
ಹ್ಯಾಮಿಲ್ಟನ್: ಗೆಲುವಿನತ್ತ ಸಾಗುತ್ತಿದ್ದ ಪಾಕಿಸ್ತಾನ ಒಂದೇ ಸೆಷನ್'ನಲ್ಲಿ 9 ವಿಕೆಟ್ ಕಳೆದುಕೊಂಡು ಹೀನಾಯ ಸೋಲನುಭವಿಸಿದೆ. ಮೊನ್ನೆ ಮುಕ್ತಾಯಗೊಂಡ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ ಎರಡನೇ ಪಂದ್ಯದಲ್ಲಿ ಈ ದಾಖಲೆ ಬಂದಿದೆ. ಗೆಲ್ಲಲು 369 ರನ್ ಗುರಿ ಪಡೆದ ಪಾಕಿಸ್ತಾನ ಒಂದು ಹಂತದಲ್ಲಿ ಒಂದು ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತ್ತು. ಬೃಹತ್ ಗುರಿಯನ್ನು ಪಾಕಿಸ್ತಾನ ಬೆನ್ನಟ್ಟಿ ಗೆಲುವು ಸಾಧಿಸಬಹುದೆಂಬ ನಿರೀಕ್ಷೆಗಳು ಗರಿಗೆದರಿದ ಸಂದರ್ಭವದು. ಆದರೆ, ತಂಡದ ಸ್ಕೋರು 181 ಇದ್ದಾಗ ಸ್ಯಾಮಿ ಅಸ್ಲಮ್ ಅವರು 3ನೇಯವರಾಗಿ ನಿರ್ಗಮಿಸಿದ ಬಳಿಕ ಪಾಕಿಸ್ತಾನದ ನಾಟಕೀಯ ಕುಸಿತ ಆರಂಭವಾಯಿತು. 230 ರನ್'ಗೆ ಪಾಕ್ ಇನ್ನಿಂಗ್ಸ್ ಮುಕ್ತಾಯಗೊಂಡಿತು. ಒಂದೇ ಸೆಷೆನ್'ನಲ್ಲಿ ಪಾಕಿಸ್ತಾನದ 9 ವಿಕೆಟ್'ಗಳು ಪತನಗೊಂಡವು. 99 ರನ್ ಅಂತರದಲ್ಲಿ ಪಾಕ್'ನ ಕೊನೆಯ 9 ವಿಕೆಟ್'ಗಳು ಉರುಳಿದವು.
ಪಂದ್ಯದ ಕೊನೆಯ ದಿನದ ಒಂದೇ ಸೆಷೆನ್'ನಲ್ಲಿ ಅತೀ ಹೆಚ್ಚು ವಿಕೆಟ್'ಗಳನ್ನು ಪಡೆದ ವಿಶ್ವದಾಖಲೆ ಕಿವೀಸ್ ಬಳಗಕ್ಕೆ ಸಿಕ್ಕಿತು. ವಿಶ್ವದಾಖಲೆ ಜೊತೆಗೆ ಪಾಕ್ ವಿರುದ್ಧದ 2 ಟೆಸ್ಟ್ ಪಂದ್ಯಗಳ ಸರಣಿಯನ್ನು 2-0ಯಿಂದ ಕ್ಲೀನ್ ಸ್ವೀಪ್ ಮಾಡಿದ ಸಂಭ್ರಮ ನ್ಯೂಜಿಲೆಂಡ್'ನದ್ದು.
ಬಾಂಗ್ಲಾದೇಶ ವಿರುದ್ಧ ಢಾಕಾದಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್ ತಂಡ 10 ವಿಕೆಟ್'ಗಳನ್ನು ಕಳೆದುಕೊಂಡಿತ್ತು. ಆದರೆ, ಅದು ಆಟದ ಕೊನೆಯ ದಿನವಾಗಿರಲಿಲ್ಲ. ಅಡಿಲೇಡ್'ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ಒಂದೇ ಸೆಷನ್'ನಲ್ಲಿ 8 ವಿಕೆಟ್'ಗಳನ್ನು ಕಳೆದುಕೊಂಡಿತ್ತು.
ಸ್ಕೋರು ವಿವರ:
ನ್ಯೂಜಿಲೆಂಡ್ 271 ಮತ್ತು 313/5(ಡಿಕ್ಲೇರ್)
ಪಾಕಿಸ್ತಾನ 216 ಮತ್ತು 230 ರನ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.