ಗಾಯಗೊಂಡ ಹಾರ್ದಿಕ್ ಇಂಗ್ಲೆಂಡ್ ಸರಣಿಗೆ ಅಲಭ್ಯ?

Published : Nov 29, 2016, 11:36 AM ISTUpdated : Apr 11, 2018, 12:58 PM IST
ಗಾಯಗೊಂಡ ಹಾರ್ದಿಕ್ ಇಂಗ್ಲೆಂಡ್ ಸರಣಿಗೆ ಅಲಭ್ಯ?

ಸಾರಾಂಶ

ಹಾರ್ದಿಕ್ ಅವರ ಗಾಯದ ತೀವ್ರತೆ ಹೆಚ್ಚಿರುವುದರಿಂದ ಭುಜದ ಮೂಳೆ ಮುರಿದಿರುವ ಸಾಧ್ಯತೆಯಿದೆ ಎಂದು ತಂಡದ ಫಿಸಿಯೋ ಹೇಳಿದ್ದಾರೆ.

ಮೊಹಾಲಿ(ನ.29): ಭಾರತದ ಆಲ್ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ನೆಟ್ ಅಭ್ಯಾಸದ ವೇಳೆ ಭುಜದ ನೋವಿಗೆ ತುತ್ತಾಗಿದ್ದಾರೆ. ಹೀಗಾಗಿ ಹಾರ್ದಿಕ್ ಕನಿಷ್ಠ 6 ವಾರಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್’ನಿಂದ ದೂರ ಉಳಿಯಲಿದ್ದಾರೆ.

ಹಾರ್ದಿಕ್ ಅವರ ಗಾಯದ ತೀವ್ರತೆ ಹೆಚ್ಚಿರುವುದರಿಂದ ಭುಜದ ಮೂಳೆ ಮುರಿದಿರುವ ಸಾಧ್ಯತೆಯಿದೆ ಎಂದು ತಂಡದ ಫಿಸಿಯೋ ಹೇಳಿದ್ದಾರೆ. ಹೀಗಾಗಿ ಮುಂದಿನ ಜನವರಿ 15ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹಾರ್ದಿಕ್ ಅಲಭ್ಯವಾಗುವ ಸಾಧ್ಯತೆಯಿದೆ.

ಮೊಹಾಲಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಹಾರ್ದಿಕ್ ಅಭ್ಯಾಸ ನಡೆಸುವ ವೇಳೆ ತೀವ್ರ ಗಾಯಕ್ಕೆ ತುತ್ತಾಗಿದ್ದರು. ಹಾರ್ದಿಕ್ ಆದಷ್ಟು ಶೀಘ್ರದಲ್ಲಿ ಚೇತರಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ಪ್ಯಾಟ್‌ ಕಮಿನ್ಸ್ ಬರುವವರೆಗೂ ಈ ಬಿಗ್ ಹಿಟ್ಟರ್‌ಗೆ ನಾಯಕತ್ವ ಪಟ್ಟ ಕಟ್ಟಿದ ಸನ್‌ರೈಸರ್ಸ್ ಹೈದರಾಬಾದ್!
T20 Rankings: ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಸಂಜು ಸ್ಯಾಮ್ಸನ್ ಮುಂಬಡ್ತಿ, ಅಭಿಷೇಕ್ ಶರ್ಮಾ ನಂ.1 ಸ್ಥಾನ ಭದ್ರ!