸಮಿತಿ ಮುಖ್ಯಸ್ಥ ಇಂಜಮಾಮ್ ಉಲ್-ಹಕ್ ಹೇಳಿದ್ದಾರೆ. 

ವಿಶ್ವಕಪ್’ನ ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ... 

ಪ್ರತಿಷ್ಠಿತ ವಿಶ್ವಕಪ್ ಟೂರ್ನಿ ಮೇ 30ರಿಂದ ಆರಂಭಗೊಳ್ಳಲಿದ್ದು, ಜೂನ್ 16ರಂದು ಭಾರತ-ಪಾಕಿಸ್ತಾನ ಸೆಣಸಲಿವೆ. ಈಗಾಗಲೇ ಉಭಯ ತಂಡಗಳು ಪೂರ್ವ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ವಿಶ್ವಕಪ್’ನಲ್ಲಿ ಭಾರತ ತಂಡದ ವಿರುದ್ಧ ಪಾಕಿಸ್ತಾನ ಇದುವರೆಗೂ ಗೆಲುವು ಸಾಧಿಸಿದ್ದೇ ಇಲ್ಲ. ಆದರೆ ಅನುಭವಿ ಆಟಗಾರನ್ನು ಹೊಂದಿರುವ ಪಾಕ್ ತಂಡ, ಈ ಬಾರಿ ಭಾರತಕ್ಕೆ ಸೋಲುಣಿಸುವ ವಿಶ್ವಾಸವಿದೆ ಎಂದಿದ್ದಾರೆ. ಈ ಬಾರಿ ಮ್ಯಾಂಚೆಸ್ಟರ್’ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತದ ವಿರುದ್ಧ ಗೆಲ್ಲುವ ಮೂಲಕ ಸೋಲಿನ ಓಟಕ್ಕೆ ಪಾಕ್ ಬ್ರೇಕ್ ಹಾಕಲಿದೆ ಎಂದರು.  

ಪಾಕಿಸ್ತಾನ ತಂಡವು ಕಳೆದ 11 ಪಂದ್ಯಗಳಲ್ಲಿ ಒಂದೇ ಒಂದು ಗೆಲುವು ದಾಖಲಿಸಲು ಸಾಧ್ಯವಾಗಿಲ್ಲ. ಇದೀಗ ಮೇ.31ರಂದು ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಪಾಕಿಸ್ತಾನ ತಂಡವು ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.  

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...



 

click me!